ಪಿಎಂ ಕೇರ್ಸ್ ಗೆ 4,910.5 ಕೋ.ರೂ.ಗಳ ದೇಣಿಗೆ ; ದೇಣಿಗೆಗಳಲ್ಲಿ ಶೇ.59.3 ಸಿಂಹಪಾಲು ಸರಕಾರಿ ಸಂಸ್ಥೆಗಳದ್ದಾಗಿದೆ

New Delhi : ಪಿಎಂ ಕೇರ್ಸ್ ನಿಧಿಗೆ (PM Cares Fund) ಅನೇಕ ಜನರು, ಸಂಘ ಸಂಸ್ಥೆಗಳು, ಪ್ರತಿಷ್ಟಿತ ಕಂಪನಿಗಳಿಂದ ದೇಣಿಗೆಗಳ ಮಹಾ ಪೂರವೇ ಹರಿದು ಬಂದಿತ್ತು. ಆದರೆ ಸಲ್ಲಿಸಿರುವ ದೇಣಿಗೆಗಳಲ್ಲಿ ಸಿಂಹಪಾಲು (Donate to PM Cares Fund) ಸರಕಾರಿ ಸಂಸ್ಥೆಗಳದ್ದಾಗಿದೆ ಎಂದು ಇತ್ತೀಚೆಗೆ business-standard.com ನ ವರದಿಗಳಲ್ಲಿ ತಿಳಿದು ಬಂದಿದೆ.


ಎನ್‌ಎಸ್‌ಇ (NSE) ಅಂದರೆ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ದಿಂದ (National Stock Exchange) ಸಂಗ್ರಹಿತವಾದ ಅಂಕಿ ಅಂಶಗಳ ಪ್ರಕಾರ 2019-20 ಮತ್ತು 2021-22ರ ನಡುವೆ

ಒಟ್ಟು 4,910.5 ಕೋಟಿ ರೂ.ದೇಣಿಗೆ ಸಂಗ್ರಹವಾಗಿದೆ. ಈ ಪೈಕಿ ಸರಕಾರಿ ಕಂಪನಿಗಳ ಪಾಲು ಶೇ.59.3 ರಷ್ಟಿದೆ, ಅಂದರೆ ಕನಿಷ್ಠ 2,913.6 ಕೋ.ರೂ.ಗಳ ದೇಣಿಗೆಯನ್ನು ಸಲ್ಲಿಸಿವೆ ಎಂದು ವರದಿ ಮಾಡಿದೆ.


ಕೊರೊನಾ ವೈರಸ್‌ನಿಂದ (Covid-19) ಸಂಕಷ್ಟದಲ್ಲಿರುವವರಿಗಾಗಿ ನೆರವಾಗಲೆಂದು 2020 ರಲ್ಲಿ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು

ತುರ್ತು ಪರಿಸ್ಥಿತಿ ನಿಧಿಯಲ್ಲಿ ಪರಿಹಾರ ಅಂದರೆ ಪಿಎಂ ಕೇರ್ಸ್‌ ಫಂಡ್‌ ಸ್ಥಾಪನೆಗೊಂಡಿದೆ, ಅದಾಗಿಂದಲೂ ಇದು ಅನೇಕ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಈ ಪಿಎಂ ಕೇರ್ಸ್‌ ಫಂಡ್‌ ಒಂದು ಚಾರಿಟೇಬಲ್‌ ಟ್ರಸ್ಟ್‌ ಆಗಿದೆ,

ಇದನ್ನೂ ಓದಿ : https://vijayatimes.com/lokayukta-attacked-bbmp-officer/

ಇದು ಯಾವುದೇ ಒಂದು ಸಾರ್ವಜನಿಕ ಫಂಡ್‌ ಅಲ್ಲ.ಈ ಫಂಡ್‌ ಮೇಲೆ ಯಾವುದೇ ರಾಜ್ಯ ಸರ್ಕಾರಕ್ಕಾಗಲಿ ಅಥವಾ ಕೇಂದ್ರ ಸರ್ಕಾರಕ್ಕಾಗಲಿ ಅಧಿಕಾರ ಇಲ್ಲ,

ಇಷ್ಟೇ ಅಲ್ಲದೆ ಪಿಎಂ ಕೇರ್ಸ್‌ ಫಂಡನ್ನು ಸರ್ಕಾರ ನಿಯಂತ್ರಿಸುತ್ತಿಲ್ಲ ಎಂದು ಪ್ರಧಾನಿ ಕಾರ್ಯಾಲಯವು ದೆಹಲಿ ಹೈ ಕೋರ್ಟ್‌ಗೆ (Delhi High Court) ಸ್ಪಷ್ಟನೆ ನೀಡಿತ್ತು.


