ಡಯಾಬಿಟಿಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಸೇವಿಸಿ

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ (Diabetes) ಸಾಮಾನ್ಯವಾಗಿದೆ. ಸಂಶೋಧನೆಗಳ ಪ್ರಕಾರ, ಭಾರತ ಡಯಾಬಿಟಿಸ್ ರಾಜಧಾನಿಯಾಗಿ ಬೆಳೆಯುತ್ತಿದೆ. ಒಮ್ಮೆ ಡಯಾಬಿಟಿಸ್ ಬಂದರೆ, ಜೀವನ ಪೂರ್ತಿ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡೇ, ಜೀವನ ನಡೆಯಬೇಕಾಗುತ್ತದೆ. ವೈದ್ಯರು ನೀಡುವ ಮಾತ್ರೆಗಳ ಹೊರತಾಗಿ ಕೆಲ ಮನೆಮದ್ದುಗಳ ಮೂಲಕ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹೀಗಾಗಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕೆಲ ಪಾನೀಯಗಳನ್ನು ಸೇವಿಸಿದರೆ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ. ಅವುಗಳ ವಿವರ ಇಲ್ಲಿದೆ ನೋಡಿ.

ತುಪ್ಪ ಮತ್ತು ಅರಿಶಿನ ಪುಡಿ :
ಡಯಾಬಿಟಿಸ್ಇರುವವರು ತುಪ್ಪ ಮತ್ತು ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಬಹಳ ಉತ್ತಮ. ಹಸುವಿನ ತುಪ್ಪವನ್ನು ಅರಿಶಿನ ಪುಡಿಯೊಂದಿಗೆ ಮಿಶ್ರಣ ಮಾಡಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ತರಬಹುದು.

ದಾಲ್ಚಿನ್ನಿ ನೀರು : ದಾಲ್ಚಿನ್ನಿಯು ಉತ್ತಮ ಮಸಾಲಾ ಪದಾರ್ಥವಾಗಿದ್ದು, ಜೊತೆಗೆ ಇದು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕೂಡಾ ಸಹಕಾರಿಯಾಗಿದೆ. ಒಂದು. ದಾಲ್ಚಿನ್ನಿಯು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ಇನ್ಸುಲಿನ್ ಪರಿಣಾಮಗಳನ್ನು ಅನುಕರಿಸುತ್ತದೆ. ಹೀಗಾಗಿ ಕಾಫಿ (Coffee) ಅಥವಾ ಚಹಾ ಕುಡಿಯುವ ಬದಲು ನೀವು ದಾಲ್ಚಿನ್ನಿ ನೀರನ್ನು ಕುಡಿಯುವುದು ಒಳ್ಳೆಯದು.

ಹಾಗಲಕಾಯಿ : ಹಾಗಲಕಾಯಿಯು ಇನ್ಸುಲಿನ್ (Insulin) ರೀತಿ ಕೆಲಸ ಮಾಡುತ್ತದೆ. ಹೀಗಾಗಿ ಡಯಾಬಿಟಿಸ್ ಇರುವವರಿಗೆ ಹಾಗಲಕಾಯಿ ಅತ್ಯುತ್ತಮ ತರಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಹಾಗಲಕಾಯಿಯ ಸೇವನೆಯು ನಿಮ್ಮ ಜೀವಕೋಶಗಳು ಗ್ಲೂಕೋಸ್ ಅನ್ನು ಬಳಸಲು ಸಹಾಯ ಮಾಡುತ್ತದೆ. ಆಗ ದೇಹದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಡಯಾಬಿಟಿಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ (Juice) ಅಥವಾ ಹಾಗಲಕಾಯಿ ಪಲ್ಯವನ್ನು ಉಪಹಾರಕ್ಕೆ ಸೇವಿಸಬಹುದು.

ಮೆಂತ್ಯ ನೀರು : ಮೆಂತ್ಯ ಪುಡಿಯ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇದರೊಂದಿಗೆ ತೂಕ ಕಡಿಮೆ ಮಾಡಿ, ಡಯಾಬಿಟಿಸ್ ನಿಯಂತ್ರಣ ಮಾಡಿಕೊಳ್ಳಬಹುದು. ಕಾರ್ಬೋಹೈಡ್ರೇಟ್ಗಳ (Carbohydrates) ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಿ, ಮಧುಮೇಹವನ್ನು ನಿಯಂತ್ರಿಸಲು ಮೆಂತ್ಯವು ಸಹಾಯ ಮಾಡುತ್ತದೆ.

Exit mobile version