‘ಫೇಸ್ ಬುಕ್’ ಪರಿಚಯ: ವಿಹಾಹಿತ ಮಹಿಳೆಗೆ ವಂಚಿಸಿದ ಯುವಕನ ವಿರುದ್ಧ ದೂರು

ಚಿಕ್ಕಬಳ್ಳಾಪುರ,ಫೆ.19 : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಇಡ್ಲಿಪಾಳ್ಯ ನಿವಾಸಿ ಸತೀಶ್, ಮಂಡ್ಯ ಮೂಲದ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದನು. ಪರಿಚಯ ಪ್ರೀತಿ, ಪ್ರೇಮ, ಕಾಮ ಎಂಬುದಾಗಿ ವಿಹಾಹಿತ ಮಹಿಳೆಗೆ ಯುವಕ ಸತೀಶ್ ತಲೆ ಕೆಡಿಸಿದ್ದನಂತೆ. ಮಹಿಳೆಯ ಅತ್ಯಾಚಾರದ ವೀಡಿಯೋ ಫೇಸ್ ಬುಕ್ ನಲ್ಲಿ ಹಾಕುವುದಾಗಿ ಬೆದರಿಸಿ, ಸತೀಶ್ ಮಹಿಳೆಯ ಸೈಟ್ ಹಾಗೂ ಮನೆ ಮಾರಿಸಿ 15 ಲಕ್ಷ ರೂಪಾಯಿ ಪಡೆದು ವಂಚಿಸಿದ್ದು ಬೆಳಕಿಗೆ ಬಂದಿದೆ.

ಇದರಿಂದಾಗಿ ನೊಂದ ವಿವಾಹಿತ  ಮಹಿಳೆ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಸತೀಶ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವಂತ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Exit mobile version