ವಿಜಯ ಟೈಮ್ಸ್‌ ಇಂಪ್ಯಾಕ್ಟ್ : ಮದ್ದೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರಸಗೊಬ್ಬರ ವಶ, ಸಾವಯವ ಹೆಸರಿನಲ್ಲಿ ರೈತರಿಗೆ ವಂಚನೆ

ಮಂಡ್ಯ ಸೆ 30 : ಮದ್ದೂರಿನ ಜೆಕೆ ಆರ್ಗ್ಯಾನಿಕ್ಸ್ ಕಂಪನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರಸಗೊಬ್ಬರದ ಬಗ್ಗೆ ಜೊತೆಗೆ ಸಾವಯವ ಹೆಸರಿನಲ್ಲಿ ರೈತರಿಗೆ ವಂಚಿಸುತ್ತಿರುವ ಬಗ್ಗೆ ವಿಜಯ ಟೈಮ್ಸ್‌ ಕವರ್ ಸ್ಟೋರಿ ತಂಡ ಕಾರ್ಯಚರಣೆ ನಡೆಸಿ ಜೆಕೆ ಆರ್ಗ್ಯಾನಿಕ್ಸ್ ಕಂಪನಿಯ ಅಕ್ರಮವನ್ನು ಬಯಲಿಗೆಳೆದಿತ್ತು ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೂ ಮಾಹಿತಿ ನೀಡಿತ್ತು.  ಈ ಮಾಹಿತಿ ಆಧಾರದ ಮೇರಗೆ ಕೃಷಿ ಇಲಾಖೆಯ ಅಧಿಕಾರಿಗಳು ಜೆಕೆ ಆರ್ಗ್ಯಾನಿಕ್ಸ್ ಕಂಪನಿಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು  40 ಲಕ್ಷಕ್ಕೂ ಅಧಿಕ ಮೌಲ್ಯದ ರಸಗೊಬ್ಬರಗಳನನ್ನು ವಶಪಡಿಸಿಕೊಂಡಿದ್ದಾರೆ.

ಜೆಕೆ ಆರ್ಗ್ಯಾನಿಕ್ಸ್ ಕಂಪನಿಯ ಮಾಲೀಕ ಸೆ 3 ರಂದು ಸಾವಯವ ಗೊಬ್ಬರ ತಯಾರಿಕೆ ಮಾಡುವುದಾಗಿ ಕೃಷಿ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿದ್ದರು. ಆದರೆ ಈ ಘಟಕದಲ್ಲಿ ರಾಸಯನಿಕ ಗೊಬ್ಬರಗಳಾದ ಯುರಿಯಾ,ಪೊಟಾಷ್, ಡೊಲೋಮೈಟ್, ಜಿಪ್ಸಂ, ಮತ್ತು ಕಾಂಪ್ಲೆಕ್ಸ್ ಗೊಬ್ಬರಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ಜೊತೆಗೆ ರಸಗೊಬ್ಬರಗಳ ದಾಸ್ತಾನಿಗೆ ಹಾಗೂ ಮಾರಟಕ್ಕೆ ಯಾವುದೇ ಪರವಾನಗಿ ಪಡೆದುಕೊಂಡಿರಲಿಲ್ಲ. ಹಾಗೂ ಸಾವಯವ ಗೊಬ್ಬರದ ಹೆಸರಿನಲ್ಲಿ ರೈತರನ್ನು ವಂಚಿಸುತ್ತಿದ್ದರು. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version