ತವರು ನೆಲದಲ್ಲಿ ಚೆನೈಗೆ ರೋಚಕ ಜಯ, ಲಕ್ನೋಗೆ 12 ರನ್ ಸೋಲು

Chennai : ತವರು ನೆಲದಲ್ಲಿ ಸೂಪರ್ ಹೀರೋಗಳಾಗಿ ಮಿಂಚಿದ್ರು ಚೆನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು. 2019ರ ನಂತರ ತವರು ಮೈದಾನವಾದ ಚೆಪಾಕ್‌ನಲ್ಲಿ ಪಂದ್ಯವನ್ನಾಡಿದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು (Lucknow Super Giants team) 12 ರನ್‌ಗಳಿಂದ (Exciting win for Chennai) ಸೋಲಿಸಿದೆ.

ಇದರೊಂದಿಗೆ ನಾಲ್ಕು ಬಾರಿ ವಿಜೇತ ತಂಡ ತನ್ನ ಗೆಲುವಿನ ಖಾತೆ ತೆರದಿದೆ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರರಾದ ಋತುರಾಜ್ (Rituraj)

ಹಾಗೂ ಡೆವೋನ್ ಕಾನ್ವೆ (Devon Conway) ಅವರ ಸ್ಫೋಟಕ ಬ್ಯಾಟಿಂಗ್‌ನಿAದ 7 ವಿಕೆಟ್ ನಷ್ಟಕ್ಕೆ 217 ರನ್‌ಗಳ ಭರ್ಜರಿ (Exciting win for Chennai) ಮೊತ್ತ ದಾಖಲಿಸಿತ್ತು.

https://youtube.com/shorts/vOn33QAPOao?feature=share

ಇಬ್ಬರೂ ಆಟಗಾರರು ಎರಡನೇ ಓವರ್‌ನಿಂದಲೇ ಬ್ಯಾಟ್ ಸಿಡಿಸಲು ಆರಂಭಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ರುತುರಾಜ್ ಗಾಯಕ್ವಾಡ್ (Ruturaj Gaikwad)

ಅವರ 57 ರನ್ ಮತ್ತು ಡೆವೊನ್ ಕಾನ್ವೆ ಅವರ 47 ರನ್‌ಗಳ ಆಧಾರದ ಮೇಲೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 217 ರನ್ ಗಳಿಸಿತು.

ಇದನ್ನೂ ಓದಿ : https://vijayatimes.com/change-in-class-12-syllabus/

ಹಾಗೆ ಈ ಗುರಿ ಬೆನ್ನಟ್ಟಿದ ಲಕ್ನೋ ಉತ್ತಮ ಆರಂಭದ ನಂತರವೂ ಈ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.

ಆದರೆ ಮೊಯಿನ್ ಅಲಿ ಅವರ ಸ್ಪಿನ್ ಎದುರು ಸಂಪೂರ್ಣ 20 ಓವರ್‌ಗಳನ್ನು ಆಡಿದ ಲಕ್ನೋ ಏಳು ವಿಕೆಟ್‌ಗಳನ್ನು ಕಳೆದುಕೊಂಡು 205 ರನ್ ಗಳಿಸಲಷ್ಟೇ ಶಕ್ತವಾಯಿತು.

ಕೊನೆಯಲ್ಲಿ ಆರ್ಭಟಿಸಿದ ಅಂಬಟಿ ರಾಯುಡು 14 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಮೂಲಕ

ಅಜೇಯ 27 ರನ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) 3 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ 12 ರನ್ ಗಳಿಸಿದರು. ರವೀಂದ್ರ ಜಡೇಜಾ 3 ರನ್ ಮತ್ತು ಮಿಚೆಲ್ ಸ್ಯಾಂಟ್ನರ್ 1 ರನ್ ಗಳಿಸಿದರು.

ರಂಜಿತ ಬಿಆರ್

Exit mobile version