ಪಿಎಂ ಕೇರ್ಸ್ ಫಂಡ್‌ನ ವೆಬ್‌ಸೈಟ್‌ನಲ್ಲಿರುವ ಮಾಹಿತಿಗಳ ಪ್ರಕಾರ 2019-20ರಲ್ಲಿ 3,076.6 ಕೋಟಿ ರೂ ಹಣವನ್ನು ಸ್ವೀಕರಿಸಿತ್ತು,ನಂತರ ಇದು 2020-21ರಲ್ಲಿ 10,990.2 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು.

ಇದಾದ ನಂತರ 2021-22ರಲ್ಲಿ ಒಟ್ಟು 9,131.9 ಕೋಟಿ ರೂ.ಗಳನ್ನು ಸ್ವೀಕರಿಸಿತ್ತು. ಇದರಲ್ಲಿ ಲಿಸ್ಟೆಡ್‌ ಸರ್ಕಾರಿ ಕಂಪನಿಗಳಾದ ಒಎನ್ನಿಸಿ (ONNC) 370 ಕೋಟಿ ರೂ,

ಪಿಜಿಸಿಐ (PGCI) 275 ಕೋ.ರೂ, ಎನ್ನಿಪಿಸಿ (NPC) 330 ಕೋ.ರೂ, ಮತ್ತು ಪಿಎಸ್ಸಿ (PSC) 222.4 ಕೋ.ರೂ ದೇಣಿಗೆ ನೀಡುವುದರ ಮೂಲಕ ಅಗ್ರ ಸ್ಥಾನಗಳಲ್ಲಿದೆ.


ಈ ಪಿಎಂ ಕೇರ್ಸ್‌ ಫಂಡ್‌ ಅನ್ನು ಪ್ರಧಾನ ಮಂತ್ರಿಗಳು ಸ್ಥಾಪಿಸಿದ್ದಾರೆ ಆದ್ದರಿಂದ ಅದು ಸರ್ಕಾರದ ನಿಧಿಯಾಗುತ್ತದೆ. ಹಾಗೆ ಒಂದು ವೇಳೆ ಅದು ಸರ್ಕಾರದ ನಿಧಿಯಲ್ಲ ಎಂದಾದರೆ

ವೆಬ್‌ಸೈಟ್‌ನಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಮತ್ತು ನಮ್ಮ ಸರ್ಕಾರದ ಲಾಂಛನ ಹಾಕಿರುವುದು ಏಕೆ ಎಂದು ಸಮ್ಯಕ್‌ ಗಂಗ್ವಾಲ್‌ (Samyak Gangwal) ಎಂಬುವರು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.


ಈ ಬಗ್ಗೆ ಪ್ರಧಾನಿ ಕಾರ್ಯಾಯಲದ ಅಧೀನ ಕಾರ್ಯದರ್ಶಿ ಹಾಗೂ ಪಿಎಂ ಕೇರ್ಸ್‌ ಟ್ರಸ್ಟ್‌ನ ಗೌರವ ಉಸ್ತುವಾರಿಯೂ

ಆಗಿರುವ ಪ್ರದೀಪ್‌ ಕುಮಾರ್‌ ಶ್ರೀವಾಸ್ತವ (Pradeep Kumar Srivastava) ಅವರು ಅಫಿಡವಿಟ್‌ ಸಲ್ಲಿಸಿ, ‘ಇದು ಸರ್ಕಾರದ ನಿಧಿ ಆಗಿಲ್ಲ ಆದರೆ ಇದಕ್ಕೆ ಬರುವ (Donate to PM Cares Fund) ದೇಣಿಗೆಗಳು ಹಾಗೂ ಈ ನಿಧಿಯಿಂದ ಕೆಲವು ಖರ್ಚಾಗುತ್ತದೆ .

ಇದನ್ನೂ ಓದಿ : https://vijayatimes.com/rcb-rr-thrilling-match/

ಹೀಗೆ ಮಾಡುವ ಖರ್ಚಿನ ಬಗ್ಗೆ ಕೇಂದ್ರ ಸರ್ಕಾರದ ಸಿಎಜಿಯವರು ನೇಮಿಸಿರುವ ಚಾರ್ಟರ್ಡ್‌ ಅಕೌಂಟೆಂಟ್‌ಗಳಿಂದ ಆಡಿಟ್‌ ಮಾಡಿಸಲಾಗುತ್ತದೆ.

ಮತ್ತು ಇದರ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಲು ಅದರ ಬಗ್ಗೆಎಲ್ಲಾ ವಿವರಗಳನ್ನೂ ಸರ್ಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ.

ದೇಶದ ಬೇರೆ ಬೇರೆ ಟ್ರಸ್ಟ್‌ಗಳಿಗೆ ಅನ್ವಯಿಸುವ ನಿಯಮಗಳೇ ಈ ಟ್ರಸ್ಟ್‌ಗೂ ಕೂಡ ಅನ್ವಯಿಸುತ್ತವೆ. ಹಾಗಾಗಿ ಸಂವಿಧಾನಬದ್ಧವಾಗಿ ಇದು ಸ್ಥಾಪಿತವಾಗಿದೆ’ ಎಂದು ತಿಳಿಸಿದರು.

Exit mobile version