Karnataka : ಸರ್ಕಾರ ಅಧಿಕೃತವಾಗಿ ಆಪ್ ಗಳನ್ನು ಬಿಡುಗಡೆ ಮಾಡಿಲ್ಲದಿದ್ದರು ಗೂಗಲ್ ಪ್ಲೇ ಸ್ಟೋರ್ ಅಲ್ಲಿ ಹಲವು ಆಪ್ ಗಳು (fakeapp for guarantee schemes) ಕಾಣಸಿಗುತ್ತಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಕಲಿ ಆಪ್ಗಳ ತಲೆಬಿಸಿ ಶುರುವಾಗಿದೆ. ಲಕ್ಷಾಂತರ ಮಂದಿ ಗ್ಯಾರಂಟಿ ಯೋಜನೆಗಳ ನಕಲಿ ಆಪ್ ಗಳನ್ನೂ ಡೌನ್ಲೋಡ್ ಮಾಡಿದ್ದು ,
ಸರಿಯಾದ ಮಾಹಿತಿಯ ಸುರಕ್ಷತೆ ಇಲ್ಲದೆ ಮುಂದೆ ತೊಂದರೆಗೆ (fakeapp for guarantee schemes ) ಸಿಲುಕುವ ಸಾಧ್ಯತೆ ಇದೆ.
ಸ್ಕೀಮ್ ಗೃಹಜ್ಯೋತಿ ಎಂಬ ಆಪ್ ಡೌನ್ಲೋಡ್ ಮಾಡಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ಬಳಕೆ ರಾಜ್ಯ ಸರ್ಕಾರ ಉಚಿತ ಯೋಜನೆಗಳ (Free Scheme) ಘೋಷಣೆ ಮತ್ತು ಜಾರಿ ಮಾಡುತ್ತಿದ್ದಂತೆ ಅಂತರ್ಜಾಲದಲ್ಲಿ
ಯೋಜನೆಯ ನಕಲಿ ಆಪ್ ಗಳ ಹಾವಳಿ ಶುರುವಾಗಿದೆ. ಒಂದು ತಿಂಗಳ ಹಿಂದಷ್ಟೇ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಮಾಡಲಾಗಿತ್ತು. ಇದೀಗ ಇದೆ ತಿಂಗಳ 14 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ
ಮಾಡಬಹುದಾಗಿದೆ ಎಂದು ಸುದ್ದಿ ತಿಳಿದು ಬಂದಿದೆ ಈ ಯೋಜನೆಗೆ ನೇರವಾಗಿ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ತಿಳಿಸಿದೆ. ಆದ್ರೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಮಾತ್ರ ಎಲ್ಲ
ಯೋಜನೆಗಳ ನಕಲಿ ಆಪ್ ಗಳು ತಲೆ ಎತ್ತಿದ್ದು, ಜನರಿಗೆ ಕಿರಿ ಕಿರಿ ಉಂಟುಮಾಡುತ್ತಿದೆ.
ಇದನ್ನು ಓದಿ: ಗ್ರೂಪ್ ಬಿ, ಸಿ ಹುದ್ದೆಗಳಿಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನೇಮಕ: ಅರ್ಜಿ ಆಹ್ವಾನ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಖದೀಮರಿಗೆ ಕನ್ನ ಹಾಕಲು ಒಂದು ಮಾರ್ಗವಾಗಿದೆ ನೀವು ಆಪ್ ಇನ್ಸ್ಟಾಲ್ ಮಾಡಿಕೊಂಡ್ರೆ ನಿಮಗೆ ಸರ್ಕಾರದ ಸೌಲಭ್ಯ ಮನೆಯಲ್ಲಿ ಕುಳಿತು ಪಡೆಯಬಹುದು
ಎಂದು ತಿಳಿಸಲಾಗ್ತಿದೆ ಹಾಗಾಗಿ ಬಹಳಷ್ಟು ಗ್ರಾಮೀಣ ಭಾಗದ ಜನರು ಈ ಆಪ್ ಗಳ ಮೊರೆ ಹೋಗ್ತಿದ್ದಾರೆ ಇನ್ನು ಹಲವರು ಗೂಗಲ್ ಪ್ಲೇ ಸ್ಟೋರ್ (Google Play )ಅಲ್ಲಿ ಸಿಗುತ್ತಿರುವ ಆಪ್ ಗಳ
ಡೌನ್ಲೋಡ್ ಮಾಡಿಕೊಳ್ತಿದ್ದಾರೆ. ಇಲ್ಲಿ ತನಕ ಗೃಹಲಕ್ಷ್ಮಿ ಯೋಜನೆಯ ಆಪ್ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಡೌನ್ಲೋಡ್ ಮಾಡಲಾಗಿದೆ ಗೃಹಜ್ಯೋತಿ ಸ್ಕೀಮ್ ಎಂಬ ಆಪ್ ಅನ್ನು ಒಂದು
ಲಕ್ಷಕ್ಕೂ ಹೆಚ್ಚಿನ ಜನರು ಡೌನ್ಲೋಡ್ ಮಾಡಿದ್ದಾರೆ.
