ದೇವಾಲಯಗಳಿಗೆ ದೇಣಿಗೆ ನೀಡಬೇಡಿ ಅದನ್ನೇ ಜನರ ಕಲ್ಯಾಣಕ್ಕಾಗಿ ಬಳಕೆ ಮಾಡಿ : ಪೇಜಾವರ ಶ್ರೀ

ವಿಜಯಪುರ : ದೇವಾಲಯಗಳಿಗೆ ದೇಣಿಗೆ ನೀಡುವುದನ್ನು ನಿಲ್ಲಿಸಬೇಕು. ಆ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಕೆ ಮಾಡಬೇಕು ಎಂದು ಉಡುಪಿಯ(udupi) ಪೇಜಾವರ ಮಠದ (Don’t donate to temples) ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಗಳು ಹೇಳಿದ್ದಾರೆ.

ವಿಜಯಪುರದಲ್ಲಿ(vijaynagar) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದೇವಾಲಯಗಳಿಗೆ ನೀಡಲಾಗುತ್ತಿರುವ ದೇಣಿಗೆ ಹಣ ದುರುಪಯೋಗವಾಗುತ್ತಿದೆ.

ಈ ಬಗ್ಗೆ ಅನೇಕ ವರದಿಗಳು ಬಂದಿವೆ. ಭಕ್ತರು ನೀಡುವ ದೇಣಿಗೆಯೂ ಬಡವರ ಕಲ್ಯಾಣಕ್ಕೆ ಬಳಕೆಯಾಗಬೇಕು. ಆದ್ದರಿಂದ ಇನ್ನು ಮುಂದೆ ಭಕ್ತರು ದೇವಾಲಯಗಳಿಗೆ ದೇಣಿಗೆ ನೀಡುವ ಬದಲು,

ಇದನ್ನು ಓದಿ: 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್‌ ಮಾರಾಟ ನಿಷೇಧ

ಆ ಹಣವನ್ನು  ಬಡಜನರ ಕಲ್ಯಾಣಕ್ಕಾಗಿ ಬಳಕೆ ಮಾಡುವುದು ಉತ್ತಮ ಮಾರ್ಗವಾಗಿದೆ. ಅನೇಕ ಭಕ್ತರು ಸೇರಿಕೊಂಡು ಬಡವರಿಗಾಗಿ ಒಂದು ಸಣ್ಣ ಮನೆಯಾದರೂ ನಿರ್ಮಿಸುವ ಮೂಲಕ ಆ ಹಣವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಬೇಕು  ಎಂದು ಹೇಳಿದರು.

ಇದೇ ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ದೇಶ ಏನನ್ನು ಸಾಧಿಸುತ್ತದೆ ಎಂಬ ಟೀಕಾಕಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,

ರಾಮಮಂದಿರ ಎಲ್ಲ ಭಾರತೀಯರ ಕನಸಾಗಿತ್ತು. ಆದರೆ ಕೇವಲ ರಾಮಮಂದಿರ ನಿರ್ಮಾಣವಾದರೆ ಸಾಲದು, ರಾಮರಾಜ್ಯವು ನಿರ್ಮಾಣವಾಗಬೇಕು. 

ದೇಶದಲ್ಲಿರುವ ಎಲ್ಲ ಜನರು ಸೌಹಾರ್ದಯುತವಾಗಿ ಸಹಬಾಳ್ವೆ ನಡೆಸಬೇಕು.  ಆರ್ಥಿಕವಾಗಿ ಸಬಲರಾಗಿರುವವರು ಯಾವುದೇ ರೀತಿಯಲ್ಲಾದರೂ  ಹಿಂದುಳಿದವರಿಗೆ ಸಹಾಯ ಮಾಡಬೇಕು.

ಅಂತಹ ಒಂದು ಬೃಹತ್ ಅಭಿಯಾನವನ್ನು ನಡೆಸುತ್ತೇವೆ. ಆ ನಮ್ಮ ಕಾರ್ಯ ರಾಮ ಮಂದಿರದ ಟೀಕಾಕಾರರನ್ನು ಮೌನಗೊಳಿಸುತ್ತದೆ ಎಂಬ ಭರವಸೆ ನನಗಿದೆ ಎಂದರು.

https://youtu.be/qdvDyY_ohA4

ದೇಶದಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಆದರೆ ನಮ್ಮ ಸೇವೆ ಅಲ್ಲಿಗೆ ಸೀಮಿತವಾಗಬಾರದು. ಜನರು ಶ್ರೀರಾಮನ ಹೆಸರಿನಲ್ಲಿ (Don’t donate to temples) ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು.

ರಾಮನ ಸೇವೆಯು ದೇಶ ಸೇವೆಗೆ ಸಮಾನವಾಗಿದೆ. ಹೀಗಾಗಿ ಶ್ರೀರಾಮನ ಹೆಸರಿನಲ್ಲಿ ಜನಸೇವೆಯ ಅಭಿಮಾನ ಪ್ರಾರಂಭಿಸುವಂತೆ ನಾನು ಜನರಿಗೆ ಸಲಹೆ ನೀಡಿದ್ದೇವೆ. 

ದೈವ ಭಕ್ತಿ, ದೇಶ ಭಕ್ತಿ ಒಂದೇ. ಶ್ರೀರಾಮನ ಹೆಸರಿನಲ್ಲಿ ಸೇವೆ ಮಾಡೋಣ, ಅದಕ್ಕಾಗಿ ರಾಮನ ಸೇವೆಯೇ ದೇಶಸೇವೆ ಅನ್ನೋ ಅಭಿಯಾನ ಹಮ್ಮಿಕೊಳ್ಳೋಣ. ಆ ಮೂಲಕ ಬಡಜನರ ಕಲ್ಯಾಣಕ್ಕಾಗಿ ಶ್ರಮಿಸಿ, ರಾಮರಾಜ್ಯವನ್ನು ಕಟ್ಟೋಣ ಎಂದು ಹೇಳಿದರು.

Exit mobile version