ರಾಜ್ಯದಲ್ಲಿ ಭಯಾನಕವಾಗಿ ನಡೀತಿದೆ ಗೊಬ್ಬರ ಮಾಫಿಯಾ! ಎಚ್ಚರ, ಗೊಬ್ಬರ ಮಾಫಿಯಾಕ್ಕೆ ಬಲಿಯಾಗಬೇಡಿ ! ಮಂಡ್ಯದಲ್ಲೇ ಇದೆ ಮಾಫಿಯಾ ಕೇಂದ್ರ. ಎರೆಗೊಬ್ಬರ ಹೆಸರಲ್ಲಿ ರೈತನಿಗೆ ನಡೀತಿದೆ ಭಾರೀ ಮೋಸ

Vijaya Times big expose ! Fake fertilizer mafia is giving poison in the name of organic vermicompost

ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡ ಈ ಬಾರಿ ದಾಳಿ ಮಾಡಿದ್ದು, ಕಳಪೆ ಗೊಬ್ಬರ ಮಾಫಿಯಾದ ಮೇಲೆ. ಆರ್ಗಾನಿಕ್ ಹೆಸರಲ್ಲಿ ನಮ್ಮ ಅನ್ನದ ತಟ್ಟೆಗೆ ವಿಷ ಹಾಕೋ ಖದೀಮರ ವಿರುದ್ಧ. ಎರೆಗೊಬ್ಬರ, ನೈಸರ್ಗಿಕ ಗೊಬ್ಬರದ ಹೆಸರಲ್ಲಿ ಕಾಕರ್ಕೋಟ ವಿಷ ಬೆರೆಸಿ ಕೊಡೋ ಕರಾಳದಂಧೆಯ ಭಯಾನಕ ಮುಖ ಬಯಲು ಮಾಡಿತು ಕವರ್‌ಸ್ಟೋರಿ ತಂಡ.

ಈ ದಂಧೆ ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಅನ್ನೋ ಮಾಹಿತಿ ಕವರ್‌ಸ್ಟೋರಿ ತಂಡಕ್ಕೆ ಸಿಕ್ತು. ಈ ಮಾಹಿತಿಯ ಬೆನ್ನತ್ತಿ ಹೊರಟ ನಾವು ಮೊದಲು ತಲುಪಿದ್ದು, ಎರೆಹುಳ ಗೊಬ್ಬರದ ಹೆಸರಲ್ಲಿ ರೈತರಿಗೆ ಮೋಸ ಮಾಡುತ್ತಿರುವ ಜಾಗಕ್ಕೆ.

ಎಸ್‌.ಎಲ್‌.ವಿ ಅನ್ನೋ ಎರೆಗೊಬ್ಬರ ಫ್ಯಾಕ್ಟರಿಯಲ್ಲಿ ನಕಲಿ ಎರೆಗೊಬ್ಬರ ತಯಾರಾಗ್ತಿದೆ ಅನ್ನೋ ಪಕ್ಕಾ ಮಾಹಿತಿ ನಮಗೆ ಸಿಕ್ತು. ಈ ಮಾಹಿತಿಯ ಬೆನ್ನತ್ತಿ ಹೊರಟಾಗ ಬಯಲಾಯ್ತು ಬೆಚ್ಚಿ ಬೀಳಿಸೋ ರಹಸ್ಯಗಳು.

ಈ ನಕಲಿ ಎರೆಗೊಬ್ಬರ ದಂಧೆ ಇಲ್ಲಿಗೆ ನಿಲ್ಲಲ್ಲ. ಇವರು ತಯಾರಿಸೋ ಹಟ್ಟಿ ಗೊಬ್ಬರ ಇಲ್ಲಿಂದ ನೇರವಾಗಿ ಸೋಮನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಜೆ.ಕೆ ಆರ್ಗಾನಿಕ್‌ ಫ್ಯಾಕ್ಟರಿಗೆ ಹೋಗುತ್ತೆ. ಇಲ್ಲಿ ಈ ಗೊಬ್ಬರಕ್ಕೆ ಮತ್ತೆ ಒಂದಿಷ್ಟು ರಾಸಾಯನಿಕಗಳು ಬೆರಕೆಯಾಗಿ  ಎರೆಗೊಬ್ಬರ ಹೆಸರಲ್ಲಿ ಮಾರುಕಟ್ಟೆ ತಲುಪುತ್ತೆ. ಈ ಕಳಪೆ ದಂಧೆಯನ್ನು ಬಯಲು ಮಾಡಲು ನಿರ್ಧರಿಸಿದ ನಮ್ಮ ತಂಡಕ್ಕೆ ಬೆಂಬಲವಾಗಿ ಮಂಡ್ಯದ ರೈತ ಮುಖಂಡರರಾದ ಲಕ್ಷ್ಮಣ್‌ , ಪ್ರಕಾಶ್‌ , ರಾಮಲಿಂಗೇ ಗೌಡ, ಅಪ್ಪೇ ಗೌಡ, ಮನು, ಸಾಥ್‌ ಕೊಟ್ರು. ಇವರ ಸಹಾಯದಿಂದ ಆರ್ಗಾನಿಕ್ ಹೆಸರನ್ನು ಇಟ್ಟುಕೊಂಡು ರಸಗೊಬ್ಬರ ತಯಾರಿಸುತ್ತಿರುವ ಫ್ಯಾಕ್ಟರಿಯೊಳಗೆ ನುಗ್ಗಿದ ನಮಗೆ ಶಾಕ್‌ ಮೇಲೆ ಶಾಕ್‌ ಕಾದಿತ್ತು.

ವಿಜಯಟೈಮ್ಸ್‌ನ ಕವರಸ್ಟೋರಿ ತಂಡ ರಿಯಾಲಿಟಿ ಚೆಕ್‌ ಮಾಡಿ ಎರೆಗೊಬ್ಬರ ಮಾಫಿಯಾದ ಬಣ್ಣಬಯಲು ಮಾಡಿತು. ಈ ಬಗ್ಗೆ ಮಂಡ್ಯ ಹಾಗೂ ಮದ್ದೂರಿನ ತೋಟಗಾರಿಕಾ ಇಲಾಖೆಗೆ ಮಾಹಿತಿ ನೀಡಲಾಯಿತು. ಮಾಹಿತಿಗೆ ಸ್ಪಂದಿಸಿದ ತೋಟಗಾರಿಕಾ  ಈ ಫ್ಯಾಕ್ಟರಿ ಮೇಲೆ ದಾಳಿ ಮಾಡಿದರು.

ಫ್ಯಾಕ್ಟರಿಯಲ್ಲಿದ್ದ ಎಲ್ಲಾ ರಸಗೊಬ್ಬರಗಳ ಬಗ್ಗೆ ತನಿಖೆ ಮಾಡಿದ ಅಧಿಕಾರಿಗಳು ಜೆ,ಕೆ ಫ್ಯಾಕ್ಟರಿಯ ವಿರುದ್ಧ ಪೊಲೀಸ್‌ ಇಲಾಖೆಯಲ್ಲಿ ದೂರು ನೀಡಿ, ಎಫ್‌ಐಆರ್ ದಾಖಲಿಸಿದ್ರು. ಇದು ವಿಜಯಟೈಮ್ಸ್‌ ಇಂಪ್ಯಾಕ್ಟ್‌.

Exit mobile version