ಜಾರಿ ನಿರ್ದೇಶನಾಲಯ ಬಂಧಿಸಿದ ಈ ಸೆಂಥಿಲ್‌ ಬಾಲಾಜಿ ಯಾರು? ಸೆಂಥಿಲ್‌ ಬಂಧನಕ್ಕೆ ಪ್ರತಿಪಕ್ಷಗಳ ವಿರೋಧ ಏಕೆ?

Chennai : ತಮಿಳುನಾಡು ವಿದ್ಯುತ್ ಸಚಿವ ಸೆಂಥಿಲ್ (ED arrested Senthil Balaji) ಬಾಲಾಜಿ ಅವರನ್ನು 18 ಗಂಟೆಗಳ ವಿಚಾರಣೆಯ ನಂತರ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ

ಬೆಳಗ್ಗೆ ಬಂಧಿಸಿದ್ದಾರೆ. ಈ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಬಂಧನದ ನಂತರ ಸೆಂಥಿಲ್ ಬಾಲಾಜಿ ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕವಾಗಿ

ಪ್ರಸಾರವಾಗಿವೆ. ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಸೆಂಥಿಲ್ ಬಾಲಾಜಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತಿರುಗಿಬಿದ್ದಿದ್ದು, 2011ರಿಂದ 2016ರ ನಡುವೆ ಸಾರಿಗೆ ಕ್ಷೇತ್ರದಲ್ಲಿ ನಡೆದಿದ್ದ ಲಂಚ ಹಗರಣದಲ್ಲಿ ಸೆಂಥಿಲ್ ಬಾಲಾಜಿ ಅವರನ್ನು ಶಿಕ್ಷಣ ಇಲಾಖೆ ಬಂಧಿಸಿದೆ.

ಈ ಅವಧಿಯಲ್ಲಿ ಸೆಂಥಿಲ್ ಬಾಲಾಜಿ ಎಐಎಡಿಎಂಕೆ(AIADMK) ನೇತೃತ್ವದ ತಮಿಳುನಾಡು ಸರ್ಕಾರದ ಸಾರಿಗೆ ಸಚಿವರಾಗಿದ್ದರು. ಪ್ರಸ್ತುತ, ಅವರು ಎಂಕೆ ಸ್ಟಾಲಿನ್ (M K Stalin) ಅವರ ಸಂಪುಟದಲ್ಲಿ

ವಿದ್ಯುತ್ ಮತ್ತು ಅಬಕಾರಿ ತೆರಿಗೆ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಅಷ್ಟಕ್ಕೂ ಈ ಸೆಂಥಿಲ್ ಬಾಲಾಜಿ ಯಾರು? ಕೇಂದ್ರ ಸರ್ಕಾರವನ್ನು ಏಕೆ ವಿರೋಧಿಸಬೇಕು? ಇಲ್ಲಿದೆ ತಮಿಳುನಾಡು

(ED arrested Senthil Balaji) ವಿದ್ಯುತ್ ಸಚಿವರ ಬಂಧನ ಪ್ರಕರಣದ ವಿವರಣೆ.

ಯಾರಿವರು ಸೆಂಥಿಲ್‌ ಬಾಲಾಜಿ?

ತಮಿಳುನಾಡಿನಿಂದ ನಾಲ್ಕು ಬಾರಿ ಶಾಸಕರಾಗಿದ್ದ ಸೆಂಥಿಲ್ ಬಾಲಾಜಿ ಅವರು ಎಐಎಡಿಎಂಕೆ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. ಸೆಂಥಿಲ್ ಬಾಲಾಜಿ ಅವರು 2006 ರಲ್ಲಿ ಶಾಸಕರಾಗಿ ತಮಿಳುನಾಡು

ವಿಧಾನಸಭೆಗೆ ಪ್ರವೇಶಿಸಿದರು ಮತ್ತು 2011 ರಿಂದ 2015 ರವರೆಗೆ ಜೆ ಜಯಲಲಿತಾ(J Jayalalitha) ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಆದಾಗ್ಯೂ, 2018 ರಲ್ಲಿ, ಸೆಂಥಿಲ್ ಡಿಎಂಕೆ (DMK) ಪಕ್ಷದತ್ತ

ಹೆಜ್ಜೆ ಹಾಕಿದರು ಮತ್ತು ಅವರು ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡರು. ಜಯಲಲಿತಾ ಅವರ ಆರೋಗ್ಯ ಚೇತರಿಕೆಗಾಗಿ ವಿಶೇಷ ಪೂಜೆಗಳು ಮತ್ತು

ಲಕ್ಷಾಂತರ ದೀಪಗಳನ್ನು ಬೆಳಗಿಸಿದ್ದರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಯಲಲಿತಾ ಖುಲಾಸೆಗೊಂಡಾಗ ಸೆಂಥಿಲ್ ಜಯಲಲಿತಾ ಅವರಿಗೆ ಬೆಂಬಲವಾಗಿ ತಲೆ ಬೋಳಿಸಿಕೊಂಡಿದ್ದರು.

ಆದಾಗ್ಯೂ, ಜಯಲಲಿತಾ ಮತ್ತು ಸೆಂಥಿಲ್ ಭಿನ್ನಾಭಿಪ್ರಾಯದಿಂದ 2015 ರಲ್ಲಿ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡರು. 2018ರಲ್ಲಿ ಎಐಎಡಿಎಂಕೆ ತೊರೆದಿದ್ದ ಸೆಂಥಿಲ್ ಬಾಲಾಜಿ ಡಿಎಂಕೆ ಸೇರಿದ್ದರು.

