Bengaluru : 2023 ರಾಜ್ಯ ವಿಧಾನ ಸಭಾ ಚುನಾವಣೆಯು (2023 State Legislative Assembly Elections) ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10 ರಂದು ಒಟ್ಟು 58,545 ಮತಗಟ್ಟೆಗಳಲ್ಲಿ ನಡೆದಿತ್ತು. ಈ ಚುನಾವಣೆಯ ಫಲಿತಾಂಶವು (EVM counting of votes 2023) ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ.

ಇದೀಗ ಸದ್ಯಕ್ಕೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲವಾದರೂ ಬೆಳೆಗ್ಗೆ 10 ಗಂಟೆ ವೇಳೆಗೆ ಮೊದಲ ಸಂಪೂರ್ಣ ಚಿತ್ರಣ ಸಿಗುವ ಸಾಧ್ಯತೆಯಿದೆ.
ಮತ ಎಣಿಕೆ ಕಾರ್ಯವು ಈ ಹಿಂದೆ ಅಂಚೆ ಮತಗಳ ಎಣಿಕೆ ಮೂಲಕ ಆರಂಭವಾಗುತ್ತಿತ್ತು. ಹಾಗಾಗಿ 9 ಗಂಟೆ ವೇಳೆಗೆ ಮೊದಲು ಮತದಾರರ ನಾಡಿ ಮಿಡಿತಕ್ಕೆ (EVM counting of votes 2023) ಒಂದಷ್ಟು ಸ್ಪಷ್ಟ ದಿಕ್ಕು ಸಿಗುತ್ತಿತ್ತು.
ಇವಿಎಂ ಮತಯಂತ್ರಗಳಲ್ಲಿನ (EVM voting machine) ಮತಗಳ ಎಣಿಕೆ ನಂತರ ಶುರುವಾಗುತ್ತಿತ್ತು.
ಆದರೆ ಈ ಬಾರಿ ನಡೆದ ಚುನಾವಣೆಯಲ್ಲಿ ಚುನಾವಣೆ ಆಯೋಗವು ವೃದ್ಧರೂ ಸಹ ಮತದಾನದಲ್ಲಿ ಪಾಲ್ಗೊಳ್ಳಲಿ ಎಂಬ ಆಶಯದೊಂದಿಗೆ ಅಂತಹವರಿಗೆ
ಅನುಕೂಲವಾಗುವಂತೆ ಮಹಾ ಮತದಾನಕ್ಕೂ ಮೊದಲೇ ಅವರಿಗೆ ಮತದಾನಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು.
ಹಾಗಾಗಿ ಈ ಬಾರಿ ಮೊದಲು ಸದ್ಯಕ್ಕೆ ಅಂಚೆ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು ಇನ್ನು ಹಿರಿಯರ ಮತ ಎಣಿಕೆ ಶುರುವಾಗಬೇಕಿದೆ.ನಂತರವಷ್ಟೇ ಇವಿಎಂ ಮತ ಯಂತ್ರ ಣಿಕೆ ಶುರುವಾಗಲಿದೆ.
ಇದನ್ನೂ ಓದಿ : https://vijayatimes.com/two-dalit-youths-were-killed/
ಈ ಬಾರಿ ನಡೆದ ಚುನಾವಣೆಯ ಮತದಾನದ ಪ್ರಮಾಣವೆಷ್ಟು? ಕಳೆದ 5 ಚುನಾವಣೆಯಲ್ಲಾದ ಪ್ರಮಾಣವೆಷ್ಟು? ಇಲ್ಲಿದೆ ಅಂಕಿ-ಅಂಶ
ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10 ರಂದು ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯು
ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡು ಸಂಜೆ 6 ಗಂಟೆಗೆ ಮುಕ್ತಾಯವಾಯಿತು.ವಿಧಾನಸಭೆಯ ಮತ ಎಣಿಕೆಯು ಮೇ 13ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ.
ಈ ಬಾರಿ ಒಟ್ಟು 5,30,85,566 ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದರು, ಈ ಮತದಾರರ ಪೈಕಿ ಶೇ.72.67 ರಷ್ಟು ಅಂದರೆ ಸರಿ ಸುಮಾರು ಕೇವಲ 3.85 ಕೋಟಿ ಮಂದಿ ಮಾತ್ರ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2023 ರ ಚುನಾವಣೆಯ ಅಂಕಿ-ಅಂಶಗಳನ್ನು ನೋಡಿದರೇ ಈ ಬಾರಿ ಮತದಾನ ಪ್ರಮಾಣ ಅತೀ ಕಡಿಮೆಯಾಗಿದ್ದು, ಮತದಾರರು ಇನ್ನಷ್ಟು ಜಾಗೃತಿಯಾಗಬೇಕಿದೆ.

ಜಿಲ್ಲಾವಾರು ಮಟ್ಟದಲ್ಲಿ ಅತೀ ಗರಿಷ್ಠ ಮತದಾನ ಕಂಡ ಜಿಲ್ಲೆ:
ಚಿಕ್ಕಬಳ್ಳಾಪುರ (Chikkaballapur) – ಶೇ.85.83
ಜಿಲ್ಲಾವಾರು ಮಟ್ಟದಲ್ಲಿ ಅತೀ ಕನಿಷ್ಠ ಮತದಾನ ಕಂಡ ಜಿಲ್ಲೆ:
ಬೆಂಗಳೂರು ನಗರ-ಶೇ.59.98
ಇನ್ನು ಕ್ಷೇತ್ರವಾರು ಮಟ್ಟದಲ್ಲಿ ಗರಿಷ್ಠ ಮತದಾನ ಕಂಡ ವಿಧಾನಸಭಾ ಕ್ಷೇತ್ರ: ಮೇಲುಕೋಟೆ – ಶೇ. 90.93
ಕನಿಷ್ಠ ಮತದಾನ ಕಂಡ ವಿಧಾನಸಭಾ ಕ್ಷೇತ್ರ : ಸಿವಿರಾಮನ್ ನಗರ (CV Raman Nagar) (ಬೆಂಗಳೂರು) – 47.43%
ಕಳೆದ ಬಾರಿಗಿಂತ ಈ ಬಾರಿ 0.73 ಪ್ರತಿಶತದಷ್ಟು ಮತದಾನ ಕಡಿಮೆಯಾಗಿದೆ. ಏಕೆಂದರೆ ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ 73.04ರಷ್ಟು ಮತದಾನವಾಗಿತ್ತು.
- ರಶ್ಮಿತಾ ಅನೀಶ್