ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಯಾವ ಜಿಲ್ಲೆಗೆ ಎಷ್ಟು ಪರಿಹಾರ.? ಇಲ್ಲಿದೆ ವಿವರ

Bengaluru: ರಾಜ್ಯ ವಿಪತ್ತು ನಿರ್ವಹಣಾ ಅನುದಾನದ ನಿಧಿಯಿಂದ (Drought Relief released – Kar Govt) ಬರ ಪರಿಹಾರವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅಧಿಕೃತ

ಆದೇಶವನ್ನು ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಕೊನೆಗೂ ಬರದಿಂದ ಕಂಗಾಲಾಗಿರುವ ರೈತರಿಗೆ (Farmer) ಪರಿಹಾರ ನೀಡಲು ಮುಂದಾಗಿದೆ.

ರಾಜ್ಯದ 31 ಜಿಲ್ಲೆಗಳಿಗೆ ಒಟ್ಟು 324 ಕೋಟಿ ರೂಪಾಯಿ ಬರ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದ 216 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಈಗಾಗಲೇ

ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಎಲ್ಲ ತಾಲೂಕುಗಳಿಗೆ ಬರ ಪರಿಹಾರ ದೊರೆಯಲಿದೆ. ಇನ್ನು ಕೇಂದ್ರ ಸರ್ಕಾರ ಯಾವುದೇ ಬರ ಪರಿಹಾರವನ್ನು ರಾಜ್ಯಕ್ಕೆ ನೀಡಿಲ್ಲ. ಕೇಂದ್ರದಿಂದ ತಂಡ ರಾಜ್ಯಕ್ಕೆ

ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದೆ. ಇನ್ನು ರಾಜ್ಯ ಸರ್ಕಾರ 17 ಸಾವಿರ ಕೋಟಿ ಬರ ಪರಿಹಾರ (Drought Relief released – Kar Govt) ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಯಾವ ಜಿಲ್ಲೆಗೆ ಎಷ್ಟು ಅನುದಾನ?
ಬೆಂಗಳೂರು (Bengaluru) ನಗರ- 7.50 ಕೋಟಿ.
ಬೆಂಗಳೂರು ಗ್ರಾಮಾಂತರ- 6 ಕೋಟಿ.
ದಾವಣಗೆರೆ- 9 ಕೋಟಿ.
ಚಾಮರಾಜನಗರ-7.50 ಕೋಟಿ
ಚಿಕ್ಕಬಳ್ಳಾಪುರ- 9 ಕೋಟಿ.

ಕಲಬುರ್ಗಿ- 16.50 ಕೋಟಿ.
ಬೀದರ್- 4.50 ಕೋಟಿ.
ಕೋಲಾರ (Kolara) – 9 ಕೋಟಿ.
ಬೆಳಗಾವಿ- 22.50 ಕೋಟಿ.
ರಾಮನಗರ-7.50 ಕೋಟಿ.

ಮೈಸೂರು (Mysore) – 13.50 ಕೋಟಿ.
ಮಂಡ್ಯ- 10.50 ಕೋಟಿ.
ಧಾರವಾಡ-12 ಕೋಟಿ.
ಕೊಡಗು (Kodagu)-7.50 ಕೋಟಿ.
ದಕ್ಷಿಣ ಕನ್ನಡ- 3 ಕೋಟಿ.
ಬಳ್ಳಾರಿ- 7.50 ಕೋಟಿ.

ಕೊಪ್ಪಳ- 10.50 ಕೋಟಿ.
ತುಮಕೂರು-15 ಕೋಟಿ.
ಚಿತ್ರದುರ್ಗ- 9 ಕೋಟಿ.
ರಾಯಚೂರು- 9 ಕೋಟಿ.
ಬಾಗಲಕೋಟೆ- 13.50 ಕೋಟಿ.

ವಿಜಯಪುರ- 18 ಕೋಟಿ.
ಶಿವಮೊಗ್ಗ (Shivamogga)-10.50 ಕೋಟಿ.
ಹಾಸನ- 12 ಕೋಟಿ.
ಚಿಕ್ಕಮಗಳೂರು-12 ಕೋಟಿ.
ಉತ್ತರ ಕನ್ನಡ-16.50 ಕೋಟಿ.

ಗದಗ-10.50 ಕೋಟಿ.
ಹಾವೇರಿ (Haveri)-12 ಕೋಟಿ.
ಯಾದಗಿರಿ-9 ಕೋಟಿ.
ವಿಜಯನಗರ-9 ಕೋಟಿ.
ಉಡುಪಿ (Udupi)- 4.50 ಕೋಟಿ.

ಇದನ್ನು ಓದಿ: ಹೊಸ ಮೊಬೈಲ್ ಖರೀದಿಸಬೇಕಾ? ಹಾಗಾದ್ರೆ ಇದೇ ತಿಂಗಳು ಖರೀದಿಸಿ: ಬರೋಬ್ಬರಿ 11 ಫೋನುಗಳು ಬಿಡುಗಡೆ

Exit mobile version