ರೋಗಿಗೆ ತನ್ನ ರಕ್ತವನ್ನೇ ದಾನ ಮಾಡಿ ಜೀವ ಉಳಿಸಿದ ವೈದ್ಯ ಶಶಾಂಕ್ ; ನೆಟ್ಟಿಗರಿಂದ ಶ್ಲಾಘನೆ

Dehrudan : ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಅಥವಾ ವೈದ್ಯರು ರೋಗಿಗಳಿಗೆ ಅಥವಾ ರೋಗಿಗಳ ಕುಟುಂಬಕ್ಕೆ ತಾವೇ ರಕ್ತದ ಗುಂಪನ್ನು(Doctor Gave Blood To Patient) ಹೊಂದಿಸಲು ಹೇಳುತ್ತಾರೆ.

ರೋಗಿಯ ಕುಟುಂಬದ ಸದಸ್ಯರು ರಕ್ತದ ಗುಂಪನ್ನು ಹೊಂದಿಸಬೇಕು,

ಇಲ್ಲ ಅವರಿಗೆ ತಿಳಿದ ವ್ಯಕ್ತಿ(Doctor Gave Blood To Patient) ಅಥವಾ ಅದೇ ರಕ್ತದ ಗುಂಪನ್ನು ಹೊಂದುವ ಯಾವುದೇ ವ್ಯಕ್ತಿಯಾದರು ರಕ್ತವನ್ನು ನೀಡಬಹುದು ಎಂದು ಹೇಳುತ್ತಾರೆ.

ವೈದ್ಯರು(Doctors) ಅಥವಾ ಆಸ್ಪತ್ರೆ ಸಿಬ್ಬಂದಿಯವರು ರೋಗಿಗೆ ಸಂಬಂಧಿಸಿದ ರಕ್ತದ ಗುಂಪನ್ನು ತಂದುಕೊಡಲು ಹೇಳುತ್ತಾರೆ.

ಜೊತೆಗೆ ತಮಗೆ ತಿಳಿದಿರುವ ಹತ್ತಿರದ ಬ್ಲಡ್ ಬ್ಯಾಂಕ್ ನಿಂದ(Blood Bank) ತರಲು ಸೂಚಿಸುತ್ತಾರೆಯೇ ವಿನಃ ತಾವೇ ರೋಗಿಗೆ ಅಗತ್ಯವಾದ ರಕ್ತದ ಗುಂಪು ತಮ್ಮಲ್ಲೇ ಇದ್ದರು ಕೆಲವೊಮ್ಮೆ ಕೊಡುವ ಮನಸ್ಸನ್ನು ಮಾಡುವುದಿಲ್ಲ!

ಇದನ್ನೂ ಓದಿ : https://vijayatimes.com/hdk-apology-to-ramesh/

ಆದ್ರೆ, ಇಲ್ಲೊಬ್ಬ ವೈದ್ಯರು ರೋಗಿಯ ರಕ್ತದ ಗುಂಪನ್ನು ತಿಳಿದು, ಯಾವುದೇ ಬ್ಲಡ್ ಬ್ಯಾಂಕ್ಗೂ ಕಳಿಸದೇ, ಸಮಯವನ್ನು ವ್ಯರ್ಥ ಮಾಡದೇ ಸ್ವತಃ ತಮ್ಮ ರಕ್ತವನ್ನು ರೋಗಿಗೆ ನೀಡಿದ್ದಾರೆ.

ತಮ್ಮ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ರಕ್ತದ ಅಗತ್ಯವಿದ್ದ ಕಾರಣ ರೋಗಿಯ ಬ್ಲಡ್ ಗ್ರೂಪ್ ಹಾಗೂ ತಮ್ಮ ಬ್ಲಡ್ ಗ್ರೂಪ್ ಎರಡು ಹೊಂದಾಣಿಕೆಯಾದ ಕಾರಣ,

ಇದನ್ನೂ ಓದಿ : https://vijayatimes.com/fifa-love-band/

ಕೂಡಲೇ ಡೆಹ್ರಾಡೂನ್‌ನ ಡೂನ್ ಪಿಜಿ ವೈದ್ಯಕೀಯ ಕಾಲೇಜಿನ ಮೂಳೆ ಶಸ್ತ್ರಚಿಕಿತ್ಸೆಯ ವೈದ್ಯರು ತಮ್ಮ ರಕ್ತವನ್ನು ರೋಗಿಗೆ ದಾನ ಮಾಡಿದ್ದಾರೆ,

ರೋಗಿಯು ಆಳವಾದ ಗುಂಡಿಗೆ ಬಿದ್ದ ಕಾರಣ ಅವರ ಸ್ಥಿತಿ ಗಂಭೀರವಾಗಿತ್ತು. ರೋಗಿಯನ್ನು ಪಿಜಿ ವೈದ್ಯಕೀಯ ಕಾಲೇಜಿಗೆ ಸ್ಥಳೀಯರು ಶೀಘ್ರವೇ ದಾಖಲಿಸಿದ್ದಾರೆ.

ರೋಗಿಯವರ ಎದೆ, ಎಡಗೈ ಮತ್ತು ತೊಡೆಯ ಮೂಳೆಯಲ್ಲಿ ಮುರಿತದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ರೋಗಿಯನ್ನು ಮೂರು ದಿನಗಳ ಕಾಲ ಐಸಿಯುನಲ್ಲಿ ಇರಿಸಿದ ನಂತರ, ವೈದ್ಯರು ಅವರ ತೊಡೆಯ ಮೂಳೆಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಆದ್ರೆ, ರಕ್ತದ ಕೊರತೆಯಿಂದ ರೋಗಿಗೆ ಆಪರೇಷನ್ ಮಾಡಲು ಮುಂದಾಗಲಿಲ್ಲ.

ತದನಂತರ, ರೋಗಿಯ ಮಗಳು ತಮ್ಮ ರಕ್ತವನ್ನು ನೀಡಲು ಮುಂದೆ ಬಂದರು, ಆದರೆ ಕೆಲವು ಆರೋಗ್ಯ ಸಮಸ್ಯೆಗಳು ಅದಕ್ಕೆ ಅಡಚಣೆಯಾಯಿತು.

ಇದನ್ನು ಅರಿತ ಮೂಳೆ ಶಸ್ತ್ರಚಿಕಿತ್ಸಕ(Bone Surgeon) ಡಾ.ಶಶಾಂಕ್ ಸಿಂಗ್ ಅವರೇ ತಮ್ಮ ರಕ್ತವನ್ನು ರೋಗಿಗೆ ದಾನ ಮಾಡಲು ನಿರ್ಧರಿಸಿ, ರೋಗಿಯ ಕುಟುಂಬಕ್ಕೆ ಧೈರ್ಯ ಹೇಳಿ, ಆಪರೇಷನ್ ಮಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ.

https://youtu.be/9ouiEo3FiBs DIRTY FOOD SECRET | ನೋ….ನೋ…..ನೂಡಲ್ಸ್!

ವೈದ್ಯ ಶಶಾಂಕ್ ಅವರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ವೈದ್ಯರು ಎಲ್ಲಾ ಕಡೆಯೂ ವ್ಯಾಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Exit mobile version