ಕೃಷಿ ಕಾನೂನು ರದ್ದತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ ನ 29  : ಇತ್ತೀಚೆಗಷ್ಟೆ ಕೃಷಿ ಕಾನೂನುಗಳನ್ನು ರದ್ದು ಮಾಡುವುದಾಗಿ ಘೋಷಿಸಿದ್ದ ಪ್ರಧಾನಿ ಮೋದಿ ಇಂದು ಪ್ರತಿಪಕ್ಷಗಳ ಸಂಸದರ ಗದ್ದಲದ ನಡುವೆ ಲೋಕಸಭೆಯು ಸೋಮವಾರ ಕೃಷಿ ಕಾನೂನುಗಳ ರದ್ದತಿ ಮಸೂದೆ, 2021 ಅನ್ನು ಅಂಗೀಕರಿಸಿತು.

ಸದನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಸೂದೆಯನ್ನು ಸದನದಲ್ಲಿ ಚರ್ಚಿಸಬೇಕೆಂದು ಒತ್ತಾಯಿಸಿದರು.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ರದ್ದತಿಗೆ ಕಾರಣಗಳನ್ನು ವಿವರಿಸಬೇಕು ಮತ್ತು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ವಾದಿಸುತ್ತಿವೆ.

ಬಹು ನಿರೀಕ್ಷಿತ ಚಳಿಗಾಲದ ಅಧಿವೇಶನದ ಮೊದಲ ದಿನವೇ ಗದ್ದಲ ಪ್ರಾರಂಭವಾಗಿದೆ, ಮೊದಲ ಗಂಟೆಯಲ್ಲಿ ಉಭಯ ಸದನಗಳು ಮುಂದೂಡಲ್ಪಟ್ಟವು. ಪ್ರಶ್ನೋತ್ತರ ವೇಳೆಯಲ್ಲಿ ಗದ್ದಲದ ನಂತರ ಲೋಕಸಭೆಯನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು, ರಾಜ್ಯಸಭೆಯನ್ನು ಕೂಡ ಸ್ವಲ್ಪ ಸಮಯ ಮುಂದೂಡಲಾಯಿತು.

ಲೋಕಸಭೆಯು 12 ಗಂಟೆಗಳ ನಂತರ ಇಂದು ಕಲಾಪವನ್ನು ಪುನರಾರಂಭಿಸಿದಾಗ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರತಿಪಕ್ಷದ ಪೀಠದ ಸದಸ್ಯರ ಘೋಷಣೆಗಳ ನಡುವೆ ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ಅನ್ನು ಮಂಡಿಸಿದರು.

ಹೊಸ ರದ್ದತಿ, ಮಸೂದೆಯನ್ನು ಅಂಗೀಕರಿಸಿದ ತಕ್ಷಣ, ಸಂಸತ್ತಿನ ಕೆಳಮನೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

Exit mobile version