ಎಲೋನ್ ಮಸ್ಕ್, ಗೌತಮ್ ಅದಾನಿಗೆ ಒಂದೇ ದಿನದಲ್ಲಿ 2 ಲಕ್ಷ ಕೋಟಿ ರೂ. ನಷ್ಟ!

Adhani

India : ಭಾರತದ (India) ಅಗ್ರಮಾನ್ಯ ಉದ್ಯಮಿ ಗೌತಮ್ ಅದಾನಿ (Gautham Adhani) ಮತ್ತು ಅಮೆರಿಕದ ಉದ್ಯಮಿ ಎಲೋನ್ ಮಸ್ಕ್ (Elon Musk)

ಒಂದೇ ದಿನದಲ್ಲಿ ಸುಮಾರು 25 ಮಿಲಿಯನ್ ಡಾಲರ್ (Dollar) ಅಂದರೆ 2 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಷೇರು ಮಾರುಕಟ್ಟೆಗಳಲ್ಲಿ(Share Market) ತಮ್ಮ ಕಂಪನಿಗಳ ಷೇರುಗಳು ಕುಸಿದ ನಂತರ ಈ ಇಬ್ಬರೂ ಸುಮಾರು 2 ಲಕ್ಷ ಕೋಟಿ ರೂಪಾಯಿಗಳಷ್ಟು

ದೊಡ್ಡ ಮೊತ್ತದ ನಷ್ಟವನ್ನು ಅನುಭವಿಸಿದರು ಎಂದು ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಎರಡೂ ಉದ್ಯಮಿಗಳ ಸಂಪತ್ತಿನ ಗಮನಾರ್ಹ ನಷ್ಟವನ್ನು ವರದಿ ಮಾಡಿದೆ.

ಅದಾನಿ ಪವರ್, ಅದಾನಿ ವಿಲ್ಮಾರ್, ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್, (Elon and adhani lost 2 crore) ಅದಾನಿ ಗ್ರೀನ್ ಮತ್ತು,

ಅದಾನಿ ಟೋಟಲ್ ಗ್ಯಾಸ್ ಸೇರಿದಂತೆ ಗೌತಮ್ ಅದಾನಿ ಅವರ ಉದ್ಯಮಗಳು ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡಿವೆ. ಷೇರಿನ ಬೆಲೆಗಳಲ್ಲಿ ತ್ವರಿತ ಕುಸಿತವು ಅಗಾಧವಾದ ನಷ್ಟಕ್ಕೆ ಕಾರಣವಾಗಿದೆ.

ಇದನ್ನೂ ಓದಿ : https://vijayatimes.com/bjp-reminds-rajeev-gandhi-statement/

ಇನ್ನು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ನ ಷೇರುಗಳು ಶೇಕಡಾ 7.90ರಷ್ಟು ಕುಸಿದು 3,076 ರೂಪಾಯಿಗಳಿಗೆ ತಲುಪಿದರೆ, ಅದಾನಿ ವಿಲ್ಮಾರ್ 717.75ಕ್ಕೆ ಮುಕ್ತಾಯವಾಯಿತು. ಮತ್ತೊಂದೆಡೆ,

ಅದಾನಿ ಪವರ್ ಶೇಕಡಾ 4ರಷ್ಟು ಕುಸಿದು 354.85 ರೂ.ಗಳಿಗೆ ಸ್ಥಿರವಾಯಿತು ಮತ್ತು ಅದಾನಿ ಎಂಟರ್ಪ್ರೈಸಸ್ 8.42 ಶೇಕಡಾ ಕುಸಿತವನ್ನು ದಾಖಲಿಸಿದ ನಂತರ 3,164.75 ರೂ. ತಲುಪಿದೆ.

https://youtu.be/QInLUtdilNU

ಅದಾನಿ ಪೋರ್ಟ್ನ ಷೇರಿನ ಬೆಲೆ 784.95 ರೂ.ನಲ್ಲಿ ಕೊನೆಗೊಂಡಿತು ಮತ್ತು ಅದಾನಿ ಎನರ್ಜಿಯ ಷೇರುಗಳು (Elon and adhani lost 2 crore) ಶೇಕಡಾ 7.65 ರಷ್ಟು ಇಳಿಕೆಯಾಗಿ 2,087.85 ರೂ. ಕೊನೆಗೊಂಡಿದೆ.

ಇನ್ನೊಂದೆಡೆ ಎಲೋನ್ ಮಸ್ಕ್ ಸುಮಾರು $15.5 ಮಿಲಿಯನ್ ಅಂದರೆ 1.26 ಲಕ್ಷ ರೂ. ಕೋಟಿಯನ್ನು ಕಳೆದುಕೊಂಡಿದ್ದಾರೆ. ಅವರ ಆಟೋಮೋಟಿವ್ ಕಂಪನಿ ಟೆಸ್ಲಾಸ್ ಷೇರುಗಳು ಶೇಕಡಾ 8.6ರಷ್ಟು ಕುಸಿತವನ್ನು ದಾಖಲಿಸಿವೆ.

ಅಪಾರ ನಷ್ಟದ ಹೊರತಾಗಿಯೂ ಪ್ರಸ್ತುತ, ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಲೂಯಿ ವಿಟಾನ್ ಅಧ್ಯಕ್ಷ ಬರ್ನಾರ್ಡ್ ಅರ್ನಾಲ್ಟ್, ಟೆಸ್ಲಾ(Tesla) ಮುಖ್ಯಸ್ಥ ಎಲೋನ್ ಮಸ್ಕ್ ನಂತರ ಅದಾನಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

Exit mobile version