ನಟ ಪುನೀತ್ ನಿಧನ ಹಿನ್ನಲೆ ಡಾ.ರಮಣ್ ರಾವ್ ಮನೆಗೆ ಹೆಚ್ಚಿನ ಪೊಲೀಸ್ ಭದ್ರತೆ

ಬೆಂಗಳೂರು : ನಟ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದ ವೈದ್ಯ ಮತ್ತು ಅಪ್ಪುಗೆ ಚಿಕಿತ್ಸೆ ನೀಡಿದ್ದ ರಮಣಶ್ರೀ ಆಸ್ಪತ್ರೆಯ ವೈದ್ಯ ಡಾ.ರಮಣ್ ರಾವ್ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಅಪ್ಪು ಸಾವಿನ ತನಿಖೆ ಆಗ್ರಹಿಸಿ ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಡಾ.ರಮಣ್ ರಾವ್ ನಿವಾಸಕ್ಕೆ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

ಒಂದು ಕೆಎಸ್ ಆರ್ ಪಿ ತುಕಡಿ ಹಾಗೂ ಸದಾಶಿವ ನಗರ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ..ನಟ ಪುನೀತ್ ರಾಜ್ ಕುಮಾರ್ ಗೆ ವೈದ್ಯ ರಮಣ್ ರಾವ್ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ಮೊನ್ನೆ ಅರುಣ್ ಪರಮೇಶ್ವರ್ ಎಂಬುವವರು ದೂರು ನೀಡಿ ನಟ ಪುನೀತ್ ರಾಜ್ ಕುಮಾರ್ ಸಾವಿನ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ

ಇನ್ನು ತ್ಯಾಗರಾಜ್ ಎಂಬುವರು ಸಹ ದೂರು ನೀಡಿದ್ದಾರೆ..ದಿನೇ ದಿನೇ ಡಾ.ರಮಣ್ ರಾವ್  ಪುನೀತ್ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸಿದ್ರಾ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ...ಹೀಗಾಗಿ ಅಭಿಮಾನಿಗಳು ರಮಣ್ ರಾವ್ ಮನೆ ಬಳಿ ಬಂದು ದಂದಾಲೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ..ಹೀಗಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ..ಇನ್ನು ಡಾ.ರಮಣ್ ರಾವ್ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗುತ್ತಲೆ ಇವೆ..

ಇನ್ನು ಅಪ್ಪು ಸಾವಿನ ಕುರಿತು ಎದ್ದಿರುವ ಹಲವಾರು ಪ್ರಶ್ನೆಗಳ ಕುರಿತು ವೈದ್ಯ ಡಾ.ರಮಣ್ ರಾವ್ ಮಾತನಾಡಿದ್ದು.. ಅಪ್ಪು ಅಗಲಿದ ನೋವಿನಲ್ಲಿರುವ ಅಭಿಮಾನಿಗಳು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸಹಜ ಎಂದಿದ್ದಾರೆ. ಇನ್ನು ಯಾವುದೇ ಗಣ್ಯ ವ್ಯಕ್ತಿಯ ದಿಢೀರ್ ಸಾವಾದಾಗ ಇಂತಹ ಪ್ರಕ್ರಿಯೆಗಳು ಬರಲಾರಂಭಿಸುತ್ತವೆ ಎಂದಿದ್ದಾರೆ.

 

 

Exit mobile version