ಚರ್ಮದ ಅಂದಕ್ಕೆ ಉಪಯೋಗಿಸಿ ಮೆಂತ್ಯ

ಮೆಂತ್ಯವನ್ನು ದಿನ ನಿತ್ಯದ ಅಡುಗೆಯಲ್ಲಿ ಬಳಸುವುದು ಸರ್ವೇಸಾಮಾನ್ಯ ಚರ್ಮದ ಅಂದಕ್ಕೆ ಮತ್ತು ಜೀರ್ಣಕ್ರಿಯೆಗೆ ಮೆಂತ್ಯವನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಅದರ ಗಿಡದಿಂದ ಹಾಗೂ ಅದರ ಬೀಜಗಳಿಂದ ಅನೇಕ ರೀತಿಯ ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಮೆಂತ್ಯ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.

ಮೆಂತ್ಯವನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದಲ್ಲದೇ ಮೆಂತ್ಯದಲ್ಲಿ ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಷಿಯಂ ಇತ್ಯಾದಿ ಅಂಶಗಳೂ ಇವೆ. ಮೆಂತ್ಯದ ಪರಿಣಾಮವು ಬಿಸಿಯಾಗಿರುವುದರಿಂದ, ಚಳಿಗಾಲದಲ್ಲಿ ಮೆಂತ್ಯವನ್ನು ಹೆಚ್ಚು ಬಳಸಲಾಗುತ್ತದೆ.

ಮೆಂತ್ಯದ ಪ್ರಯೋಜನಗಳು

ಜೀರ್ಣಕ್ರಿಯೆಗೆ ಸಹಕಾರಿ

ಮೆಂತ್ಯವು ಫೈಬರ್ನಲ್ಲಿ ಸಮೃದ್ಧವಾಗಿದೆ. ಇದಲ್ಲದೆ, ಇದರಲ್ಲಿ ಅನೇಕ ರೀತಿಯ ಆಂಟಿಆಕ್ಸಿಡೆಂಟ್‌ಗಳು ಸಹ ಇರುತ್ತವೆ, ಇದು ಮಲಬದ್ದತೆ ಅಥವಾ ಜೀರ್ಣಕಾರಿ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹಸಿರು ಮೆಂತ್ಯ ಸೇವನೆಯು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ.

ಚರ್ಮಕ್ಕೆ ಪ್ರಯೋಜನಕಾರಿ

ತ್ವಚೆಯನ್ನು ಮೃದುವಾಗಿಸಲು ಮೆಂತ್ಯವನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಮೆಂತ್ಯವು ಚರ್ಮದ ಮೇಲಿನ ಕಲೆಗಳನ್ನು ಅಥವಾ ಗುರುತುಗಳನ್ನು ನಿವಾರಿಸುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ತರುತ್ತದೆ. ಮೆಂತ್ಯ ತಿನ್ನುವುದರಿಂದ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಬಹುದು.

ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ

ಮೆಂತ್ಯವು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಾಲ್ಕು ವಾರಗಳ ಕಾಲ ಪ್ರತಿದಿನ 500 ಮಿಗ್ರಾಂ ಮೆಂತ್ಯವನ್ನು ಸೇವಿಸುವುದರಿಂದ ಟೆಸ್ಟೋಸ್ಟೆರಾನ್ ಮಟ್ಟವನ್ನು ಬಹುಪಟ್ಟು ಹೆಚ್ಚಿಸಲಾಗಿದೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ.

ಕೂದಲು ಆರೈಕೆಗೆ

ಮೆಂತ್ಯ ಕೂದಲ ಆರೈಕೆಗೂ ಸಹ ಪ್ರಯೋಜನಕಾರಿಯಾಗಿದೆ. ಇದರ ಎಲೆಗಳನ್ನು ಕೂದಲಿಗೆ ಬಳಸುತ್ತಾರೆ. ಮೆಂತ್ಯ ಸೊಪ್ಪನ್ನು ರುಬ್ಬಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗಿ, ದಟ್ಟವಾಗಿ ಮತ್ತು ಹೊಳೆಯುತ್ತದೆ.

Exit mobile version