Tamilnadu : ತಮಿಳುನಾಡಿನ (Doctors saved Electrician Life) ಕೊಯಮತ್ತೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಕೆಲಸ ಮಾಡುವ ವೇಳೆ ಎಲೆಕ್ಟ್ರಿಷಿಯನ್ ತನ್ನ ಅರಿವಿಗೆ ಬಾರದೆ ಕಬ್ಬಿಣದ ನಟ್ ಅನ್ನು ನುಂಗಿದ್ದಾನೆ.
ಕೆಲ ನಿಮಿಷದ ಬಳಿಕ ತೀರ ಅಸ್ವಸ್ಥನಾದ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಆತನ ಪ್ರಾಣ ಉಳಿಸಿದ್ದಾರೆ.

55 ವರ್ಷದ ವ್ಯಕ್ತಿಯನ್ನು ಕೊಯಮತ್ತೂರಿನ ನಿವಾಸಿ ಸಂಸುದ್ದೀನ್ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ (Electrician) ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಅಕ್ಟೋಬರ್ 18ರಂದು ಕೆಲಸ ಮಾಡುತ್ತಿದ್ದಾಗ ಬಾಯಲ್ಲಿ ಹಿಡಿದಿದ್ದ ಕಬ್ಬಿಣದ ನಟ್ (Doctors saved Electrician Life) ಅನ್ನು ತಮಗೆ ತಿಳಿಯದೆ ನುಂಗಿದ್ದಾರೆ ಎಂದು ಹೇಳಲಾಗಿದೆ.
https://vijayatimes.com/7-dead-in-helicopter-crash/
ಗಂಟಲಿನೊಳಗೆ ಸಿಲುಕಿಕೊಂಡ ಕಬ್ಬಿಣದ ನಟ್ ಅನ್ನು ವ್ಯಕ್ತಿ, ಅದನ್ನು ಕೆಮ್ಮುವ ಮೂಲಕ ಹೊರಗೆ ತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ, ಕಬ್ಬಿಣದ ನಟ್ ಹೊರಬರದೆ ಉಸಿರುಗಟ್ಟಿಸಲು ಪ್ರಾರಂಭಿಸಿದೆ.
ಕೂಡಲೇ ವ್ಯಕ್ತಿಯ ಸುತ್ತಮುತ್ತ ಇದ್ದ ಕಾರ್ಮಿಕರು ಅವರನ್ನು ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ವೈದ್ಯರ ಮೊರೆ ಹೋಗಿದ್ದಾರೆ.
https://youtu.be/sfkpJuX5qVs ಸಿಹಿ-ಕಹಿ ಸತ್ಯ! ಸ್ವೀಟ್ ಅಲ್ಲ ರೋಗಗಳ ಕೂಟ!
ವ್ಯಕ್ತಿಯನ್ನು ಕಿವಿ, ಮೂಗು ಮತ್ತು ಗಂಟಲು ವಿಭಾಗಕ್ಕೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ, ಅವರ ಎದೆಯ ಎಕ್ಸ್-ರೇ ಅನ್ನು ತಕ್ಷಣವೇ ಮಾಡಿದ್ದಾರೆ. ಅವರು ನುಂಗಿದ ಕಬ್ಬಿಣದ ನಟ್ ಅವರ ಶ್ವಾಸನಾಳದಲ್ಲಿ ಸಿಲಕಿಕೊಂಡಿರುವುದು ಪತ್ತೆಯಾಗಿದೆ.
ಮತ್ತಷ್ಟು ಪರೀಕ್ಷೆಗೆ ಒಳಪಡಿಸಿದ ವೈದ್ಯರಿಗೆ ತಿಳಿದದ್ದು, ವ್ಯಕ್ತಿಯ ಎಡ ಶ್ವಾಸನಾಳಕ್ಕೆ ಹೋಗುತ್ತಿರುವುದನ್ನು ವೈದ್ಯರು ಕಂಡು ಕೂಡಲೇ ಅಚ್ಚರಿಗೊಂಡು ಹೆಚ್ಚಿನ ಚಿಕಿತ್ಸೆ ಆರಂಭಿಸಿದರು.

ನಂತರ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಶರವಣನ್, ಅರಿವಳಿಕೆ ವಿಭಾಗದ ಅಲಿಸುಲ್ತಾನ್, ಮಣಿಮೋಳಿ, ಸೆಲ್ವನ್ ಮತ್ತು ಮದನಗೋಪಾಲನ್ ಅವರನ್ನೊಳಗೊಂಡ ವೈದ್ಯರ ತಂಡವು,