ಸಿಲಿಕಾನ್ ಸಿಟಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್, ಹುಡುಗಿ ವಿಚಾರಕ್ಕೆ ನಡೆಯಿತು ಕೊಲೆ!

Bengaluru (ಜು.12): ಇಂದು ಸಿಲಿಕಾನ್ ಸಿಟಿಯಲ್ಲಿ (Silicon City) ನಡೆದ ಡಬಲ್ ಮರ್ಡರ್ (double murder case twist) ಇದೀಗ ನಗರವನ್ನು ಮತ್ತೆ ಬೆಚ್ಚಿ ಬೀಳಿಸಿತ್ತು.

ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಕೃತ್ಯವನ್ನು ಮಾಜಿ ಸಹದ್ಯೋಗಿ

ಹಾಗೂ ಆತನ ಇಬ್ಬರು ಸಹಚರರು ಎಸಗಿ (double murder case twist) ಪರರಾಯಿಗಿದ್ದರು.

ಇದೀಗ ಪೊಲೀಸರು ಪ್ರಮುಖ ಆರೋಪಿ ಫಿಲಿಕ್ಸ್‌ನ್ನು(Felix) ಬಂಧಿಸಿದ್ದಾರೆ.ಇದೀಗ ಸ್ಫೋಟಕ ಮಾಹಿತಿಯನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ವ್ಯವಹಾರ ಅಥವಾ ಹಣದ ವಿಚಾರವಲ್ಲ ಬದಲಾಗಿ

ಹುಡುಗಿ ವಿಚಾರಕ್ಕೆ ಈ ಡಬಲ್ ಮರ್ಡರ್ ನಡೆದಿದೆ ಎಂದು ಆರೋಪಿ ಫಿಲಿಕ್ಸ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಏರೋನಾಟಿಕ್ಸ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌(Aeronautics media private limited) ಕಂಪನಿಯ ಸಿಇಒ ವಿನುಕುಮಾರ್‌(Vinu Kumar) (40) ಮತ್ತು ಎಂಡಿ ಫಣೀಂದ್ರ ಸುಬ್ರಹ್ಮಣ್ಯ

(Phaneendra Subramanya) ಮೇಲೆ ಇಂದು ದಾಳಿ ನಡೆದಿತ್ತು. ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರು. ಪೊಲೀಸರು ಈ ಪ್ರಕರಣ ಸಂಬಂಧ ಹಲವರನ್ನು ಈಗಾಗಲೇ ವಿಚಾರಣೆ ನಡೆಸಿದ್ದಾರೆ.

ಕೊಲೆ ಹಿಂದಿನ ರಹಸ್ಯವನ್ನು ಇದೀಗ ಬಯಲು ಮಾಡಿದ್ದಾರೆ. ಕೊಲೆಯಾದ ಫಣೀಂದ್ರ ಹಾಗೂ ಆರೋಪಿ ಫಿಲಿಕ್ಸ್ ಬನ್ನೇರುಘಟ್ಟದ(Bannergatta) ಜಿ ನೆಟ್ (G Net)ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ : ಕರೆಂಟ್ ಶಾಕ್ ಕೊಟ್ಟರೂ ಸ್ವಾಮೀಜಿ ಪ್ರಾಣ ಪಕ್ಷಿ ಹಾರಿ ಹೋಗಿರಲಿಲ್ಲ: ಎಫ್‌ಐಆರ್‌ನಲ್ಲಿ ಸ್ಫೋಟಕ ರಹಸ್ಯ ಬಯಲು

ಫಣೀಂದ್ರ ಬಳಿಕ ಸ್ವಂತ ಕಂಪನಿ ಆರಂಭಿಸಿದ್ದರು. ಜಿ ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಜೊತೆ ಆರೋಪಿ ಫಿಲಿಕ್ಸ್‌ಗೆ ಪ್ರೀತಿ ಶುರುವಾಗಿತ್ತು. ಫಣೀಂದ್ರ ಇದೇ ಹುಡುಗಿ ಮೇಲೆ

ಕಣ್ಣು ಹಾಕಿದ್ದಾನೆ ಎಂದು ಇವರಿಬ್ಬರ ನಡುವೆ ಹಲವು ಭಾರಿ ಜಗಳ ನಡೆದಿದೆ. ಫಿಲಿಕ್ಸ್ ನನ್ನ ಹುಡ್ಗಿ ವಿಚಾರಕ್ಕೆ ಬಂದರೆ ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಕೂಡ ಹಾಕಿದ್ದ. ಇದೀಗ ಪೊಲೀಸರ

ಮುಂದೆ ಎಲ್ಲವನ್ನೂ ತಪ್ಪೊಪ್ಪಿಕೊಂಡಿದ್ದಾನೆ.

