13 ಗಂಟೆಗಳ ಕಾಲ ಹಾರಾಡಿ, ಮತ್ತೆ ಅದೇ ಸ್ಥಳದಲ್ಲಿ ಲಾಂಡ್‌ ಆದ ಎಮಿರೇಟ್ಸ್ ವಿಮಾನ

Dubai : ನ್ಯೂಜಿಲೆಂಡ್‌ಗೆ(New Zealand) ಪ್ರಯಾಣವನ್ನು ಆರಂಭಿಸಿದ ಎಮಿರೇಟ್ಸ್‌ ವಿಮಾನ(Emirates Flight) ದುಬೈ ವಿಮಾನ ನಿಲ್ದಾಣದಿಂದ ಹೊರಟು 13 ಗಂಟೆಗಳ ಕಾಲ ಹಾರಡಿ ಮತ್ತೆ ಅದೇ ಸ್ಥಳದಲ್ಲಿ ಲಾಂಡ್‌ (Emirates landed same place) ಆಗಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ನ್ಯೂಜಿಲೆಂಡ್‌ಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರು ಶುಕ್ರವಾರ ಬೆಳಗ್ಗೆ ದುಬೈನಿಂದ(Dubai) ಹೊರಟಿದ್ದಾರೆ.

ಆದಾಗ್ಯೂ, 13 ಗಂಟೆಗಳ ಕಾಲ ಹಾರಾಟದ ನಂತರ, ವಿಮಾನವು ಅದೇ ವಿಮಾನ ನಿಲ್ದಾಣದಲ್ಲಿ ಮತ್ತೆ ಇಳಿದಿದೆ.

ಈ ಅಸಾಮಾನ್ಯ ಘಟನೆಯಲ್ಲಿ, ಫಾಕ್ಸ್ ನ್ಯೂಸ್‌ನ ವರದಿಯ ಪ್ರಕಾರ. EK448 ವಿಮಾನವು ಸ್ಥಳೀಯ ಕಾಲಮಾನ ಸುಮಾರು 10:30 ಕ್ಕೆ ಟೇಕ್ ಆಫ್ ಆಗಿತ್ತು.

ಪೈಲಟ್ ಸುಮಾರು 9,000-ಮೈಲಿ ಪ್ರಯಾಣದ ಅರ್ಧದಾರಿಯಲ್ಲೇ ಯು-ಟರ್ನ್ ಮಾಡಿದ್ದಾರೆ ಎನ್ನಲಾಗಿದೆ.

ಶನಿವಾರ ಮಧ್ಯರಾತ್ರಿಯ ಸುಮಾರಿಗೆ ವಿಮಾನವು ಅಂತಿಮವಾಗಿ ಪ್ರಯಾಣ ಪ್ರಾರಂಭಿಸಿದ ಅದೇ ದುಬೈ ವಿಮಾನ ನಿಲ್ದಾಣಕ್ಕೆ ಮರಳಿದೆ.

ಆಕ್ಲೆಂಡ್(Aklend) ವಿಮಾನ ನಿಲ್ದಾಣದಲ್ಲಿ ತೀವ್ರ ಪ್ರವಾಹ ಉಂಟಾಗಿ ವಾರಾಂತ್ಯದಲ್ಲಿ ವಿಮಾನ ನಿಲ್ದಾಣವನ್ನು(Emirates landed same place) ಮುಚ್ಚಲಾಗಿದೆ ಎಂಬ ಕಾರಣವನ್ನು ತಿಳಿದ ಪೈಲೆಟ್‌ ವಿಮಾನವನ್ನು ಹಿಂದಿರುಗಿಸಿ,

ದುಬೈಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ರಷ್ಯಾ ವಿದೇಶಾಂಗ ಸಚಿವ

ಇನ್ನು ಈ ಘಟನೆ ಬಗ್ಗೆ ಆಕ್ಲೆಂಡ್ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್‌(Tweet) ಮಾಡಿದ್ದು, ಇದು ನಮಗೆ ಬೇಸರದ ಸಂಗತಿ! ಆದರೆ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಇದು ಅತೀ ಮುಖ್ಯವಾದ ವಿಷಯ.

ಆಕ್ಲೆಂಡ್ ವಿಮಾನ ನಿಲ್ದಾಣವು ನಮ್ಮ ಅಂತಾರಾಷ್ಟ್ರೀಯ ಟರ್ಮಿನಲ್‌ಗೆ ಹಾನಿಯನ್ನು ನಿರ್ಣಯಿಸುತ್ತಿದೆ ಮತ್ತು ದುರದೃಷ್ಟವಶಾತ್ ಇಂದು ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದು ಅತ್ಯಂತ ನಿರಾಶಾದಾಯಕವಾಗಿದೆ ಎಂದು ನಮಗೆ ತಿಳಿದಿದೆ. ಆದರೆ ಪ್ರಯಾಣಿಕರ ಹಿತದೃಷ್ಟಿ ಮತ್ತು ಅವರ ಸುರಕ್ಷತೆಯು ನಮ್ಮ ಮುಖ್ಯ ಆದ್ಯತೆಯಾಗಿದೆ ಎಂದು ಹೇಳಿದರು.

ಇದಲ್ಲದೆ, ಜನವರಿ 29 ರಂದು ಬೆಳಿಗ್ಗೆ 5 ಗಂಟೆಯವರೆಗೆ ಯಾವುದೇ ಅಂತಾರಾಷ್ಟ್ರೀಯ ನಿರ್ಗಮನಗಳು ನಡೆಯುವುದಿಲ್ಲ ಎಂದು ಹೇಳಿದ್ದರು! ವಿಮಾನ ನಿಲ್ದಾಣದ ಅಧಿಕಾರಿಗಳು, ಜನವರಿ 29ರ ಭಾನುವಾರ ಬೆಳಿಗ್ಗೆ 7 ಗಂಟೆಯವರೆಗೆ ಆಕ್ಲೆಂಡ್ ವಿಮಾನ ನಿಲ್ದಾಣಕ್ಕೆ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣಿಕರ ಆಗಮನವಿಲ್ಲ ಎಂದು ಮುಂಚಿತವಾಗಿಯೇ ತಿಳಿಸಿದ್ದರು ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ(Social Media) ಪ್ರಸಾರ ಮಾಡಲಾದ ವೀಡಿಯೊಗಳ ಪ್ರಕಾರ ವಿಮಾನ ನಿಲ್ದಾಣವು ಸಂಪೂರ್ಣವಾಗಿ ಜಲಾವೃತಗೊಂಡ ನಂತರ ಭಾನುವಾರ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.

ನಿರಂತರ ಮಳೆಯಿಂದಾಗಿ ಪ್ರವಾಹ ಉಂಟಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವಂತ ಪರಿಸ್ಥಿತಿ ಎದುರಾಗಿದೆ.

ಈ ಕಾರಣದಿಂದ ನಾವು ಮುಂಚಿತವಾಗಿಯೇ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version