ಕೆಲವು ವರ್ಷಗಳ ನಂತರ ಡಿಎಂಕೆಯಲ್ಲಿ ಅಧಿಕಾರಕ್ಕೆ ಬಂದ ಸೆಂಥಿಲ್, ಎಂಕೆ ಸ್ಟಾಲಿನ್ ಸರ್ಕಾರದಲ್ಲಿ ಪ್ರಮುಖ ಸ್ಥಾನಗಳಲ್ಲಿ ಸಚಿವರಾಗಿದ್ದರು. ಅಲ್ಲಿನ ಹಲವು ಯುವಕರ ಮೊಬೈಲ್, ಶರ್ಟ್, ಸೈಕಲ್,

ಇದನ್ನು ಓದಿ: ಪ್ರತಿಪಕ್ಷಗಳ ತಂತ್ರಗಾರಿಕೆ ಸಭೆ ಶಿಮ್ಲಾ ಬದಲಿಗೆ ಬೆಂಗಳೂರಿಗೆ ಶಿಫ್ಟ್..!

ಕಾರುಗಳಲ್ಲಿ ಸೆಂಥಿಲ್ ಭಾವಚಿತ್ರ ಕಾಣಸಿಗುವಷ್ಟು ಪ್ರಸಿದ್ದಿಯಾದರು.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಇದೀಗ ಸೆಂಥಿಲ್ ಬಾಲಾಜಿ ಬಂಧನಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ (BJP) ಬೆದರಿಕೆಗೆ ಡಿಎಂಕೆ ಹೆದರುವುದಿಲ್ಲ. 2024ರಲ್ಲಿ ಸರಿಯಾಗಿ ಪಾಠ ಕಲಿಸಲಾಗುವುದು. ಡಿಎಂಕೆ ನಾಯಕರು ಮಾತ್ರವಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge),

ಎಎಪಿ ಅಧ್ಯಕ್ಷ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತು ಅನೇಕ ವಿರೋಧ ಪಕ್ಷದ ನಾಯಕರು ಕೇಂದ್ರದ ಕ್ರಮವನ್ನು ಟೀಕಿಸಿದ್ದಾರೆ.

ಸೆಂಥಿಲ್ ಬಂಧನಕ್ಕೆ ಪ್ರತಿಪಕ್ಷಗಳ ವಿರೋಧ ಏಕೆ?

ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಾಗಲೇ ತಮಿಳುನಾಡಿನ ಪ್ರಭಾವಿ ಸಚಿವ ಸೆಂಥಿಲ್ ಬಾಲಾಜಿ ಬಂಧನ ಪ್ರತಿಪಕ್ಷಗಳನ್ನು ಕೆರಳಿಸಿದ್ದು, ಆಡಳಿತ ಪಕ್ಷ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಸೆಂಥಿಲ್ ಬಾಲಾಜಿ ಅವರು ಡಿಎಂಕೆಯ ಅತ್ಯುತ್ತಮ ರಾಜಕೀಯ ತಂತ್ರಜ್ಞ, ಟ್ರಬಲ್‌ ಶೂಟರ್ ಎಂದು ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಇವರ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎನ್ನಲಾಗಿದೆ.

ಯಾವ ಪ್ರಕರಣದಲ್ಲಿ ಸೆಂಥಿಲ್‌ ಬಂಧನ?

ತಮಿಳುನಾಡಿನ ಮೆಟ್ರೋಪಾಲಿಟನ್ ಸಾರಿಗೆ ನಿಗಮವು 2014 ನವೆಂಬರ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಐದು ಪ್ರತ್ಯೇಕ ಜಾಹೀರಾತುಗಳ ಮೂಲಕ ಮಾಡಿಕೊಂಡಿತ್ತು. 610 ಕಂಡಕ್ಟರ್‌ಗಳು,

746 ಚಾಲಕರು,13 ಕಿರಿಯ ಎಂಜಿನಿಯರ್‌ಗಳು,261 ಕಿರಿಯ ವ್ಯಾಪಾರಿಗಳು ಮತ್ತು 40 ಸಹಾಯಕ ಎಂಜಿನಿಯರ್‌ಗಳ ಹುದ್ದೆಗಳು ಭರ್ತಿಯಾಗಿದ್ದವು.ನಂತರ ಭ್ರಷ್ಟಾಚಾರದ ಆರೋಪವು ಈ ನೇಮಕಾತಿ

ಪ್ರಕ್ರಿಯೆಯಲ್ಲಿ ಕೇಳಿಬಂದಿತ್ತು.ಸೆಂಥಿಲ್‌ ಬಾಲಾಜಿ ಆಗ ಸಾರಿಗೆ ಸಚಿವರಾಗಿದ್ದ ಕಾರಣ ಸೆಂಥಿಲ್‌ ಬಾಲಾಜಿ ಅವರ ಮೇಲೇಯೇ ಈ ಆರೋಪ ಕೇಳಿಬಂದಿತ್ತು.2021ರಲ್ಲಿ ಜಾರಿ ನಿರ್ದೇಶನಾಲಯ

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಈಗ ಸಚಿವ ಸೆಂಥಿಲ್‌ ಬಾಲಾಜಿಯನ್ನು ಬಂಧಿಸಲಾಗಿದೆ.

ರಶ್ಮಿತಾ ಅನೀಶ್

Exit mobile version