ಎಳನೀರು ಸೇವಿಸುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ!

ನಿಸರ್ಗದತ್ತವಾದ ಪರಿಶುದ್ಧವಾದ ಪಾನೀಯ ಎಳನೀರು ಇದನ್ನು ಯಾರು ಬೇಕಾದರೂ ಕುಡಿಯಬಹುದು. ದಿನಕ್ಕೊಂದು ಎಳನೀರು ಕುಡಿದರೆ ನಮ್ಮ ದೇಹಕ್ಕೆ ಅದು ಅಮೃತ ಸಮಾನವಾಗಿರುತ್ತದೆ.ಯಾವುದೇ ಕೊಲೆಸ್ಟರಾಲ್ ಇಲ್ಲದೆ  ಮಾನವ ದೇಹಕ್ಕಿದು ಜೀವಜಲವಾಗಿದೆ. ಯಾವುದೇ ಅಡ್ಡ ಪರಿಣಾಮವಿಲ್ಲದ ಏಕೈಕ ತಾಜಾತನದಿಂದ ಕೂಡಿದ ಪಾನೀಯ ಇದಾಗಿದೆ.

ದೇಹದಲ್ಲಿರುವ ಖನಿಜ ವನ್ನು ಹೊರಹಾಕುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಪೊಟಾಷಿಯಂ ಹಾಗೂ ದೇಹಕ್ಕೆ ಅಗತ್ಯವಾದ ವಿಟಮಿನ್ ಖನಿಜಾಂಶವನ್ನು ಒಳಗೊಂಡಿದೆ.  ಎಳನೀರನ್ನು ಕುಡಿಯುವುದರಿಂದ ರಕ್ತಸಂಚಾರ ಸರಾಗವಾಗುತ್ತದೆ. ದೇಹಕ್ಕೆ ತಂಪು ನೀಡುತ್ತದೆ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಬಿಸಿಲು ಕಾಲದಲ್ಲಂತೂ ಇದು ಚೀತೋಹಾರಿ ಪಾನೀಯವಾಗಿದೆ. ಅಶಕ್ತಿಯಿಂದ ಕೂಡಿದವರಿಗೆ ಹೊಸ ಚೈತನ್ಯವನ್ನು ಇದು ನೀಡುತ್ತದೆ.ಔಷಧಿಯ ಗುಣಧರ್ಮಗಳಿಂದ ಕೂಡಿರುವುದರಿಂದ  ಯಾವುದೇ ಅಡ್ಡಪರಿಣಾಮವಿಲ್ಲದೆ ದೇಹವನ್ನು ಕಾಪಾಡುತ್ತದೆ. ಹೊಟ್ಟೆಯಲ್ಲಿ ಯಾವುದೇ ಕಾಯಿಲೆ ಇದ್ದರೂ ಇದನ್ನು ಕುಡಿದರೆ ಅತ್ಯಂತ ದಿವ್ಯ ಔಷಧಿಯಾಗಿ ಪರಿಣಮಿಸುತ್ತದೆ. ಅನೇಕ ಪೌಷ್ಟಿಕಾಂಶಗಳಿಂದ ಸಮೃದ್ಧಿಯಾದ ಎಳನೀರನ್ನು ಕುಡಿದು ಆರೋಗ್ಯವಂತರಾಗಬಹುದು.

Exit mobile version