ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ವಿವಿಧ ನ್ಯಾಯಾಲಯಗಳಲ್ಲಿ ಖಾಲಿ (Vacancy in Mandya Court) ಇರುವ 41 ಜವಾನ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ
ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ (Vacancy in Mandya Court) ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ : ಮಂಡ್ಯ ಜಿಲ್ಲಾ ಸತ್ರ ನ್ಯಾಯಾಲಯ.
ಹುದ್ದೆ ಹೆಸರು : ಜವಾನರು
ಒಟ್ಟು ಹುದ್ದೆಗಳ ಸಂಖ್ಯೆ : 41
ಅರ್ಜಿ ಹಾಕಲು ಬೇಕಾದ ಅರ್ಹತೆಗಳು :
SSLC ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.
ಕನಿಷ್ಠ 18 ವರ್ಷ ಪೂರೈಸಿರಬೇಕು.
GM 35, OBC ವರ್ಗದವರಿಗೆ 38, SC / ST, ಪವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯಸ್ಸು ಮೀರಿರಬಾರದು.
ಆಯ್ಕೆ ವಿಧಾನ : SSLCಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ, 1 ಹುದ್ದೆಗೆ 10 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು. ನಂತರ ಸಂದರ್ಶನ ನಡೆಸಲಾಗುವುದು.
ವೇತನ : ರೂ.17000-28950.
ಅರ್ಜಿ ಶುಲ್ಕ ವಿವರ
GM ಅಭ್ಯರ್ಥಿಗಳಿಗೆ ರೂ.300.
OBC ವರ್ಗಗಳ ಅಭ್ಯರ್ಥಿಗಳಿಗೆ ರೂ.150.
SC, ST ಮತ್ತು ಪ್ರವರ್ಗ-1 , ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಶೈಕ್ಷಣಿಕ ಅಂಕಪಟ್ಟಿಗಳು
ಜಾತಿ ಪ್ರಮಾಣ ಪತ್ರ
ಅದಾಯ ಪ್ರಮಾಣ ಪತ್ರ
ಭಾವಚಿತ್ರ ಮತ್ತು ಸಹಿ ಸ್ಕ್ಯಾನ್ ಕಾಪಿ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 03-05-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 03-06-2024
ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: 04-06-2024
ಮಂಡ್ಯ ಜಿಲ್ಲಾ ಕೋರ್ಟ್ ವೆಬ್ ವಿಳಾಸ https://mandya.dcourts.gov.in/online-recruitment/
ಇದನ್ನು ಓದಿ: ಲೈಂಗಿಕ ಶೋಷಣೆ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ : ಎಚ್ಚರಿಕೆ ನೀಡಿದ SIT