ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಿದ ‘ನಮ್ಮ ಮೆಟ್ರೋ’ ; ವೇಳಾಪಟ್ಟಿ ಹೀಗಿದೆ

Bengaluru : ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಸಿದ್ದವಾಗುತ್ತಿದ್ದಂತೆ, ಬೆಂಗಳೂರು ನಮ್ಮ ಮೆಟ್ರೋ (Expanded metro rail service) ಬಿಎಂಆರ್‌ಸಿಎಲ್‌ ತಮ್ಮ ಎಂದಿನ ಸೇವೆಯನ್ನು ಹೊರತುಪಡಿಸಿ ಇದೀಗ ವಿಸ್ತರಿಸಿದ ವೇಳೆಯ ಬಗ್ಗೆ ಮಾಹಿತಿ ನೀಡಿದೆ.

ಹೊಸ ವರ್ಷದ ರಾತ್ರಿ ಬೆಂಗಳೂರಿನಲ್ಲಿ(Bangalore) ಮೆಟ್ರೋ ರೈಲು ಸೇವೆಗಳನ್ನು ಸಾಮಾನ್ಯ ಸಮಯದಿಂದ ವಿಸ್ತರಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಗುರುವಾರ ಪ್ರಕಟಿಸಿದೆ.

ವಿಸ್ತೃತ ಸಮಯದಲ್ಲಿ 15 ನಿಮಿಷಗಳ ಆವರ್ತನದಲ್ಲಿ ರೈಲುಗಳನ್ನು ನಿರ್ವಹಿಸಲಾಗುವುದು ಎಂದು ಮೆಟ್ರೋ ಇಲಾಖೆ ಪ್ರಕಟಿಸಿದೆ.

ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ BMRCL, “ಹೊಸ ವರ್ಷದ ಒಂದು ದಿನದ ಮುನ್ನ, ನಮ್ಮ ಮೆಟ್ರೊ ಆದಾಯ ಸೇವೆಗಳನ್ನು ಡಿಸೆಂಬರ್ 31 ರಿಂದ ಜನವರಿ 1ರ ಬೆಳಗಿನ ಜಾವ 2 ರವರೆಗೆ ವಿಸ್ತರಿಸಲಿದೆ.

ಇದನ್ನೂ ಓದಿ: https://vijayatimes.com/rishabh-pant-car-accident/

ವಿಸ್ತರಿಸಿದ ಸಮಯದಲ್ಲಿ, ರೈಲುಗಳು 15 ನಿಮಿಷಗಳ ಆವರ್ತನದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಹೇಳಿದೆ. ಹೊಸ ವರ್ಷದ ಹೊಸ್ತಿಲಲಿ ಇರುವ ಜನಸಾಮಾನ್ಯರು,

ಅದರಲ್ಲೂ ಪ್ರತ್ಯೇಕವಾಗಿ ಬೆಂಗಳೂರಿನ ಜನರು ಹೊಸ ವರ್ಷವನ್ನು ವಿಜೃಂಭಣೆಯಿಂದ ಸಂಭ್ರಮಿಸುವ ಮುಖೇನ ಬರಮಾಡಿಕೊಳ್ಳುತ್ತಾರೆ.

ಸದ್ಯ ಮೆಟ್ರೋ ಸಂಚರಿಸುವ ಮಾರ್ಗಗಳಲ್ಲಿ ಪ್ರಮುಖವಾಗಿ ಎಮ್‌.ಜಿ ರಸ್ತೆ ( MG Road) , ಟ್ರಿನಿಟಿ (Trinity) ಮತ್ತು ಕಬ್ಬನ್ ಪಾರ್ಕ್(Cubbon park) ನಿಲ್ದಾಣಗಳಲ್ಲಿ ಭಾರೀ ಪ್ರಯಾಣಿಕರು ಮೆಟ್ರೋ ಹತ್ತುವ ನಿರೀಕ್ಷೆ ಹೆಚ್ಚಿದ್ದು,

ಈ ಸಂಗತಿಯನ್ನು ಗಣನೀಯಕ್ಕೆ ತೆಗೆದುಕೊಂಡು ವಿಸ್ತೃತ ಸಮಯದಲ್ಲಿ (Expanded metro rail service) ಕಾಗದದ ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು ಎಂದು BMRCL ಒತ್ತಿ ತಿಳಿಸಿದೆ.

ವಿಸ್ತೃತ ಸಮಯದಲ್ಲಿ, ಅಂದರೆ ರಾತ್ರಿ 11.30 ನಂತರ ಎಂ.ಜಿ ರೋಡ್‌, ಟ್ರನಿಟಿ ಮತ್ತು ಕಬ್ಬನ್‌ ಪಾರ್ಕ್ ನಿಲ್ದಾಣಗಳಿಂದ ಇತರ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ 50 ರೂ. ಕಾಗದದ ಟಿಕೆಟ್‌ ವಿತರಿಸಲಾಗುತ್ತದೆ. 

ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಮ್‌.ಜಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಈ ಮೂರು ನಿಲ್ದಾಣಗಳಿಂದ ಯಾವುದೇ ಟೋಕನ್‌ಗಳನ್ನು ನೀಡಲಾಗುವುದಿಲ್ಲ.

ಈ ನಿಲ್ದಾಣಗಳನ್ನು ಹೊರತುಪಡಿಸಿ ಯಾವುದೇ,

ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ಟೋಕನ್‌ ಸ್ಮಾರ್ಟ್‌ (Token smart), ಸ್ಮಾರ್ಟ್‌ ಕಾರ್ಡ್‌(Smart card) ಮತ್ತು ಕ್ಯೂಆರ್‌ ಟಿಕೆಟ್‌(QR Ticket) ಮೂಲಕ ಸಾಮಾನ್ಯ ದರದಲ್ಲಿ ಪ್ರಯಾಣಿಸಬಹುದಾಗಿದೆ. ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ನಡುವೆ ಬೆಂಗಳೂರು ಪೊಲೀಸರು ನಗರದಲ್ಲಿ ಹೊಸ ವರ್ಷಾಚರಣೆಯ ಮೇಲೆ ಭಾರಿ ನಿಗಾ ಇಡಲು ಸಜ್ಜಾಗಿದ್ದಾರೆ. ಪೊಲೀಸರು ಈಗಾಗಲೇ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದು, ಹೆಚ್ಚುವರಿ ಸಿಸಿಟಿವಿ(CCTV) ಮತ್ತು ಡ್ರೋನ್ ಕ್ಯಾಮೆರಾಗಳೊಂದಿಗೆ(Drone camera) ಇಡೀ ನಗರವನ್ನು ಕಣ್ಗಾವಾಲಿನಲ್ಲಿ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.
Exit mobile version