ಡೋಲೋ 650 ಮಾತ್ರೆ ಬರೆಯಲು ವೈದ್ಯರಿಗೆ 1000 ಕೋಟಿ ರೂ. ಲಂಚ! : ಸುಪ್ರೀಂಗೆ ದೂರು

Dolo 650

ನವದೆಹಲಿ : ಡೋಲೋ 650(Dolo 650) ಮಾತ್ರೆಯನ್ನು(Tablet) ಉತ್ಪಾದಿಸುವ ಕಂಪನಿಯು ವೈದ್ಯರಿಗೆ(Doctor) ಇದೇ ಮಾತ್ರೆಯನ್ನು ಬರೆಯಲು ಸಾವಿರಾರೂ ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಸುಪ್ರೀಂಕೋರ್ಟ್‌ನಲ್ಲಿ(Supremecourt) ದೂರನ್ನು ದಾಖಲಿಸಿದೆ.

ರೋಗಿಗಳಿಗೆ ಡೋಲೋ 650 ಮಾತ್ರೆಯನ್ನೇ ನಿರ್ದೇಶಿಸುವಂತೆ ಔಷಧ ಕಂಪನಿಯು ಸಾವಿರಾರೂ ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ವೈದ್ಯರಿಗೆ ನೀಡಿದ್ದು, ಇದರಿಂದ ಅಡ್ಡ ಮಾರ್ಗದಲ್ಲಿ ಕಂಪನಿಯು ಲಾಭ ಮಾಡಿಕೊಳ್ಳಲು ಪ್ರಯತ್ನಿಸಿದೆ. ಡೋಲೋ 650 ಮಾತ್ರೆ ಉತ್ಪಾದಕ ಕಂಪನಿಯೂ ಅಂದಾಜು 1000 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಆರೋಪಿಸಿದೆ.

ತಮ್ಮ ತಮ್ಮ ಕಂಪನಿಗಳ ಔಷಧಗಳ(Company Medicines) ಮಾರಾಟವನ್ನು ಹೆಚ್ಚಿಸಿಕೊಳ್ಳಲು ಅನೇಕ ಕಂಪನಿಗಳು ಈಗ ಇದೇ ಹಾದಿ ಹಿಡಿದಿವೆ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ(Central Government) ಇದಕ್ಕೆ ಸೂಕ್ತ ಕಾನೂನು(Law) ರೂಪಿಸಬೇಕೆಂದು ಸಂಘವು ಕೋರಿದೆ. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇನ್ನು ಭಾರತದಲ್ಲಿ ಸಾಮಾನ್ಯವಾಗಿ ಜ್ವರ, ತಲೆನೋವು ಸೇರಿದಂತೆ ಸಣ್ಣ ಆರೋಗ್ಯ ಸಮಸ್ಯೆಗಳಿಗೂ ಕ್ರೋಸಿನ್(Crocin), ಡೋಲೋ ಮುಂತಾದ ಪ್ಯಾರಾಸಿಟಮಾಲ್(Paracetomal) ಔಷಧಿಯನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ತಿಳಿಯದ ಸಂಗತಿಯೆಂದರೆ, ಪ್ಯಾರಾಸಿಟಮಾಲ್ ಸ್ಟೀರಾಯ್ಡ್ ಗಳನ್ನು ಹೊಂದಿದ್ದು, ಅದರ ಅನುಚಿತ ಡೋಸೇಜ್ ನಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ.

ಹೀಗಾಗಿ ಡೋಲೊ-650 ಮಾತ್ರೆ ಸಹ ಪ್ಯಾರಸಿಟಮಾಲ್ ಔಷಧಿಯಾಗಿದ್ದು, ಇದನ್ನು ಅತಿಯಾಗಿ ಬಳಸುವಾಗ ಎಚ್ಚರ ವಹಿಸಬೇಕು. ವೈದ್ಯರ ಸೂಚನೆ ಇಲ್ಲದೇ ಪ್ಯಾರಾಸಿಟಮಾಲ್ ಔಷಧಿಯನ್ನು ಸೇವಿಸುವುದು ಅಪಾಯಕಾರಿ.

Exit mobile version