ಎಷ್ಟು ಆಪ್ ಡೌನ್ಲೋಡ್ ?
- ಶಕ್ತಿಸ್ಮಾರ್ಟ್ ಕಾರ್ಡ್ – 1ಲಕ್ಷಕ್ಕೂ ಹೆಚ್ಚು
- ಗೃಹಜ್ಯೋತಿ – 1ಲಕ್ಷಕ್ಕೂ ಹೆಚ್ಚು
- ಗೃಹಲಕ್ಷ್ಮಿ – 10ಸಾವಿರಕ್ಕೂ ಹೆಚ್ಚು
- ಅನ್ನಭಾಗ್ಯ ಪೋರ್ಟಲ್ – 100ಕ್ಕೂ ಹೆಚ್ಚು
ಆಂಡ್ರಾಯ್ಡ್ ಸೇರಿದಂತೆ ಥರ್ಡ್ ಪಾರ್ಟಿ ಮುಲಕ ಮಾಡಿಕೊಳ್ಳುತ್ತಿರುವ ಆಪ್ ಸುರಕ್ಷಿತವಾಗಿಲ್ಲ ಎಂದು ಸೈಬರ್ ಪೋಲೀಸರ ಅಭಿಮತವಾಗಿದೆ. ಈ ಆಪ್ಗಳು ಆಧಾರ್ ಕಾರ್ಡ್, ಪಾನ್ ಕಾರ್ಡ್,
ಬ್ಯಾಂಕ್ ಖಾತೆಯ (Bank Account )ಮಾಹಿತಿಗಳನ್ನು ಪಡೆಯುತ್ತಿವೆ ಆದ್ದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಡೇಟಾ ದುರ್ಬಳಕೆ ಆಗಬಹುದು ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ ಕಾರಣ ಯಾವುದೇ

ಪರಿಚಯವಿಲ್ಲದ ಅಪ್ ಬಳಸಬಾರದು ಹಾಗೂ ಲಿಂಕ್ ಗಳನ್ನೂ ತೆರೆಯಬಾರದು ಎಂದು ಹೇಳುತ್ತಾರೆ
ಯಾವುದೇ ಯೋಜನೆಗೂ ಸರ್ಕಾರ ಅಧಿಕೃತವಾಗಿ ಆಪ್ ಬಿಡುಗಡೆ ಮಾಡಿಲ್ಲ ಎಂದು ಹಲವು ಬಾರಿ ಸಚಿವರು ಹೇಳಿಕೆ ನೀಡಿದ್ದಾರೆ. ಆದ್ರೂ ಕೂಡ ಗೂಗಲ್ ಆಪ್ ಸ್ಟೋರಿನಲ್ಲಿ ನಕಲಿ ಆಪ್ಗಳು ಕಂಡು
ಬರುತ್ತಿವೆ ಆದ್ರೆ ಜನರು ಮಾತ್ರ ಸರ್ಕಾರ ಎಂದು ನಕಲಿ ಆಪ್ಗಳನ್ನು ಬಳಸುತ್ತಿದ್ದಾರೆ. ಇನ್ನು ಆಹಾರ ಇಲಾಖೆಯಿಂದ ಯಾವುದೇ ಅಧಿಕೃತ ಆಪ್ ಬಿಡುಗಡೆ ಮಾಡಿಲ್ಲ. ಸಾರ್ವಜನಿಕರು ಯಾವುದೇ
ಆಪ್ಗಳನ್ನು ಬಳಸಬಾರದು ಹಾಗು ಪಡಿತರ ಚೀಟಿ ಜತೆ ಲಿಂಕ್ ಇರುವ ಆಧಾರ್ ಕಾರ್ಡ್ ಮುಖಾಂತರ ಯೋಜನೆಯ ಹಣ ನೀಡಲಾಗುತ್ತಿದೆ ಎಂದು ಕಲ್ಬುರ್ಗಿ ಆಹಾರ ಮತ್ತು ನಾಗರಿಕ ಸರಬರಾಜು
ಇಲಾಖೆಯ ಉಪ ನೀರ್ದೇಶಕ ಶಾಂತಗೌಡ ಗುಣಕಿಯವರು ಹೇಳಿದ್ದಾರೆ.
- ಭವ್ಯಶ್ರೀ ಆರ್.ಜೆ