Karnataka: ಬಹಳಷ್ಟು ವರ್ಷಗಳಿಂದ ನಮ್ಮ ರಾಜ್ಯವಾದ ಕರ್ನಾಟಕಕ್ಕೂ (Do we have Cauvery problem) ಹಾಗು ಪಕ್ಕದ ರಾಜ್ಯವಾದ ತಮಿಳುನಾಡಿಗೂ (Tamilnadu) ಈ ಕಾವೇರಿ
ವಿಚಾರದಲ್ಲಿ ಜಗಳ ನಡೆಯುತ್ತಲೇ ಬಂದಿದೆ. ಯಾವ ಪಕ್ಷಗಳು ರಾಜಕೀಯಕ್ಕೆ ಬಂದರೂ ಇದು ಬಗೆ ಹರಿಯದ ಸಮಸ್ಯೆಯಾಗಿ ಉಳಿದಿರುವುದಲ್ಲದೆ ಇದಕ್ಕೆ ಸಂಬಂಧಪಟ್ಟ ಹಾಗೆ ಜಗಳಗಳು,
ಹೋರಾಟಗಳು, ಗಲಾಟೆಗಳು (Do we have Cauvery problem) ಹೆಚ್ಚುತ್ತಲೇ ಹೋಗುತ್ತಿವೆ.

ಈ ರೀತಿಯ ಪರಿಸ್ಥಿಯ ಬಗ್ಗೆ ಎಂದಾದರೂ ನಾವೆಲ್ಲಾ ಸಮಾಧಾನವಾಗಿ ಯೋಚನೆ ಮಾಡಿದ್ದೀವಾ? ಯಾವ ಕಾರಣಕ್ಕಾಗಿ ಈ ಕಾವೇರಿ ನೀರಿನ ವಿವಾದ ಬಗೆ ಹರಿಯುತ್ತಿಲ್ಲ ಎಂದು ಖಂಡಿತಾವಾಗಿಯೂ
ಯೋಚನೆ ಮಾಡುವುದಿರಲಿ ನಮ್ಮಲ್ಲಿ ನಾವೇ ಪ್ರಶ್ನೆಯನ್ನು ಕೇಳಿಯು ಸಹ ಇರುವುದಿಲ್ಲ. ನೀರನ್ನು ಯಾಕೆ ಬಿಡಬೇಕು ಎಂಬ ಪ್ರಶ್ನೆ ಮಾತ್ರ ನಮ್ಮಲ್ಲಿ ಉದ್ಭವಿಸಿದೆ.
ಸತ್ಯಾಸತ್ಯತೆ ನೋಡುವುದಾದರೆ ಇಲ್ಲಿ ಇರುವುದು ಕಾವೇರಮ್ಮನ ಸಮಸ್ಯೆ ಅಲ್ಲ,ಇರುವುದು ನೀರಿನ ಸಮಸ್ಯೆ ಆದರೆ ನಾವೆಲ್ಲರೂ ಈ ನೀರಿನ ಸಮಸ್ಯೆಯನ್ನು ಕಾವೇರಿ (Kaveri) ನೀರಿಗೆ ತಳುಕು ಹಾಕಿ
ನೋಡುತ್ತಿರುವುದರಿಂದ ಇದು ನಮಗೆ ಕಾವೇರಿ ಸಮಸ್ಯೆಯಾಗಿ ಕಾಣಿಸುತ್ತಿರುವುದಲ್ಲದೆ, ನೆರೆ ರಾಜ್ಯಕ್ಕೆ ಬಿಡುತ್ತಿರುವ ನೀರಿನ ಬಗ್ಗೆಯು ನಮ್ಮಲ್ಲಿ ಆಕ್ರೋಶಗಳು ಉಂಟಾಗುತ್ತಿದೆ.
ಇಲ್ಲಿ ಎರಡು ರಾಜ್ಯಗಳಿಗೂ ಇರುವುದು ನೀರಿನ ಸಮಸ್ಯೆ ಹೊರತು ಕಾವೇರಿ ಸಮಸ್ಯೆ ಖಂಡಿತವಾಗಿಯೂ ಅಲ್ಲ. ಹಾಗಾಗಿ ನಾವು ಆಲೋಚನೆ ಮಾಡಬೇಕಾದ ವಿಷಯವೆಂದರೆ ನಮಗೆ ಬೇಕಾಗಿರುವುದು ನೀರು
ಆದರೆ ಅದು ಕಾವೇರಿ ನೀರೇ ಆಗಬೇಕೆಂದು ಏನು ಇಲ್ಲ. ಸದ್ಯಕ್ಕೆ ಇದೊಂದೇ ಮೂಲ ಆಗಿರುವುದರಿಂದ ನಮ್ಮೆರಡೂ ರಾಜ್ಯಗಳು ಈ ಕಾವೇರಿಗಾಗಿ ಮುಗಿಬಿದ್ದಿದ್ದಾರೆ ಅಷ್ಟೇ.
