ಈಶ್ವರಪ್ಪ ಅವರದ್ದು ಬಚ್ಚಲಬಾಯಿ ಕಣ್ರೀ ; ಅವರ ರಾಜೀನಾಮೆ ಬೇಕಾಗಿಲ್ಲ : ಡಿ.ಕೆ.ಶಿವಕುಮಾರ್!

cabinet

ಬುಧವಾರ ಸದನದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಈಶ್ವರಪ್ಪ ಅವರ ನಡುವೆ ಉಂಟಾದ ಸಂಘರ್ಷ ತಾರಕಕ್ಕೆ ಏರಿದ್ದು, ಎಲ್ಲರಿಗೂ ತಿಳಿದ ವಿಷಯ! ಸದನದಲ್ಲಿ ನಾನಾ ವಿಚಾರಗಳ ಮಾತುಕತೆಗಳು ನಡೆಯುವ ಸಂಧರ್ಭದಲ್ಲಿ ಈಶ್ವರಪ್ಪನವರು ಸಂವಿಧಾನದ ವಿರೋಧಿಯಂತೆ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಕುರಿತಾದ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರುದ್ಧ ತೀವ್ರ ವಿರೋಧಗಳು, ಆಕ್ರೋಶಗಳು ವ್ಯಕ್ತವಾದವು. ಸದನದಲ್ಲಿದ್ದ ಅನೇಕ ನಾಯಕರು ಈಶ್ವರಪ್ಪ ಅವರನ್ನು ಈ ಕೂಡಲೇ ಹೊರೆಗೆ ಕಳಿಸಿ, ದೇಶದ್ರೋಹಿ, ರಾಜೀನಾಮೆ ನೀಡಲು ಸಿದ್ಧರಾಗಿ ಎಂದು ಹೇಳಿದರು.

ಈ ಕುರಿತಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ನಮ್ಮ ಧರಣಿ ಮುಂದುವರಿಯುತ್ತೆ, ಈಶ್ವರಪ್ಪನ ರಾಜೀನಾಮೆ ನಮಗೆ ಬೇಕಾಗಿಲ್ಲ! ಬಚ್ಚಲಬಾಯಿ ಈಶ್ವರಪ್ಪನ ರಾಜೀನಾಮೆ ನಮಗೆ ಬೇಡ. ನಮಗೆ ಗೌವರ್ನರ್ ಮತ್ತು ಸಿಎಂ ಡಿಸ್ಮಿಸ್ ಮಾಡ್ಬೇಕು. ರಾಜೀನಾಮೆ ಪದ ಇದ್ಯಲ್ಲಾ ಅದು ಬಹಳ ಗೌರವವಾದುದ್ದು, ಲಾಲ್ ಬಹದ್ದೂರ್ ಶಾಸ್ತ್ರಿ ಕೊಟ್ಟ್ರಲ್ಲಾ ಅದು ರಾಜೀನಾಮೆ. ದೊಡ್ಡ ದೊಡ್ಡ ವ್ಯಕ್ತಿಗಳು ಡಿಪಾರ್ಟ್ಮೆಂಟ್ ನಲ್ಲಿ ಇದ್ದವರು ಅವರಿಂದ ಏನೋ ತಪ್ಪಾದ್ರೆ ನೈತಿಕ ರಾಜೀನಾಮೆ ಅಂತ ರಾಜೀನಾಮೆ ಕೊಡ್ತಾರೆ.

ಹೀಗಾಗಿ ಈಶ್ವರಪ್ಪ ಅವರನ್ನು ಕೂಡಲೇ ವಜಾಗೊಳಿಸಬೇಕು, ದೇಶದ್ರೋಹಿ ಕೇಸ್ ಹಾಕ್ಬೇಕು. ಅವರ ವೈಯಕ್ತಿಕ ವಿಚಾರ ಹೋಗ್ಬಿಡ್ತು, ಬಿಜೆಪಿ ಅವರು ಅವರನ್ನು ದೊಡ್ಡ ಆಸ್ತಿವಂತ ಅಂದುಕೊಂಡಿದ್ದಾರೆ. ಸ್ಪೀಕರ್ ಮಾತಾಡಿದ್ದು ಕೂಡ ನೋಡಿದ್ದೀರಿ ಅಲ್ವಾ, ಲಾ ಮಿನಿಸ್ಟರ್ ಮಾತಾಡಿ ಅದೇನೋ ಪಾಸಿಂಗ್ ರೆಫೆರೆನ್ಸ್ ಅಂತೆ, ಯಾವ್ ಪಾಸಿಂಗ್ ರೆಫೆರೆನ್ಸ್ ಅದು? ನಮ್ಮ ಹೋರಾಟ ಮುಂದುವರಿಯುತ್ತೆ. ಪಾಪ ಯಡಿಯೂರಪ್ಪನವರು ವಿತ್ ಡ್ರಾ ಮಾಡಿ ಅಂತ ಏನು ಹೇಳಿಲ್ಲಾ, ಆ ತರ ಇರ್ಬೇಡಿ ಅಂತ ರಿಕ್ವೆಸ್ಟ್ ಮಾಡ್ಕೊಂಡ್ರು ಅಷ್ಟೇ! ಅವರು ನಮಗೆ ಗೌರವದಿಂದ ಕೇಳಿಕೊಂಡರು, ಅದಕ್ಕೆ ನಾವು ಕೂಡ ಗೌರವದಿಂದ ಖಂಡಿತ ಸರ್ ಮುಂದೆ ಮಾತನಾಡುವ ಎಂದು ಹೇಳಿದ್ದೀವಿ ಅಷ್ಟೇ!

Exit mobile version