ಬೆಳಗ್ಗೆ ಹಲ್ಲುಜ್ಜುವ ಮೊದಲೇ ನೀರು ಕುಡಿಯಿರಿ: ಅದ್ಭುತ ಆರೋಗ್ಯ ಅನುಕೂಲ ನಿಮ್ಮದಾಗಿಸಿ

ಹಲ್ಲುಜ್ಜುವ ಮೊದಲು ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು ಬೆಳಗ್ಗೆ ಹಲ್ಲುಜ್ಜುವ (Drink water before brushing) ಮೊದಲು

ನೀರು ಕುಡಿಯುವುದರಿಂದ ನಾನಾ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಬಹುದು.ಸಾಮಾನ್ಯವಾಗಿ ನಾವೆಲ್ಲಾ ಮನೆಯಲ್ಲಿ ಬೆಳಗ್ಗೆ (Morning) ಎದ್ದ ತಕ್ಷಣ ನಮ್ಮ ಮನೆಯಲ್ಲಿರುವ

ಹಿರಿಯರು ನಮಗೆ ‘ಹಾಸಿಗೆಯಿಂದ ಬೆಳಿಗ್ಗೆ ಎದ್ದ ತಕ್ಷಣವೇ ಒಂದು ಲೋಟ ಬಿಸಿ ನೀರನ್ನು (Hot Water) ಕುಡಿಯಿರಿ, ಆರೋಗ್ಯಕ್ಕೆ ಒಳ್ಳೆಯದು’ ಎಂದು ಹೇಳುತ್ತಾ ಇರುವುದನ್ನು ನಾವು

ಪ್ರತಿದಿನ ಕೇಳುತ್ತಿರುತ್ತೇವೆ ಅಂತ ಹೇಳಬಹುದು. ಹಾಗೆ ಮಾಡುವುದರಿಂದ ಆರೋಗ್ಯಕರ ಪ್ರಯೋಜನಗಳಿವೆ ಎಂದು ನಮಗೆ ನಮ್ಮ ಮನೆಯಲ್ಲಿನ ಹಿರಿಯರು ಹೇಳಿದರೂ ಸಹ ನಾವು

ಅದನ್ನು ಅನೇಕ ಬಾರಿ ನಿರ್ಲಕ್ಷಿಸುತ್ತೇವೆ. ಏನೋ ಹಿರಿಯರು ಹೇಳುತ್ತಿದ್ದಾರೆ ಎಂದು ನಾವು ಒಂದೆರಡು ದಿನ ಅದನ್ನು ಪಾಲಿಸಿದರೂ ಮೂರನೆಯ ದಿನ ಹಾಗೆ ಹಾಸಿಗೆಯಿಂದ (Bed)

ಇದನ್ನು ಓದಿ: ಬೆಂಗಳೂರಿನ ISECಯಲ್ಲಿ ಉದ್ಯೋಗಾವಕಾಶ ; ತಿಂಗಳಿಗೆ 1.44 ಲಕ್ಷ ಸಂಬಳ..!

ಎದ್ದು ಅವಸರದಲ್ಲಿ ಬಾತ್‌ರೂಮ್ ಗೆ ಹೋಗಿ ಬಡಬಡನೆ ಹಲ್ಲುಜ್ಜಿಕೊಂಡು ಬಿಡುತ್ತೇವೆ. ಆನಂತರ ‘ಅರೇ ಹಲ್ಲುಜ್ಜುವ (Brushing) ಮೊದಲು ನೀರು ಕುಡಿಯುವುದನ್ನೇ ಮರೆತುಬಿಟ್ಟೆ’

ಎಂದು ಹೇಳುವುದುಂಟು.ಕೆಲವರಿಗೆ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣವೇ ಕುಡಿಯಲು ಚಹಾ ಅಥವಾ ಟೀ ಬೇಕೇ ಬೇಕು, ಇಲ್ಲದಿದ್ದರೆ ಅವರಿಗೆ ಬೆಳಗ್ಗೆ ಎದ್ದ ಹಾಗೆ ಆಗುವುದಿಲ್ಲ.

ಆದರೂ ಈ ಹಲ್ಲುಜ್ಜುವುದು ಅತ್ಯಂತ ಪ್ರಮುಖ ಮೂಲಭೂತ ನೈರ್ಮಲ್ಯ ಅಭ್ಯಾಸಗಳಲ್ಲಿ ಒಂದಾಗಿದೆ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಎಂದರೆ ಬೆಳಗ್ಗೆ ಹಾಸಿಗೆಯಿಂದ ಎದ್ದ ನಂತರ

ಒಮ್ಮೆ ಮತ್ತು ರಾತ್ರಿ ಮಲಗುವ ಮೊದಲು ಇನ್ನೊಮ್ಮೆ ಹಲ್ಲುಜ್ಜಲು ತಜ್ಞರು ಶಿಫಾರಸು (Drink water before brushing) ಮಾಡುತ್ತಾರೆ.

ಬೆಳಗ್ಗೆ ಹಲ್ಲುಜ್ಜುವ ಮೊದಲು ನಾವು ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು ಎಂದು ಸಾಮಾನ್ಯವಾಗಿ ನಂಬಲಾಗಿದೆ.ಆದಾಗ್ಯೂ, ಹಲ್ಲುಜ್ಜುವ ಮೊದಲು ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ

ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು.. ಬೆಳಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ. ಹಲ್ಲುಜ್ಜುವ ಮೊದಲು ನೀರು

ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳು:

  1. ದೇಹದ ಜೀರ್ಣಾಂಗ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ
  2. ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
  3. ಅತಿಯಾದ ಬೊಜ್ಜು ಕರಗಿಸುತ್ತದೆ.
  4. ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಶೇಖರಣೆಯನ್ನು ತಡೆಯುತ್ತದೆ.
  5. ಕೆಟ್ಟ ಉಸಿರಾಟದ ಸಮಸ್ಯೆಯನ್ನು ತೊಡೆದು ಹಾಕಬಹುದು. ನಾವು ರಾತ್ರಿ ಹೊತ್ತು ಮಲಗಿದ್ದಾಗ ಬಾಯಿಯಲ್ಲಿ ಲಾಲಾರಸದ ಕೊರತೆಯಿಂದಾಗಿ, ನಮ್ಮ ಬಾಯಿ ಸಂಪೂರ್ಣವಾಗಿ ಒಣಗಿರುತ್ತದೆ

    ಮತ್ತು ಇದು ಕೆಲವೊಮ್ಮೆ ಹ್ಯಾಲಿಟೋಸಿಸ್ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಬಹುದು. ಆದ್ದರಿಂದ, ನೀವು ಬೆಳಿಗ್ಗೆ ಎದ್ದು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿದರೆ,

    ನೀವು ಕೆಟ್ಟ ಉಸಿರಾಟದ ಸಮಸ್ಯೆಯನ್ನು ತೊಡೆದು ಹಾಕಬಹುದು.
Exit mobile version