ಒಂದು ವೇಳೆ ಸಂಪೂರ್ಣವಾಗಿ ಕಾವೇರಮ್ಮನ ಮಡಿಲು ಬತ್ತಿ ಹೋದರೆ? ಎಂದೆಂದಿಗೂ ಹಾಗಾಗದಿರಲಿ ಎಂಬುದೇ ನನ್ನ ಆಶಯ. ಆದರೂ ಕಾವೇರಿ ನೀರು ಬತ್ತಿ ಹೋಯಿತು ಎಂದು ಅಂದುಕೊಳ್ಳೋಣ,
ಆಗಲೂ ಇದೆ ನೀರಿನ ಸಮಸ್ಯೆ ನಮ್ಮಲ್ಲಿ ಉಂಟಾಗುತ್ತೆ. ಆಗ ಅದು ಕಾವೇರಿ ಸಮಸ್ಯೆ ಆಗಿರುವುದಿಲ್ಲ ಬದಲಾಗಿ ನೀರಿನ ಸಮಸ್ಯೆಯಾಗಿರುತ್ತೆ. ಹಾಗಾಗಿ ಈಗಲೂ ನಮಗೆ ಇರುವುದು ಕಾವೇರಿ ಸಮಸ್ಯೆ
ಅಲ್ಲ, ನೀರಿನ ಸಮಸ್ಯೆ ಅಷ್ಟೇ ಆದ್ದರಿಂದ ನಾವೇ ಇದಕ್ಕೆ ಪರಿಹಾರ ಹುಡುಕಿಕೊಳ್ಳಬೇಕು .
ಈ ಕಾವೇರಿ ನೀರಿಗಾಗಿ ನಾವೆಲ್ಲರೂ ಕಾವೇರಿ ವಿವಾದ, ಕಾವೇರಿ ನದಿ ನೀರಿನ ವಿವಾದ, ಬಂದ್ (Bandh), ಮುಷ್ಕರ, ಹಾಗೂ ಗಲಾಟೆಗಳು, ಮನಸ್ತಾಪಗಳು ಹೀಗೆ ಬರೀ ನೀರಿನ ಸಮಸ್ಯೆಯನ್ನು
ಕಾವೇರಿ ಸಮಸ್ಯೆಯನ್ನಾಗಿಸಿಕೊಂಡು ಕೇವಲ ಕಾವೇರಮ್ಮನ ಕುರಿತು ಯೋಚಿಸುವಂತೆ ಆಗಿ ಬಿಟ್ಟಿದ್ದೇವೆ. ಇದೆ ರೀತಿ ನಾವು ಕಾವೇರಿ ನೀರು ಕೊಡೂದಿಲ್ಲ ಎಂದು ತಮಿಳುನಾಡಿನವರು ನಾವು
ಬಿಡುವುದಿಲ್ಲ ಎಂದು ಹೋರಾಟಗಳನ್ನು ನಡೆಸುತ್ತಿದ್ದರೆ ಈ ಕಾವೇರಿ ಸಮಸ್ಯೆ ಬಗೆಹರಿಯುವುದಿರಲಿ ಈ ವಿವಾದಕ್ಕೆ ಎಂದಿಗೂ ಪರಿಹಾರವು ಸಿಗುವುದಿಲ್ಲ.

ಈ ರೀತಿಯಾಗಿ ಯೋಚಿಸುವುದಕ್ಕಿಂತ ಒಮ್ಮೆ ನಾವೆಲ್ಲರೂ ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಯೋಚಿಸಿದರೆ ಒಳ್ಳೆಯದು. ಹೌದು, ಈ ಎರಡು ರಾಜ್ಯಗಳಿಗೆ ಬೇಕಾಗಿರುವ
ನೀರನ್ನು ಕಾವೇರಿ ನದಿಯಿಂದ ಮಾತ್ರ ಪೂರೈಸಿಕೊಳ್ಳಲು ಸಾಧ್ಯವಿಲ್ಲ ಬದಲಾಗಿ ಈ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಲು ಬೇರೆ ಯಾವುದಾದರು ನೀರಿನ ಮೂಲ ಕಂಡುಕೊಳ್ಳುವ, ನೀರಿನ ಮೂಲ
ಸೃಷ್ಟಿಸಿಕೊಳ್ಳುವ, ನೀರನ್ನು ಮಿತವಾಗಿ ಬಳಸುವುದು ಅಥವಾ ನೀರನ್ನು ಉಳಿಸಿ ಸದ್ಬಳಕೆ ಮಾಡುವ ಪರ್ಯಾಯ ಮಾರ್ಗವನ್ನು ಕಂಡುಕೊಂಡರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದೇನೋ….
