ಹೋಮಿಯೋಪತಿ ಔಷಧ ಸೇವಿಸಿ ಒಂದೇ ಕುಟುಂಬದ 8 ಮಂದಿ ಸಾವು

ಛತ್ತೀಸಗಢ, ಮೇ. 06: ಯಾವುದೇ ಔಷಧಿ ಸೇವಿಸೋ ಮೊದಲು, ಎಚ್ಚರಿಕೆ ವಹಿಸದೇ ಇದ್ದರೇ, ಔಷಧವೇ ವಿಷವಾಗಿ ಪರಿಣಮಿಸಿಬಿಡಬಹುದು. ಏಕೆಂದರೆ ಈ ಸುದ್ದಿ ಓದಿ.

ಛತ್ತೀಸಗಢದ ಬಿಲಾಸ್ ಪುರದಲ್ಲಿ ಒಂದೇ ಕುಟುಂಬದ 8 ಮಂದಿ ಹೋಮಿಯೋಪಥಿ ವೈದ್ಯರೊಬ್ಬರ ಬಳಿಗೆ ಚಿಕಿತ್ಸೆಗಾಗಿ ತೆರಳಿದ್ದಾರೆ. ಆದರೆ ಆ ಹೋಮಿಯೋಪಥಿ ವೈದ್ಯರು ಆ ಕುಟುಂಬದವರಿಗೆ Drosera 30 ಎಂಬಂತ ಮಾತ್ರೆ ನೀಡಿದ್ದಾರೆ. ಹೀಗೆ ವೈದ್ಯರು ನೀಡಿದಂತ ಮಾತ್ರೆ ಸೇವಿಸಿದ ಒಂದೇ ಕುಟುಂಬದ 8 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಭೀಕರ ದುರ್ಘಟನೆಯೊಂದು ಸಂಭವಿಸಿದೆ.

ಅಂದಹಾಗೇ ಆ ಅಲೋಪತಿ ವೈದ್ಯ ನೀಡಿದ್ದಂತ ಮಾತ್ರೆಯಲ್ಲಿ ಶೇ.91ರಷ್ಟು ಕಳ್ಳಭಟ್ಟಿ ಬೆರೆಸಿ ತಯಾರಿಸಿದ ಔಷಧವಾಗಿತ್ತೆಂಬುದಾಗಿಯೂ ತಿಳಿದು ಬಂದಿದೆ. ಹೀಗೆ ಔಷಧಿ ನೀಡಿದ್ದಂತ ಅಲೋಪತಿ ವೈದ್ಯ ಔಷಧಿ ಸೇವಿಸಿದ ನಂತರ 8 ಜನರು ಸಾವನ್ನಪ್ಪಿದ ಬಳಿಕ, ವೈದ್ಯ ಈಗ ನಾಪತ್ತೆಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವೈದ್ಯನ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version