England: ಬ್ರಿಟನ್‌ನ (Britain) ಸರ್ಕಾರಿ ರಾಷ್ಟ್ರೀಯ ಆರೋಗ್ಯ ಸೇವೆಯು ನೂರಾರು ರೋಗಿಗಳಿಗೆ ಕ್ಯಾನ್ಸರ್‌ಗೆ (England found vaccine for cancer) ಚಿಕಿತ್ಸೆ ನೀಡುವ ಚುಚ್ಚುಮದ್ದನ್ನು
ಕಂಡು ಹಿಡಿದಿದ್ದು, ಅದನ್ನುರೋಗಿಗಳಿಗೆ ನೀಡುವ ವಿಶ್ವದ ಮೊದಲ ದೇಶವಾಗಲಿದೆ. ಈ ಚುಚ್ಚು ಮದ್ದು ಚಿಕಿತ್ಸೆಯ ಸಮಯವನ್ನು ಮುಕ್ಕಾಲು ಭಾಗ ಕಡಿತಗೊಳಿಸಲಿದೆ. ಮೆಡಿಸಿನ್ಸ್ (Medicines)
ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ) ಯ ಅನುಮೋದನೆಯ ನಂತರ ಎನ್‌ಎಚ್‌ಎಸ್ ಇಂಗ್ಲೆಂಡ್ (England) ಮಂಗಳವಾರ ಚುಚ್ಚು ಮದ್ದು ನೀಡಲು ನಿರ್ಧರಿಸಿದೆ.

ಈ ಅನುಮೋದನೆಯು ರೋಗಿಗಳಿಗೆ ಕಡಿಮೆ ಅವಧಿಯಲ್ಲಿ, ವೇಗವಾಗಿ ಆರೈಕೆ ನೀಡಲು ವೈದ್ಯರಿಗೆ ಅನುಮತಿಸುತ್ತದೆ. ಇದು ದಿನವಿಡೀ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲು ನಮ್ಮ ತಂಡಗಳನ್ನು
ಸಕ್ರಿಯಗೊಳಿಸುತ್ತದೆ ಎಂದು ವೆಸ್ಟ್ ಸಫೊಲ್ಕ್ NHS ಫೌಂಡೇಶನ್ ಟ್ರಸ್ಟ್‌ನ ಸಲಹೆಗಾರ ಆಂಕೊಲಾಜಿಸ್ಟ್ (Oncologist) ಡಾ ಅಲೆಕ್ಸಾಂಡರ್ ಮಾರ್ಟಿನ್ (Dr. Alexander Martin) ಹೇಳಿದ್ದಾರೆ.
ಟೆಸೆಂಟ್ರಿಕ್ ಎಂದೂ ಕರೆಯಲ್ಪಡುವ ಅಟೆಝೋಲಿಜುಮಾಬ್ ಅನ್ನು ಸಾಮಾನ್ಯವಾಗಿ ರೋಗಿಗಳಿಗೆ ಇಂಟ್ರಾವೆನಸ್ ಮೂಲಕ ನೇರವಾಗಿ ಡ್ರಿಪ್ ಮೂಲಕ ನೀಡಲಾಗುತ್ತಿದ್ದು, ಇದು ರಕ್ತನಾಳವನ್ನು
ಪ್ರವೇಶಿಸಲು ಕಷ್ಟವಾದಾಗ ಕೆಲವು ರೋಗಿಗಳಿಗೆ ಸುಮಾರು 30 ನಿಮಿಷಗಳು ಅಥವಾ ಒಂದು ಗಂಟೆಯವರೆಗೆ ತೆಗೆದುಕೊಳ್ಳುತ್ತದೆ ಎಂದು NHS ಇಂಗ್ಲೆಂಡ್ ತಿಳಿಸಿದೆ.
ನಿಜವಾದ ಅಂಬೇಡ್ಕರ್ ವಾದಿಗಳು ಮತ್ತು ಸಮಾನತವಾದಿಗಳು ಎಂದಿಗೂ ಕಾಂಗ್ರೆಸ್ಗೆ ಬೆಂಬಲ ನೀಡಲಾರರು : ನಟ ಚೇತನ್
ಈಗಿನ ಇಂಟ್ರಾವೆನಸ್ ಇನ್ಫ್ಯೂಷನ್ (Intravenous Infusion)ವಿಧಾನವು ಈ ಹಿಂದಿನ 30 ರಿಂದ 60 ನಿಮಿಷಗಳಿಗೆ ಹೋಲಿಸಿದರೆ ಇದು ಸರಿಸುಮಾರು ಏಳು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ
ಎಂದು ರೋಚೆ ಪ್ರಾಡಕ್ಟ್ಸ್ ಲಿಮಿಟೆಡ್‌ನ ವೈದ್ಯಕೀಯ ನಿರ್ದೇಶಕ ಮಾರಿಯಸ್ ಸ್ಕೋಲ್ಟ್ಜ್ ಹೇಳಿದರು. ಅಲ್ಲದೆ ಅಟೆಝೋಲಿಝುಮಾಬ್ – ಜೆನೆಂಟೆಕ್, ರೋಚೆ ಕಂಪನಿಯಿಂದ ತಯಾರಿಸಲ್ಪಟ್ಟಿದ್ದು,
ಇದು ಇಮ್ಯುನೊಥೆರಪಿಯ (England found vaccine for cancer) ಔಷಧವಾಗಿದೆ.
ಕ್ಯಾನ್ಸರ್ (Cancer) ಕೋಶಗಳನ್ನು ಹುಡುಕಲು ಮತ್ತು ನಾಶಮಾಡಲು ರೋಗಿಯ ಸ್ವಂತ ಪ್ರತಿರಕ್ಷಣಾ ವ್ಯವಸ್ಥೆಯನ್ನು ಶಕ್ತಗೊಳಿಸುವುದಲ್ಲದೆ. ಶ್ವಾಸಕೋಶ, ಸ್ತನ, ಪಿತ್ತಜನಕಾಂಗ ಮತ್ತು ಮೂತ್ರಕೋಶ
ಸೇರಿದಂತೆ ಹಲವಾರು ಕ್ಯಾನ್ಸರ್‌ಗಳಿರುವ NHS ರೋಗಿಗಳಿಗೆ ರಕ್ತ ವರ್ಗಾವಣೆಯ ಮೂಲಕ ಪ್ರಸ್ತುತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇಂಗ್ಲೆಂಡ್‌ನಲ್ಲಿ ಪ್ರತಿ ವರ್ಷ ಅಟೆಝೋಲಿಜುಮಾಬ್‌ನ
(Atezolizumab) ಚಿಕಿತ್ಸೆಯನ್ನು ಪ್ರಾರಂಭಿಸುವ ಸುಮಾರು 3,600 ರೋಗಿಗಳಲ್ಲಿ ಹೆಚ್ಚಿನವರು ಸಮಯ ಉಳಿಸುವ ಚುಚ್ಚುಮದ್ದಿಗೆ ಬದಲಾಯಿಸುತ್ತಾರೆ ಎಂದು NHS ಇಂಗ್ಲೆಂಡ್ ಹೇಳಿದೆ.
ಭವ್ಯಶ್ರೀ ಆರ್.ಜೆ