ಅರುಣ್(Arun) ಎಂಬಾತನು ಈ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದಾನೆ ಈತನನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಫೆಲಿಕ್ಸ್‌ಗೆ ಯಾರಾದರೂ ಸುಪಾರಿ

ಕೊಟ್ಟಿರಬಹುದು ಎಂಬ ಅನುಮಾನದ ಮೇಲೆ ವಿಚಾರಣೆ ನಡೆಸಲಾಗಿತ್ತು.ಆರೋಪಿಗಳು ಡಬಲ್ ಮರ್ಡರ್ ಬಳಿಕ ಕಾಂಪೌಡ್ ಹಾರಿ ಪರಾರಿಯಾಗಿದ್ದರು.ಕ್ಯಾಬ್ ಮೂಲಕ ಮೆಜೆಸ್ಟಿಕ್‌ಗೆ (Mejestic)

ತೆರಳಿ ಬಳಿಕ ಅಲ್ಲಿಂದ ರೈಲಿನ ಮೂಲಕ ಕುಣಿಗಲ್‌ಗೆ(Kunigal) ತೆರಳಿದ್ದರು. ಮಾಧ್ಯಮದಲ್ಲಿ(Media) ಕೊಲೆ ಬಳಿಕ ತನ್ನ ಫೋಟೋ ಬಂದ ವರದಿಗಳನ್ನು ಆರೋಪಿ ಫೆಲಿಕ್ಸ್ ತನ್ನ ಮೊಬೈಲ್ ನಲ್ಲಿ

ಸ್ಟೇಟಸ್ (Status) ಕೂಡ ಹಾಕಿಕೊಂಡಿದ್ದ.

ಬನ್ನೇರುಘಟ್ಟ ರಸ್ತೆಯಲ್ಲಿ ಇಂಟರ್ನೆಟ್(Internet) ಪೂರೈಸುವ ಖಾಸಗಿ ಕಂಪನಿಯಲ್ಲಿ ಫಣೀಂದ್ರ ಕೆಲಸ ಆರಂಭಿಸಿದ್ದರು. ನಂತರ ಏರ್ ಆನ್ ಏರೋನಿಕ್ಸ್ ಮಿಡಿಯಾ ಪ್ರೈವೇಟ್ ಲಿಮಿಟೆಡ್

(Air on Aerobics media private limited) ಕಂಪನಿಯನ್ನು 2022ರಲ್ಲಿ ತೆರೆದು ವ್ಯವಾಹರ ಆರಂಭಿಸಿದ್ದರು. ಈ ವೇಳೆ ಫಣೀಂದ್ರ ಕಂಪನಿಯಲ್ಲಿ ಹಳೇ ಕಂಪನಿಯಲ್ಲಿದ್ದ ಹಲವರು ಕೆಲಸಕ್ಕೆ ಸೇರಿದ್ದರು.

ಕಂಪನಿಯು ಬರೀ 7 ತಿಂಗಳಲ್ಲಿ ಲಾಭ ಪಡೆದುಕೊಂಡಿತ್ತು. ಜೊತೆಗೆ ಯಶಸ್ಸಿನ ಮೆಟ್ಟಿಲು ಹತ್ತಿತ್ತು. ಈ ಹಿಂದಿನ ಕಂಪನಿಯಿಂದ ಅಸಭ್ಯ ವರ್ತನೆ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಕಾರಣ

ನೀಡಿ ಫಿಲಿಕ್ಸ್‌ನನ್ನು ಫಣೀಂದ್ರ ಕೆಲಸದಿಂದ ವಜಾ ಮಾಡಿದ್ದರು.

10 ಮಂದಿ ಉದ್ಯೋಗಿಗಳು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಬ್ಬಾಳ(Hebbal) ಕೆಂಪಾಪುರದಲ್ಲಿ ವಿನು ಹಾಗೂ ಕೆ.ಆರ್‌.ಪುರದಲ್ಲಿ(K.R Puram) ಫಣೀಂದ್ರ ವಾಸವಾಗಿದ್ದರು.

ಫಣೀಂದ್ರ ಕಂಪನಿ ಗಣನೀಯ ಪ್ರಮಾಣದಲ್ಲಿ ಏಳೆಂಟು ತಿಂಗಳಲ್ಲಿ ಬೆಳವಣಿಗೆ ಕಂಡಿತು.ಆದರೆ ಫಣೀಂದ್ರ ಕಂಪನಿ ಈ ಹಿಂದೆ ಅವರು ಕೆಲಸ ಮಾಡುತ್ತಿದ್ದ ಬ್ರಾಡ್‌ ಬ್ಯಾಂಡ್‌ ಕಂಪನಿಗೆ ತೀವ್ರ ಸ್ಪರ್ಧೆವೊಡ್ಡಿದ

ಪರಿಣಾಮ ಆ ಕಂಪನಿಗೆ ನಷ್ಟವಾಗಿತ್ತು. ಎರಡು ಕಂಪನಿಗಳ ನಡುವೆ ಈ ಹಿನ್ನೆಲೆಯಲ್ಲಿ ವೃತ್ತಿ ವೈಷಮ್ಯ ಮೂಡಿತ್ತು.

ರಶ್ಮಿತಾ ಅನೀಶ್

Exit mobile version