ನೀರಿನ ಸದ್ಬಳಕೆ:
೧. ನೀರು ಯಾವ ರೀತಿ ಪೋಲಾಗುತ್ತಿದೆ ಎನ್ನುವ ಕುರಿತು ವಿಚಾರ ಮಾಡಬೇಕು.
೨. ದಿನನಿತ್ಯ ಇಷ್ಟೇ ಪ್ರಮಾಣದಲ್ಲಿ ನೀರಿನ ಬಳಕೆ ಮಾಡುವುದು ಉತ್ತಮ.
೩. ಕೃಷಿ ಭೂಮಿಗೆ ಎಷ್ಟು ಪ್ರಮಾಣದ ನೀರು ಬೇಕೋ ಅಷ್ಟೇ ಪ್ರಮಾಣದಲ್ಲಿ ನೀರಿನ ಬಳಕೆ.
೪. ಮನೆಗಳಲ್ಲಿ ಮಿತವಾಗಿ ನೀರಿನ ಬಳಕೆ ಮಾಡುವುದು ಒಳ್ಳೆಯದು.
೫. ನೀರು ಪೋಲಾಗುತ್ತಿದ್ದರೆ ನೋಡಿಯೂ ನೋಡದಂತೆ ನಮಗೇಕೆ ಎನ್ನುವುದನ್ನು ಬಿಡಬೇಕು.
ದಿನನಿತ್ಯ ಬಳಸುವ ನೀರನ್ನ ನಾವು ಮನಬಂದಂತೆ ಖರ್ಚು ಮಾಡುತ್ತಿದ್ದೇವೆ ಮತ್ತು ದುರ್ಬಳಕೆ ಮಾಡುತ್ತಿದ್ದೇವೆ ಹಾಗಾಗಿ ನಾವೇ ಸರಿಯಾದ ನಿರ್ಧಾರ ತೆಗೆದುಕೊಂಡು ಎರಡೂ ರಾಜ್ಯಗಳಲ್ಲಿ ಪರ್ಯಾಯ
ನೀರಿನ ಮೂಲ ಯಾವುದು, ಹೊಸದಾಗಿ ಯಾವ ಮೂಲದಿಂದ ನೀರನ್ನು ಪಡೆಯಬಹುದು ಎಂದು ಯೋಚನೆ ಮಾಡಿದರೆ ಈ ಸಮಸ್ಯೆಗೆ ಮುಕ್ತಿ ದೊರೆಯಬಹುದು.
ಆಗ ನಮ್ಮೆರಡೂ ರಾಜ್ಯಗಳಲ್ಲಿಯೂ ಈ ಕಾವೇರಿ ಸಮಸ್ಯೆ ಇರುವುದಿರಲಿ ಇದರ ಕುರಿತು ಯೋಚನೆಯು ಸಹ ಮಾಡುವುದಿಲ್ಲ ಅನ್ನಿಸುತ್ತೆ. ನೈಸರ್ಗಿಕವಾಗಿ ದೊರೆತಿರುವ ಪನ್ನೀರು ನಮ್ಮ ಕಾವೇರಿ ಅವಳು
ಅವಳ ಪಾಡಿಗೆ ಹರಿಯುತ್ತಿರುತ್ತಾಳೆ. ಜೊತೆಗೆ ಅವಳಿಗಾಗಿ ಕಿತ್ತಾಡುವ ನೀರಿನ ಸಮಸ್ಯೆ ಮಾತ್ರವಲ್ಲಅವಳ ಬಗ್ಗೆ ಮಾತನಾಡುವ ಅವಶ್ಯಕತೆ ಕೂಡ ಒದಗಿಬರುವುದಿಲ್ಲ.
ಇದನ್ನು ಓದಿ: 2029ಕ್ಕೆ ‘ಒಂದು ದೇಶ, ಒಂದು ಎಲೆಕ್ಷನ್’: ಕಾನೂನು ಆಯೋಗದಿಂದ ಬುಧವಾರ ಅಂತಿಮ ವರದಿ
- ಭವ್ಯಶ್ರೀ ಆರ್.ಜೆ