ರಾಜ್ಯದಲ್ಲಿ ಮತ್ತೆ ಚಿಕನ್-ಮೊಟ್ಟೆ ಬೆಲೆ ಏರಿಕೆ : ಮಾಂಸ ಪ್ರಿಯರಿಗೆ ಶಾಕ್ !

ಬೆಂಗಳೂರು: ದಿನಬಳಕೆಯ ವಸ್ತುಗಳಾದ ವಿದ್ಯುತ್, ತರಕಾರಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕರು ಈಗಾಗಲೇ (egg Chicken prices increased) ಬೆಚ್ಚಿಬಿದ್ದಿದ್ದಾರೆ ಇದೇ ವೇಳೆ ಕೋಳಿ

(Chicken) ಮತ್ತು ಮೊಟ್ಟೆ(Egg) ಬೆಲೆ ಸಹ ಇದೀಗ ಏರಿಕೆಯಾಗಿದ್ದು, ಮಾಂಸ ಪ್ರಿಯರನ್ನು ಅಚ್ಚರಿಗೆ ದೂಡಿದೆ.

ಹೌದು.. ಗರಿಷ್ಠ ತಾಪಮಾನ ಮತ್ತು ಹಿಟ್ ವೆವ್ಸ್(Hit waves) ಪರಿಣಾಮದಿಂದಾಗಿ ಕೋಳಿ ಮತ್ತು ಮೊಟ್ಟೆಯ ಬೆಲೆಗಳು ಏರುತ್ತಿವೆ. ಕೋಳಿ ಮತ್ತು ಮೊಟ್ಟೆಗಳ ಬೆಲೆಗಳು ಕಳೆದ ತಿಂಗಳಿನಿಂದ ಗರಿಷ್ಠ ಏರಿಕೆ ಕಂಡಿದೆ.

ಕೋಳಿ ( ಬಾಯ್ಲರ್ ) ಬೆಲೆ ಕಿಲೋಗೆ 200ರಿಂದ 210ಕ್ಕೆ ಏರಿಕೆಯಾಗಿದೆ. ಸಾ ಮಾನ್ಯವಾಗಿ ಸುಮಾರು 110 ರಿಂದ 120 ರೂ ಬೆಲೆ ಈ ಮೊದಲು ಇತ್ತು. ಇನ್ನು ಫಾರಂ ಕೋಳಿ (Farm Chicken) ಉತ್ಪದನೆಯ

ದರವೇ 140 ರೂ. ಇದ್ದು ಇದೀಗ ಗ್ರಾಹಕರಿಗೆ 180 ರಿಂದ 190 ರೂ ಗೆ (egg Chicken prices increased) ಸಿಗುತ್ತಿದೆ.

ಇದನ್ನೂ ಓದಿ : ಕೇಂದ್ರದಲ್ಲಿ ಅಕ್ಕಿ ದಾಸ್ತಾನು ಇದ್ದರೂ ಏಕೆ ಪೂರೈಕೆ ಮಾಡ್ತಿಲ್ಲ,ಅನ್ನಭಾಗ್ಯ ವಿಚಾರದಲ್ಲಿ ಕೇಂದ್ರದಿಂದ ರಾಜಕೀಯ; ಸಿದ್ದರಾಮಯ್ಯ ಆರೋಪ

ಕೋಳಿ ಬೆಲೆ ಮಾತ್ರವಲ್ಲ, ಮೊಟ್ಟೆ ಬೆಲೆಯೂ ಏರಿಕೆಯಾಗಿದೆ. ತಾಪಮಾನದೊಂದಿಗೆ ಮೊಟ್ಟೆಯ ಉತ್ಪಾದನೆಯು ಕಡಿಮೆಯಾಗುತ್ತದೆ. ಹಾಗಾಗಿ ಹಿಟ್ ವೆವ್ಸ್ ಹಾಗೂ ತಾಪಮಾನದಿಂದ ಮೊಟ್ಟೆಯ ಬೆಲೆಯೂ ಹೆಚ್ಚಾಗಿದೆ.

ಸಾಮಾನ್ಯವಾಗಿ 5 ರೂ.ಗೆ ಸಿಗುತ್ತಿದ್ದ ಮೊಟ್ಟೆ ಈಗ 6.5 ರೂ.ಗೆ ಏರಿಕೆಯಾಗಿದೆ. ಕಳೆದ ತಿಂಗಳಿಂದ ಇಲ್ಲಿಯವರೆಗೆ ಮೊಟ್ಟೆ ಬೆಲೆ 1.15 ಪೈಸೆ ಏರಿಕೆಯಾಗಿದ್ದು, ಮೊಟ್ಟೆ ಬೆಲೆ ಏರಿಕೆ ಮಾತ್ರವಲ್ಲ, ಉತ್ಪಾದನೆಯೂ ಕಡಿಮೆಯಾಗಿದೆ.

ರಾಜ್ಯದಲ್ಲಿ ನಿತ್ಯ 2.5 ಕೋಟಿ ಮೊಟ್ಟೆ ಬೇಡಿಕೆ ಇದೆ. ಆದ್ರೆ, ಇದೀಗ ರಾಜ್ಯದಲ್ಲಿ 2 ಕೋಟಿಯಷ್ಟು ಮೊಟ್ಟೆ ಮಾತ್ರ ಉತ್ಪಾದನೆಯಾಗುತ್ತಿದೆ. ಪಕ್ಕದ ರಾಜ್ಯ ಆಂಧ್ರಪ್ರದೇಶ (Andhra Pradesh) ಹಾಗೂ

ತಮಿಳುನಾಡಿನಿಂದ (Tamil Nadu) ಮೊಟ್ಟೆ ಬೇಡಿಕೆ ಇರುವುದರಿಂದ ಹೆಚ್ಚುವರಿ ಮೊಟ್ಟೆ ಬರುತ್ತಿದೆ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಯ ಅಧ್ಯಕ್ಷ ಕಾಂತರಾಜು ಮಾಹಿತಿ ನೀಡಿದ್ದಾರೆ.

ರಶ್ಮಿತಾ ಅನೀಶ್

Exit mobile version