ಚಿಕ್ಕೋಡಿ: ದಿನದಿಂದ ದಿನಕ್ಕೆ ಜೈನ ಮುನಿ (Jain Muni) ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತಿದೆ ಅದರಂತೆ ಇದೀಗ ಜೈನಮುನಿಯ ಕೊಲೆ ರಹಸ್ಯ ಎಫ್‌ಐಆರ್ (FIR) ಮೂಲಕ ಬಯಲಾಗಿದೆ.ಹಂತಕರು ಸ್ವಾಮೀಜಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿ ನಂತರ ಕೊಳವೆ ಬಾವಿಗೆ ಅವರ ದೇಹವನ್ನು ತುಂಡು ತುಂಡು ಮಾಡಿ ಎಸೆದಿದ್ದರು. ನಾರಾಯಣ ಮಾಳಿ(Narayana Mali) ಮಾತ್ರ ಕೊಲೆ ಮಾಡಿದ್ದು ಎಂದು ಬಿಂಬಿಸುವ ಕಾರ್ಯ ನಡೆದಿತ್ತು.

ಆದರೆ ಎಫ್‌ಐಆರ್ ಮೂಲಕ ಜೈನಮುನಿಯ ಹತ್ಯೆ ಸದ್ಯ ಹಸನ್ ಡಾಲಾಯತ್ ಹಾಗೂ ನಾರಾಯಣ ಮಾಳಿ ಇಬ್ಬರು ಸೇರಿ ಮಾಡಿದ್ದಾರೆ ಎಂಬ ಸ್ಫೋಟಕ ಸುದ್ದಿ ಬಹಿರಂಗವಾಗಿದೆ. ಸ್ವಾಮೀಜಿ ಪ್ರಾಣ ಪಕ್ಷಿ ಕರೆಂಟ್ ಶಾಕ್ ಕೊಟ್ಟರೂ ಹಾರಿ ಹೋಗಿರಲಿಲ್ಲ. ಸ್ವಾಮೀಜಿಯನ್ನು ಕರೆಂಟ್ ಶಾಕ್ ಕೊಟ್ಟು ಚಿತ್ರ ಹಿಂಸೆ ನೀಡಿದ ನಂತರ ಸ್ವಾಮೀಜಿಯ ಟವೆಲ್‌ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಸ್ವಾಮೀಜಿ ಹಣ ವಾಪಸ್ ನೀಡುವಂತೆ ಪದೇ ಪದೇ ಪೀಡಿಸುತ್ತಿದ್ದರು ಇದರಿಂದ ನಾರಾಯಣ ಮಾಳಿ ಕೋಪಗೊಂಡ ತನ್ನ ಸ್ನೇಹಿತ ಹಸನ್ ಡಾಲಾಯತ್ ಜೊತೆ ಸೇರಿ ಕೊಲೆ ಮಾಡಿದ್ದಾನೆ. ಜೈನ ಮುನಿಗೆ ಮೊದಲು ಕೋಣೆ ಯೊಂದರಲ್ಲಿ ಕರೆಂಟ್ ಶಾಕ್ ನೀಡಿ ಚಿತ್ರ ಹಿಂಸೆ ನೀಡಿದ್ದು, ಬಳಿಕ ಅವರನ್ನು ಕೊಲೆ ಮಾಡಿ ಅವರ ಶವವನ್ನು ಗೋಣಿ ಚೀಲದಲ್ಲಿ ಸಾಗಿಸಿದ್ದಾರೆ.

ಬೈಕ್ ಮೇಲೆ ಶವವನ್ನು ಹೀರೆಕುಡಿಯಿಂದ ಖಟಕಬಾವಿಯವರೆಗೂ ಸಾಗಾಟ ಮಾಡಿ ನಂತರ ಅವರ ದೇಹವನ್ನು ಖಟಕಬಾವಿಯ ಕೊಳವೆ ಬಾವಿ ಬಳಿ ಪೀಸ್ ಪೀಸ್ ಮಾಡಿದ್ದಾರೆ. ನಂತರ ಆ ಶವವನ್ನು ಕೊಳವೆ ಬಾವಿಯಲ್ಲಿ ಎಸೆದು ಹೋಗಿರುವ ವಿಚಾರ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.
ರಶ್ಮಿತಾ ಅನೀಶ್