ಜಗತ್ತಿನ ಶ್ರೀಮಂತ ಉದ್ಯಮಿ(Richest Business Man), ಸ್ಪೇಸ್‍ಎಕ್ಸ್(Space X) ಮತ್ತು ಟ್ವೀಟರ್ ಕಂಪನಿಗಳ(Tweeter) ಒಡೆಯ ಎಲಾನ್ ಮಸ್ಕ್(Elon Musk) ಅವರ ವೈಯಕ್ತಿಕ ಬದುಕಿನ ರಹಸ್ಯವೊಂದು ಬಹಿರಂಗವಾಗಿದೆ. ಈ ಸುದ್ದಿ ಇದೀಗ ಜಗತ್ತಿನಾದ್ಯಂತ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಅಮೇರಿಕಾದ ಪತ್ರಿಕೆಯೊಂದು(American Press) ಮಾಡಿರುವ ವರದಿಯ ಪ್ರಕಾರ, ಎಲೋನ್ ಮಸ್ಕ್ ಅವರ ತೃತೀಯ ಲಿಂಗಿ(Transgender) ಮಗಳು ತಮ್ಮ ತಂದೆಯೊಂದಿಗೆ ಸಂಬಂಧ ಕಡಿದುಕೊಳ್ಳಲು ಸಿದ್ಧರಾಗಿದ್ದಾರೆ.

ಈಗಾಗಲೇ ಆಕೆ ನ್ಯಾಯಾಲಯದ ಮೋರೆ ಹೋಗಿದ್ದಾಳೆ ಎಂದು ವರದಿ ಮಾಡಲಾಗಿದೆ. ಎಲೋನ್ ಮಸ್ಕ್ ಮಗನಾಗಿದ್ದ 18 ವರ್ಷದ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ತನ್ನ ಲಿಂಗ ಬದಲಿಸಿಕೊಂಡಿದ್ದು, ಪುರುಷನಿಂದ ಮಹಿಳೆಯಾಗಿ ಬದಲಾಗಿದ್ದಾಳೆ. ಈ ಹಿನ್ನೆಲೆ ತನ್ನ ಹೆಸರು, ಹುಟ್ಟಿದ್ದ ಮೂಲ, ತಂದೆ ಹೆಸರು, ತಾಯಿ ಹೆಸರು, ಎಲ್ಲವನ್ನೂ ಬಿಟ್ಟು, ತನ್ನ ಹೊಸ ಹೆಸರನ್ನು ನೋಂದಾಯಿಸಿಕೊಳ್ಳಲು ಕ್ಯಾಲಿರ್ಫೋನಿಯಾದ(California) ನ್ಯಾಯಾಲಯದ ಮೋರೆ ಹೋಗಿದ್ದಾಳೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.
ಇನ್ನು ಈ ಕುರಿತು ಮಾತನಾಡಿರುವ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್, ನಾನು, ನನ್ನ ಜೈವಿಕ ತಂದೆಯೊಂದಿಗೆ ಯಾವುದೇ ಸಂಬಂಧ ಇರಿಸಿಕೊಳ್ಳಲು ಬಯಸುವುದಿಲ್ಲ. ನಾನು ಇನ್ನೂ ಮುಂದೆ ಯಾವ ಸಂಬಂಧದ ಜೊತೆಗೂ ಇರಲು ಇಷ್ಟಪಡುವುದಿಲ್ಲ. ನಾನು ಸ್ವತಂತ್ರ ವ್ಯಕ್ತಿಯಾಗಿ ಜೀವಿಸುತ್ತೇನೆ. ಹೀಗಾಗಿಯೇ ಹೊಸ ಹೆಸರು, ಲಿಂಗ, ಜನನ ಪ್ರಮಾಣ ಪತ್ರಕ್ಕಾಗಿ ಸಾಂಟಾ ಮೋನಿಕಾದಲ್ಲಿರುವ ಲಾಸ್ ಏಂಜಲೀಸ್ ಕೌಂಟಿ ಸುಪೀರಿಯರ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಇನ್ನು 2008ರಲ್ಲಿ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್‍ನ ತಾಯಿ ಜಸ್ಟಿನ್ ವಿಲ್ಸನ್ ಅವರು ಎಲೋನ್ ಮಸ್ಕ್ ಜೊತೆ ವಿಚ್ಛೇದನ ಪಡೆದುಕೊಂಡಿದ್ದರು. ಆ ಬಳಿಕ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ತಂದೆಯೊಂದಿಗಿದ್ದರು.