ಡಿಬಾಸ್ ಮನವಿಗೆ ಸ್ಪಂದಿಸಿದ ಫ್ಯಾನ್ಸ್: ರಾಜ್ಯದ 9 ಮೃಗಾಲಯಗಳಿಂದ 70.33 ಲಕ್ಷ ರೂ. ದೇಣಿಗೆ ಸಂಗ್ರಹ

ಬೆಂಗಳೂರು, ಜೂ. 09: ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಝೂನಲ್ಲಿರೋ ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದೆ. ಹೀಗಾಗಿ ಎಲ್ಲಾ ಝೂಗಳಲ್ಲಿನ ಪ್ರಾಣಿಗಳನ್ನ ದತ್ತು ಪಡೆಯಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ.

ಡಿಬಾಸ್ ಮನವಿಗೆ ಸ್ಪಂದಿಸಿದ ರಾಜ್ಯದ ಜನತೆ ರಾಜ್ಯದ ಮೃಗಾಲಯಕ್ಕೆ ಭರಪೂರ ದೇಣಿಗೆ ನೀಡಿದ್ದಾರೆ. ಕೇವಲ 4 ದಿನಗಳಲ್ಲಿ 70.33 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದ್ದು, ಆ ಮೂಲಕ ದಾಸನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಪ್ರಾಣಿಪ್ರಿಯರು 50 ರೂ.ನಿಂದ 1 ಲಕ್ಷ ರೂ.ವರೆಗೂ ದೇಣಿಗೆ ನೀಡಿದ್ದಾರೆ. ಪರಿಣಾಮ ರಾಜ್ಯದ 9 ಮೃಗಾಲಯಗಳಿಂದ ಭರ್ಜರಿ ದೇಣಿಗೆ ಸಂಗ್ರಹವಾಗಿದೆ. ಈ ಪೈಕಿ ಮೈಸೂರು ಮೃಗಾಲಯಕ್ಕೆ 38 ಲಕ್ಷ ರೂ.ಗಳಿಗೂ ಹೆಚ್ಚಿನ ಸಂಗ್ರಹವಾಗಿದ್ದರೆ, ಬೆಂಗಳೂರು ಮೃಗಾಲಯಕ್ಕೆ 20 ಲಕ್ಷಕ್ಕಿಂತ ಹೆಚ್ಚಿನ ದೇಣಿಗೆ ಸಂಗ್ರಹವಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುಂತೆ ನಟ ದರ್ಶನ್ ಮನವಿ ಮಾಡಿದ್ದರು. ಡಿಬಾಸ್ ವೀಡಿಯೋ ನೋಡಿದ ದರ್ಶನ್ ಫ್ಯಾನ್ಸ್ ತಮಗಿಷ್ಟದ ಪ್ರಾಣಿ ದತ್ತು ಪಡೆದಿದ್ದಾರೆ. ನಟ ದರ್ಶನ್ ಕರೆಗೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಧನ್ಯವಾದ ತಿಳಿಸಿದ್ದಾರೆ.

Exit mobile version