Mysore : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ(Mysore Bengaluru Express way) ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಇದೀಗ ಈ ಯೋಜನೆಯ ಕ್ರೆಡಿಟ್ ತೆಗೆದುಕೊಳ್ಳಲು ಮೈಸೂರು ಸಂಸದ (expressway project Credit war) ಮತ್ತು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ(HC Mahadevappa) ನಡುವೆ ವಾರ್ ಶುರುವಾಗಿದೆ.
ಈ ಕುರಿತು ಟ್ವೀಟ್(Tweet) ಮಾಡಿರುವ ಮಾಜಿ ಸಚಿವ ಎಚ್.ಸಿ.ಮಹದೇವಪ್,
“ಬೆಂಗಳೂರು-ಮೈಸೂರು- ಬಂಟ್ವಾಳ ರಸ್ತೆ ನಿರ್ಮಾಣಕ್ಕೆ ಕಾರಣಕರ್ತರು ಆಸ್ಕರ್ ಫರ್ನಾಂಡೀಸ್, ಸಿದ್ದರಾಮಯ್ಯ, ಡಾ ಹೆಚ್ ಸಿ ಮಹದೇವಪ್ಪ ಮತ್ತು ನಿತಿನ್ ಗಡ್ಕರಿ ಎಂದು ಈ ಕೋಮು ಭಕ್ತರು
ಬಾಯಿಗೆ ಬಂದಂತೆ ಮಾತಾಡಿದಾಕ್ಷಣ ಸತ್ಯವು ಎಂದಿಗೂ ಬದಲಾಗುವುದಿಲ್ಲ ಈ ರಸ್ತೆಯನ್ನು ಮಂಜೂರು ಮಾಡಿಸಿ ಅನುದಾನ ಬಿಡುಗಡೆಯಾದಾಗ ಪ್ರತಾಪ್‌ಸಿಂಹ(Prathap Simha) ಎಂಪಿಯೇ ಆಗಿರಲಿಲ್ಲ.

ರಾಜ್ಯ ಹೆದ್ದಾರಿಯಾಗಿದ್ದ ಬೆಂಗಳೂರು- ಮೈಸೂರು ರಸ್ತೆಯು ಯುಪಿಎ(UPA) ಅವಧಿಯಲ್ಲೇ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಟುಗೊಂಡು ಅದೇ ವೇಳೆ ಕ್ಯಾಬಿನೆಟ್ ನಲ್ಲಿ ಅನುಮೋದನೆಯೂ ದೊರಕಿತು.
ಮುಂದೆ ನಾನು ಸಚಿವನಾದ ವೇಳೆ ಈ ರಸ್ತೆಗೆ DPR ಮಾಡಿಸಿ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದೆ.
ಒಮ್ಮೆ ಕ್ಯಾಬಿನೆಟ್(Cabinet) ನಲ್ಲಿ ಅನುಮೋದನೆ ದೊರೆತ ಮೇಲೆ ಯಾವ ಸರ್ಕಾರ ಬಂದರೂ ಕೂಡಾ ಅದರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು (expressway project Credit war) ಎಂಬುದು ಯಾವುದೇ ಜನ ಪ್ರತಿನಿಧಿಗಳಿಗೆ ಇರಬೇಕಾದ ಸಾಮಾನ್ಯ ಜ್ಞಾನ.
ಬಹುಶಃ ನಿಮಗೆ ಇದು ಚೆನ್ನಾಗಿಯೇ ಗೊತ್ತಿರುತ್ತದೆ ಹೀಗಾಗಿ ಹುಸಿ ಪ್ರಚಾರದ ಗೀಳು ಬಿಟ್ಟು ವಾಸ್ತವವನ್ನು ಯೋಚಿಸಿ ಮಾತಾಡಿ.

ಈ ಬಗ್ಗೆ ಮೊಂಡುತನ ಏಕೆ? ಚುನಾವಣೆ ಸಂದರ್ಭದಲ್ಲಿ ಬಿಜೆಪಿಗರು ಸುಳ್ಳುಗಳನ್ನು ಗಟ್ಟಿಯಾಗಿ ಮತ್ತು ವಿಶ್ವಾಸದಿಂದ ಹೇಳುವಾಗ ಅಭಿವೃದ್ಧಿ ಕೆಲಸಗಳನ್ನು ಮಾಡಿದ ನಾವೆಲ್ಲರೂ ಸತ್ಯವನ್ನು ಅದಕ್ಕಿಂತಲೂ ಗಟ್ಟಿಯಾಗಿ ಹೇಳಬೇಕು.
ಇಲ್ಲದೇ ಹೋದರೆ ಸುಳ್ಳಿನ ಕಂತೆಗಳನ್ನೇ ಯುವ ಪೀಳಿಗೆಯು ನಿಜವೆಂದು ಭಾವಿಸುವ ಅಪಾಯವಿದೆ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ ಸಿಂಹ, ಏನಂದ್ರೀ ಮಹದೇವಪ್ಪನವರೇ,
ಬೆಂಗಳೂರು-ಮೈಸೂರು- ಬಂಟ್ವಾಳ ರಸ್ತೆ ನಿರ್ಮಾಣದ ಕುರಿತು ಈ ಕೋಮು ಭಕ್ತರು ಬಾಯಿಗೆ ಬಂದಂತೆ ಮಾತಾಡಿದಾಕ್ಷಣ ಸತ್ಯವು ಎಂದಿಗೂ ಬದಲಾಗುವುದಿಲ್ಲ
ಈ ರಸ್ತೆಯನ್ನು ಮಂಜೂರು ಮಾಡಿಸಿ ಅನುದಾನ ಬಿಡುಗಡೆಯಾದಾಗ ಆ ಪ್ರತಾಪ್‌ಸಿಂಹ ಎಂಪಿಯೇ ಆಗಿರಲಿಲ್ಲ.
ಹೌದಾ?! ಈ ಯೋಜನೆಯನ್ನು ಮೋದೀಜಿ(Narendra Modi) ಮಹಾರಾಜ ಗ್ರೌಂಡ್ ನಲ್ಲಿ ಘೋಷಣೆ ಮಾಡಿದ್ದು 2018,
ಫೆಬ್ರುವರಿ 19ರಂದು, ಪ್ರಧಾನಿ ಅಧ್ಯಕ್ಷತೆಯ CCEA ಮಂಜೂರು ಕೊಟ್ಟಿದ್ದು ಫೆಬ್ರುವರಿ 13 ಮತ್ತು 20ರಂದು, ನಾನು ಎಂಪಿ ಆಗಿದ್ದು 2014 ಮೇನಲ್ಲಿ ಎಂದು ಟ್ವೀಟ್ ಮಾಡಿದ್ದಾರೆ.