ದುನಿಯಾ ವಿಜಿ ತಂದೆ ವಿಧಿವಶ

ಬೆಂಗಳೂರು: ನಟ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ (81) ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ತೀವ್ರ ಅಸ್ವಸ್ಥರಾಗಿದ್ದ ರುದ್ರಪ್ಪ ಅವರನ್ನು ಕಳೆದ 2 ದಿನದ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 7.30ಕ್ಕೆ ನಿಧನರಾಗಿದ್ದಾರೆ. ಕಳೆದ ಜುಲೈನಲ್ಲಿ ವಿಜಯ್​ ಅವರ ತಾಯಿ ನಾರಾಯಣಮ್ಮ ಅಸುನೀಗಿದ್ದರು. ಇದೀಗ ಅವರ ತಂದೆಯೂ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಆನೇಕಲ್​ನ ಕುಂಬಾರಹಳ್ಳಿಯಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಂದೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ದುನಿಯಾ ವಿಜಯ್ ”ಮಿಸ್‌ ಯು ಅಪ್ಪ” ಎಂದು ಬರೆದುಕೊಂಡಿದ್ದಾರೆ. ದುನಿಯಾ ವಿಜಯ್ ತಂದೆ ಅಗಲಿಕೆಗೆ ವಿಜಯ್ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Exit mobile version