ಬಟ್ಲರ್, ಹೇಲ್ಸ್ ಅಬ್ಬರ ; ಫೈನಲ್ ಪ್ರವೇಶಿಸಿದ ಇಂಗ್ಲೆಂಡ್!

Adelaide : ಅಡಿಲೇಡ್‌ ಅಂಗಳದಲ್ಲಿ ಗುರುವಾರ ನಡೆದ ಟಿ-20 ವಿಶ್ವಕಪ್‌ನ(T20 World Cup) ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಇಂಗ್ಲೆಂಡ್(England Beats India) ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿದೆ.

ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್(England Beats India) ನೇತೃತ್ವದ ತಂಡವು ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಪಾಕಿಸ್ತಾನದೊಂದಿಗೆ ಅಂತಿಮ ಹಣಾಹಣಿಯನ್ನು ಆಡಲಿದೆ ಎಂಬುದು ಈಗ ರೋಚಕ! ಎರಡೂ ತಂಡಗಳು ಈಗ 2022 T-20 ವಿಶ್ವಕಪ್ ಮೇಲೆ ಕಣ್ಣಿಟ್ಟಿವೆ.

ಭಾರತದ ವಿರುದ್ಧ ಟಾಸ್ ಗೆದ್ದು ಪಂದ್ಯ ಆರಂಭಿಸಿದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡು, ಇಂಡಿಯಾಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. 169 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್,

ಆರಂಭಿಕರಾದ ಜೋಸ್ ಬಟ್ಲರ್ (80) ಮತ್ತು ಅಲೆಕ್ಸ್ ಹೇಲ್ಸ್ (86) ಮೊದಲ ವಿಕೆಟ್‌ಗೆ 170 ರನ್‌ಗಳ ದಾಖಲೆಯ ಜೊತೆಯಾಟವನ್ನು ನಿರ್ಮಿಸುವ ಮುಖೇನ ಜಯವನ್ನು ಸಾಧಿಸಿದರು.

ಇದನ್ನೂ ಓದಿ : https://vijayatimes.com/messi-used-tissue-sold/

ಅಡಿಲೇಡ್ ಓವಲ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 10 ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಗೆದ್ದ ನಂತರ ಬೌಲಿಂಗ್ ಮಾಡಲು ಆರಿಸಿಕೊಂಡ ಇಂಗ್ಲೆಂಡ್, ಮೊದಲ ಹಂತದಲ್ಲಿ ಕೆ.ಎಲ್ ರಾಹುಲ್(KL Rahul) ಅವರ ವಿಕೆಟ್ ಪಡೆದುಕೊಂಡಿತು.

ಕ್ರಿಸ್ ವೋಕ್ಸ್ ಆರಂಭಿಕರನ್ನು 5 ರನ್‌ಗೆ ಹಿಂದಕ್ಕೆ ಕಳುಹಿಸುವುದರೊಂದಿಗೆ ವಿಕೆಟ್ ಉರುಳಿಸಿದರು, ಆದರೆ ರೋಹಿತ್ ಶರ್ಮಾ ಕೂಡ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.

ಬಟ್ಲರ್ ಮತ್ತು ಹೇಲ್ಸ್ ಜೋಡಿಯು ಮೊದಲ ಆರು ಓವರ್‌ಗಳಲ್ಲಿ 63 ರನ್‌ಗಳನ್ನು ಕಲೆಹಾಕಿತು, ಇಂಗ್ಲೆಂಡ್ ಆರಂಭಿಕರು ರನ್-ಚೇಸ್‌ನಲ್ಲಿ ಪವರ್‌ಪ್ಲೇಯನ್ನು ಅದ್ಭುತವಾಗಿ ಬಳಸಿಕೊಂಡರು.

ಒಂದು ವಿಕೆಟ್ ಕಳೆದುಕೊಳ್ಳದೇ ಆಟವನ್ನು ಬಲಪಡಿಸಿಕೊಂಡ ಬಟ್ಲರ್ ಮತ್ತು ಹೇಲ್ಸ್ ಜೋಡಿ ಕೊನೆಯ ರನ್ ವರೆಗೂ ಬಿಡದೆ ಗೆಲುವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

https://youtu.be/gMyl3ahoaKk

ಅಲೆಕ್ಸ್ ಹೇಲ್ಸ್ ಕೇವಲ 28 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು, ಅಂತಿಮವಾಗಿ 13ನೇ ಓವರ್‌ನಲ್ಲಿ ತನ್ನ ೫೦ ರನ್‌ಗಳ ಗಡಿಯನ್ನು ತಲುಪಿದರು.

ಪಂದ್ಯದ 16ನೇ ಓವರ್‌ನಲ್ಲಿ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಭಾರತವನ್ನು ಸೋಲಿಸುವ ಮುಖೇನ ಟಿ-20 ವಿಶ್ವಕಪ್ ಪಂದ್ಯದ ಓಟದಿಂದ ಹೊರ ಹಾಕಿದೆ.

Exit mobile version