ರಾಜ್ಯದ ಈ  ನಗರದಲ್ಲಿ ಆರಂಭಗೊಂಡಿದೆ ಸಂಜೆ ಅಂಚೆ ಕಚೇರಿ

Bengaluru : ಧಾರವಾಡದಲ್ಲಿ (Evening post office in bangalore) ಕರ್ನಾಟಕದ ಮೊದಲ ಸಂಜೆ ಅಂಚೆ ಕಛೇರಿಯ ಯಶಸ್ಸಿನ ನಂತರ ಭಾರತೀಯ ಅಂಚೆ  ಇಲಾಖೆಯೂ ಇದೀಗ,

ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯದ ಎರಡನೇಯ ಸಂಜೆಯ ಅಂಚೆ ಕಚೇರಿಯನ್ನು ಆರಂಭಿಸಿದೆ.

ಹೈಲೈಟ್ಸ್‌:

  • ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಂಜೆ ಅಂಚೆ ಕಚೇರಿ ಆರಂಭ
  • ಮಧ್ಯಾಹ್ನ 1ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸಲಿದೆ ಪೋಸ್ಟ್‌ ಆಫೀಸ್‌
  • ಆಧಾರ್‌ ತಿದ್ದುಪಡಿ ಸೇರಿದಂತೆ ಅಂಚೆ ಸೇವೆಗಳು ರಾತ್ರಿ 9ರವರೆಗೆ ಲಭ್ಯ

ಬೆಂಗಳೂರು ನಗರದಲ್ಲಿ ಕಳೆದ ಸೋಮವಾರದಂದು ರಾಜ್ಯದ ಎರಡನೇಯ ಸಂಜೆ ಅಂಚೆ ಕಚೇರಿಯೂ ಪ್ರಾರಂಭಗೊಂಡಿದೆ.

ಸಾಮಾನ್ಯ ಅಂಚೆ ಕಚೇರಿಯ ಸಮಯದ ಮುಕ್ತಾಯದ ನಂತರ ಅನೇಕ ಜನರು ಅಂಚೆ ಸೇವೆಗಾಗಿ ಆಗಮಿಸುತ್ತಾರೆ. ಅಂತಹ ಗ್ರಾಹಕರಿಗೆ ಸೇವೆ ನೀಡುವ ಉದ್ದೇಶದಿಂದ ಈ ಅಂಚೆ ಕಚೇರಿ ಪ್ರಾರಂಭಿಸಲಾಗಿದೆ.

ಇನ್ನು ಬೆಂಗಳೂರಿನ ಸಂಜೆ ಅಂಚೆ ಕಚೇರಿಯು ಮ್ಯೂಸಿಯಂ (Museum) ರಸ್ತೆಯಲ್ಲಿದ್ದು, ವಾರದಲ್ಲಿ ಆರು ದಿನಗಳ ಕಾಲ ಮಧ್ಯಾಹ್ನ 1 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ.  

ಈ ವೇಳೆ ಪೋಸ್ಟ್ ಆಫೀಸ್ ಸ್ಪೀಡ್ ಪೋಸ್ಟ್, ಪಾರ್ಸೆಲ್ ಬುಕಿಂಗ್, ಪಾರ್ಸೆಲ್ ಪ್ಯಾಕಿಂಗ್, ಆಧಾರ್ ಸೇವೆಗಳು, ಚಿತ್ರ ಪೋಸ್ಟ್‌ಕಾರ್ಡ್‌ಗಳು ಮತ್ತು ಸ್ಟ್ಯಾಂಪ್ ಸೇವೆಗಳು (Evening post office in bangalore) ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತದೆ.

ಸಾಮಾನ್ಯ ಅಂಚೆ ಕಛೇರಿಯಲ್ಲಿ ಕೌಂಟರ್‌ಗಳನ್ನು ಮಧ್ಯಾಹ್ನ 3:30 ಕ್ಕೆ ಮುಚ್ಚಲಾಗುತ್ತದೆ. ಆದ್ದರಿಂದ ವಾರದ ದಿನಗಳಲ್ಲಿ ಕೆಲಸದ ಸಮಯದಲ್ಲಿ ಅಂಚೆ ಕಚೇರಿಗಳಿಗೆ ಭೇಟಿ ನೀಡಲು ಸಾಧ್ಯವಾಗದ ವೃತ್ತಿಪರರಿಗೆ ಸಂಜೆ ಅಂಚೆ ಕಚೇರಿಯು ಸೇವೆ ನೀಡಲಿದೆ.

ಇದನ್ನೂ ಓದಿ: https://vijayatimes.com/highest-road-accidents-state/

ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಇನ್ನು ಹೆಚ್ಚಿನ ಸಂಜೆ ಅಂಚೆ ಕಚೇರಿಗಳು ಸ್ಥಾಪಿಸಲಾಗುವುದು ಎಂದು ಅಂಚೆ  ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಧಾರವಾಡದಲ್ಲಿ ಸಂಜೆ ಅಂಚೆ ಕಛೇರಿಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು.

ಅದರ ಯಶಸ್ಸನ್ನು ಗಮನಿಸಿದ ಅಧಿಕಾರಿಗಳು ಬೆಂಗಳೂರಿನಲ್ಲಿ ಎರಡನೇಯ ಸಂಜೆ ಅಂಚೆ ಕಚೇರಿಯನ್ನು ಪ್ರಾರಂಭಿಸಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಂಜೆ ಅಂಚೆ ಕಚೇರಿ ಆರಂಭಿಸಲಾಗಿದೆ.

ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ನೋಡಿ ಮುಂದಿನ ದಿನಗಳಲ್ಲಿ ಈ ಸೇವೆಯನ್ನು ರಾಜ್ಯದ ಎಲ್ಲ ಜಿಲೆಗಳಿಗೂ ವಿಸ್ತರಣೆ ಮಾಡಲಾಗುವುದು.

ಈ ಮೂಲಕ ಯುವಕರನ್ನು ಅಂಚೆ ಕಚೇರಿಗಳಿಗೆ ಸೆಳೆಯಲು ನಾವು ಉತ್ಸುಕರಾಗಿದ್ದೇವೆ ಎಂದು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್(S Rajendra kumar) ಹೇಳಿದ್ದಾರೆ.

Exit mobile version