ಗೃಹಬಳಕೆ LPG ಸಿಲಿಂಡರ್ ಬೆಲೆಯಲ್ಲಿ 50 ರೂ. ಹೆಚ್ಚಳ ; ಇಂದಿನಿಂದ ಜಾರಿಗೆ

ಇಂದಿನಿಂದ ಜಾರಿಗೆ ಬರುವಂತೆ ಗೃಹಬಳಕೆಯ(Domestic) 14.2 ಕೆಜಿ ಎಲ್‌ಪಿಜಿ ಸಿಲಿಂಡರ್(LPG Gas Cylinder) ಬೆಲೆಯನ್ನು ಕೇಂದ್ರ ಸರ್ಕಾರ(Central Government) ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಳ ಮಾಡಿದೆ. 50 ರೂ. ಹೆಚ್ಚಳ ಮಾಡಿದ ಬಳಿಕ ದೇಶೀಯ ಎಲ್ಪಿಜಿ ಸಿಲಿಂಡರ್ ಈಗ ದೆಹಲಿಯಲ್ಲಿ 1053 ರೂ. ಗೃಹಬಳಕೆಯ 5 ಕೆಜಿ ಸಿಲಿಂಡರ್ ಬೆಲೆ 18 ರೂ ಏರಿಕೆಯಾಗಿದ್ದು, 19 ಕೆಜಿ ವಾಣಿಜ್ಯ ಸಿಲಿಂಡರ್(Commercial Gas Cylinder) ಬೆಲೆ 8.50 ರೂ ಇಳಿಕೆಯಾಗಿದೆ.

ಜುಲೈ 1 ರಂದು, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿ ಸಿಲಿಂಡರ್‌ಗೆ 198 ರೂ ಕಡಿಮೆ ಮಾಡಲಾಗಿತ್ತು, ಜೂನ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 135 ರೂ. ಕಡಿತಗೊಳಿಸಲಾಯಿತು. ಏಪ್ರಿಲ್ 1 ರಂದು 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ 250 ರೂಪಾಯಿಯಿಂದ 2,253 ರೂಪಾಯಿಗೆ ಏರಿಸಲಾಗಿದೆ. ಮಾರ್ಚ್ 1 ರಂದು, ವಾಣಿಜ್ಯ LPG ಬೆಲೆಯನ್ನು 105 ರೂ.ಗಳಷ್ಟು ಹೆಚ್ಚಿಳ ಮಾಡುವ ಮೂಲಕ ಹೋಟೆಲ್ ವ್ಯಾಪಾರಿಗಳಿಗೆ ಶಾಕ್ ನೀಡಿತು.

ವಾಣಿಜ್ಯ ಎಲ್.ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕೇಂದ್ರ ಸರ್ಕಾರ ದಿಢೀರ್ ಏರಿಕೆ ಮಾಡುತ್ತಲ್ಲೇ ಇದೆ. ವ್ಯಾಪಾರ-ವಹಿವಾಟು ನಡೆಸುವವರಿಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಸದ್ಯ ಇದೇ ಸಾಲಿನಲ್ಲಿ ಈಗ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲೂ 50 ರೂ. ಹೆಚ್ಚಳ ಮಾಡಿದೆ.

Exit mobile version