ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.

Bangalore : ಬೆಂಗಳೂರು ನಗರದ ಸುತ್ತಲು 9 ಕಡೆಗಳಲ್ಲಿ ಸಿಸಿಬಿ ಪೋಲಿಸರು (CCB Police) ಕಾರ್ಯಾಚರಣೆ ನಡೆಸಿ ದೇಶಕ್ಕೆ ಮಾರಕವಾಗಿರುವ ಡ್ರಗ್ಸ್ ಜಾಲವನ್ನು (Drugs)ಪತ್ತೆ ಹಚ್ಚಿ ರೂ.2.48 ಕೋಟಿ ಮೌಲ್ಯದಷ್ಟು (Drug network in Bangalore) ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಎಚ್. ಎಸ್. ಆರ್. ಲೇ ಔಟ, ಪುಟ್ಟೇನಹಳ್ಳಿ, ತಲಘಟ್ಟಪುರ, ಕೋರಮಂಗಲ, ಹೆಣ್ಣೂರು, ಬೊಮ್ಮನಹಳ್ಳಿ, ಕೆ. ಆರ್. ಪುರ ಹಾಗೂ ಬಾಣಸವಾಡಿ ಠಾಣಾ ವ್ಯಾಪಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಅದಲ್ಲದೆ ವಿದೇಶಿ ಪ್ರಜೆಗಳು ಸೇರಿ 13 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪತ್ರಿಕಾ ಗೋಷ್ಠಿ ಯಲ್ಲಿ ಪೋಲಿಸ್ ಕಮೀಷನರ್ ಪ್ರತಾಪರೆಡ್ಡಿ (Police Commissioner Prathapareddy) ತಿಳಿಸಿದ್ದಾರೆ.

ಕಾರಿನ ಸಿಟನಲ್ಲಿ ಡ್ರಗ್ಸ್ : ಬೆಂಗಳೂರಿನ ಎಚ್. ಎಸ್. ಆರ್. ಲೇಔಟ್ ಠಾಣಾವ್ಯಾಪ್ತಿಯಲ್ಲಿ ಸಿಸಿಬಿ ಪೋಲೀಸರ ಅತಿಥಿಯಾಗಿರುವ ಲೋಕೇಶ್ ತನ್ನ ಕಾರಿನ ಸಿಟಿನೊಳಗೆ ಡ್ರಗ್ಸ್ ಬಚ್ಚಿಡುತ್ತಿದ್ದ.

ಮತ್ತು ಅದೇ ಕಾರಿನಲ್ಲಿ ತಿರುಗಾಡಿ ಕೆಲ ಐಟಿ -ಬಿಟಿ ಕಂಪನಿ (IT-BT Company) ಉದ್ಯೋಗಿಗಳು ಹಾಗೂ ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ (Drug network in Bangalore) ಮಾಡುತ್ತಿದ್ದ ಎಂದು ಪೋಲಿಸ್ ಕಮಿಷನರ ಹೇಳಿದರು.

ಇದನ್ನೂ ಓದಿ : https://vijayatimes.com/kumarswamy-tweet/

ಡ್ರಗ್ಸ್‌ಗಾಗಿ ಕಮಿಷನ್‌ ದಂಧೆ!: ರಾಜಧಾನಿಯಲ್ಲಿ ಡಗ್ಸ್‌ ಹಾವಳಿ ವಿಪರೀತ ಹೆಚ್ಚಿದ್ದು, ಡ್ರಗ್ಸ್‌ ಮಾಫಿಯಾದ ಪ್ರಮುಖ ಟಾರ್ಗೆಟ್ಟೇ ವಿದ್ಯಾರ್ಥಿಗಳು.

ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಶಾಲಾ ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್‌ ಬಲೆಗೆ ಬಿದ್ದು ಒದ್ದಾಡುತ್ತಿದ್ದಾರೆ. ತಂದೆ ತಾಯಿಗೆ ಗೊತ್ತಿಲ್ಲದೆ ಅಭ್ಯಾಸ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು,

ಡ್ರಗ್ಸ್‌ ತೆಗೆದುಕೊಳ್ಳಲು ಹಣ ಸಾಲದೆ ತನ್ನ ಸ್ನೇಹಿತರನ್ನೂ ಈ ಜಾಲಕ್ಕೆ ಬೀಳಿಸಿ ಡ್ರಗ್ಸ್‌ ಮಾರೋ ಏಜೆಂಟರಿಂದ ಕಮಿಷನ್ ಪಡೆಯೋ ಕರಾಳ ಬೆಳವಣಿಗೆಯೂ ರಾಜ್ಯದಲ್ಲಿ ನಡೆಯುತ್ತಿದೆ.

ಇದೊಂದು ರೀತಿ ಚೈನ್‌ ಲಿಂಕ್ ಬ್ಯುಸಿನೆಸ್‌ ಥರಾ ನಡೀತಿದ್ದು, ಹೆಚ್ಚೆಚ್ಚು ಜನರನ್ನು ಈ ಡ್ರಗ್ಸ್‌ ಜಾಲಕ್ಕೆ ಬೀಳಿಸಿದ್ರೆ ಹೆಚ್ಚೆಚ್ಚು ಕಮಿಷನ್‌ ಪಡೆಯುವ ವ್ಯವಸ್ಥೆ ಈ ದಂಧೆಯಲ್ಲಿ ನಡೆಯುತ್ತಿದೆ.

ಇದನ್ನೂ ಓದಿ : https://vijayatimes.com/congress-assembly-election-list/

ತಂದೆ ತಾಯಿಯಿಂದ ದೂರ ಇರುವ, ಹಾಸ್ಟೆಲ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಚಲನವಲನ ಹಾಗೂ ಅವರ ವರ್ತನೆ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ಸದಾ ನಿಗಾ ಇಡಬೇಕು.

ಯಾಕಂದ್ರೆ ಮನೆಯಿಂದ ದೂರ ಇರುವ ವಿದ್ಯಾರ್ಥಿಗಳನ್ನೇ ಈ ಮಾಫಿಯಾ ಮಂದಿ ಟಾರ್ಗೆಟ್‌ ಮಾಡ್ತಿದ್ದಾರೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ತುಂಬಾನೇ ಕೇರ್‌ಫುಲ್ ಆಗಿರಬೇಕು.

ಮಕ್ಕಳ ಏಕಾಂತವಾಗಿರೋದು. ಮನೆಯಲ್ಲಿ ಯಾರ ಜೊತೆಯೂ ಬೆರೆಯದೆ ದೂರ ಉಳಿಯುವುದು.

ಇಂಥಾ ಗುಣಗಳು ಕಂಡು ಬಂದ್ರೆ ಬೇಗ ಅವರನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಿ ಯಾಕಂದ್ರೆ ಇದು ನಿಮ್ಮ ಮಕ್ಕಳ ಚಟದ ಆರಂಭಿಕ ಲಕ್ಷಣಗಳಾಗಿರಬಹುದು.

Exit mobile version