ಪ.ಬಂಗಾಳದ ಸಚಿವರ ಸಹಾಯಕರ ಮೇಲೆ ಇ.ಡಿ ದಾಳಿ ; 20 ಕೋಟಿ ರೂ. ಇ.ಡಿ ವಶಕ್ಕೆ!

SSC Scam case

ಪಶ್ಚಿಮ ಬಂಗಾಳದ(West Bengal) ಶಿಕ್ಷಣ ನೇಮಕಾತಿ ಅಕ್ರಮವನ್ನು ಪತ್ತೆಹಚ್ಚಲು ಮುಂದಾದ ಜಾರಿ ನಿರ್ದೇಶನಾಲಯ(ED) ತಂಡಕ್ಕೆ ಪ್ರಾಥಮಿಕ ಶಿಕ್ಷಣ ಬೋರ್ಡ್‌ ನಲ್ಲಿ ಬರೊಬ್ಬರಿ 20 ಕೋಟಿ ರೂ. ಅಕ್ರಮ(Illegal) ಹಣವನ್ನು ಇ.ಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನು ರಾಜಕೀಯ ಪಕ್ಷಗಳು ಹಾಸ್ಯ ಮಾಡಿದ್ದು, ಬಿಜೆಪಿ ಪಕ್ಷ ‘ಚಿತ್ರ ಅಭಿ ಬಾಕಿ ಹೈ’ ಎಂದು ವ್ಯಂಗ್ಯವಾಡಿದೆ.

ಎಸ್‌ಎಸ್‌ಸಿ ಹಗರಣ(SSC Scam Case) ಪ್ರಕರಣದ ಶೋಧ ಕಾರ್ಯಾಚರಣೆಯಲ್ಲಿ ಅರ್ಪಿತಾ ಮುಖರ್ಜಿ(Arpitha Mukharjee) ಅವರ ವಸತಿ ಆವರಣದಿಂದ ಇ.ಡಿ ಸುಮಾರು 20 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದು, ಇದೇ ವೇಳೆ ಬಿಜೆಪಿ ಪಕ್ಷವೂ(BJP Party) ಟಿಎಂಸಿ(TMC) ವಿರುದ್ಧ ವಾಗ್ದಾಳಿ ನಡೆಸಿದೆ. ಹಿಂದಿಯಲ್ಲಿ “ಯೇ ತೋ ಬಾಸ್ ಟ್ರೈಲರ್ ಹೈ, ಚಿತ್ರ ಅಭಿ ಬಾಕಿ ಹೈ..”(ಇದು ಕೇವಲ ಸಿನಿಮಾವಷ್ಟೇ…ಚಿತ್ರ ಇನ್ನು ಬಾಕಿ ಇದೆ) ಎಂದು ಹೇಳಿದೆ.

ಶುಕ್ರವಾರ ರಾತ್ರಿ ಜಾರಿ ನಿರ್ದೇಶನಾಲಯ (ಇಡಿ) ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ನಿವಾಸದಿಂದ 20 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡ ನಂತರ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಟ್ವೀಟ್(Tweet) ಮಾಡಿ ಹೇಳಿದ್ದಾರೆ. ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿ ನೇಮಕಾತಿ ಹಗರಣಗಳಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಸಂಸ್ಥೆ ಶೋಧ ನಡೆಸಿದ ನಂತರ ಅರ್ಪಿತಾ ಮುಖರ್ಜಿ ಅವರ ಮನೆಯ ಮೇಲೆ ದಾಳಿ ನಡೆದಿದೆ. ಹುಡುಕಾಟದ ಸಂದರ್ಭದಲ್ಲಿ,

ಇಡಿ ಅರ್ಪಿತಾ ಮುಖರ್ಜಿ ಅವರ ವಸತಿ ಆವರಣದಿಂದ ಅಂದಾಜು 20 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಈ ಮೊತ್ತವು ಎಸ್‌ಎಸ್‌ಸಿ ಹಗರಣದ ಅಪರಾಧದ ಆದಾಯ ಎಂದು ಶಂಕಿಸಲಾಗಿದೆ. ಅರ್ಪಿತಾ ಮುಖರ್ಜಿ ಅವರ ಮನೆಯಿಂದ ವಶಪಡಿಸಿಕೊಂಡಿರುವ 500 ಮತ್ತು 2000 ರೂ. ಮುಖಬೆಲೆಯ ನೋಟುಗಳ ಫೋಟೊಗಳು ಅಕ್ರಮವನ್ನು ಬೆತ್ತಲು ಮಾಡಿವೆ. ಶೋಧನಾ ತಂಡವು ನಗದು ಎಣಿಕೆ ಯಂತ್ರಗಳ ಮೂಲಕ ನಗದು ಎಣಿಕೆಗೆ ಬ್ಯಾಂಕ್ ಅಧಿಕಾರಿಗಳ ನೆರವು ಪಡೆಯುತ್ತಿದೆ.

ಅರ್ಪಿತಾ ಮುಖರ್ಜಿ ಅವರ ಆವರಣದಿಂದ ಒಟ್ಟು 20 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ, ಅದರ ಉದ್ದೇಶ ಮತ್ತು ಬಳಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಇ.ಡಿ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

Exit mobile version