Fifa ವಿಶ್ವಕಪ್ : ‘ಒನ್ ಲವ್’ ಆರ್ಮ್‌ಬ್ಯಾಂಡ್ ಧರಿಸಿದ ಬೆಲ್ಜಿಯಂನ ವಿದೇಶಾಂಗ ಸಚಿವೆ ಹಡ್ಜಾ ಲಹ್ಬಿಬ್!

Doha : ಕತಾರ್‌ನ(Qatar) ದೋಹಾದಲ್ಲಿರುವ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ಕೆನಡಾ(Canada) ವಿರುದ್ಧದ ತನ್ನ ದೇಶದ ಫಿಫಾ ವಿಶ್ವಕಪ್ 2022(Fifa World Cup 2022) ಪಂದ್ಯದ ಸಂದರ್ಭದಲ್ಲಿ,

ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ ಅವರನ್ನು ಭೇಟಿಯಾದಾಗ ಬೆಲ್ಜಿಯಂನ ವಿದೇಶಾಂಗ ಸಚಿವೆ ಹಡ್ಜಾ ಲಹ್ಬಿಬ್ ಅವರು ‘ಒನ್ ಲವ್’ ಆರ್ಮ್‌ಬ್ಯಾಂಡ್  ಧರಿಸಿ ಕಾಣಿಸಿಕೊಂಡರು.

ಲಹ್ಬೀಬ್ ಅವರು ತಮ್ಮ ಟ್ವಿಟ್ಟರ್(Twitter) ಹ್ಯಾಂಡಲ್‌ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಇನ್ನು ಈ ಹಿಂದೆ, ಬೆಲ್ಜಿಯಂ ಸೇರಿದಂತೆ ಏಳು ಯುರೋಪಿಯನ್ ರಾಷ್ಟ್ರಗಳ ನಾಯಕರಿಗೆ ‘ಒನ್ ಲವ್’ ಆರ್ಮ್‌ಬ್ಯಾಂಡ್‌ಗಳನ್ನು ಧರಿಸುವುದನ್ನು ಫಿಫಾ ನಿಷೇಧಿಸಿತ್ತು.

ಆಟಗಾರರು ಆರ್ಮ್‌ಬ್ಯಾಂಡ್‌ಗಳನ್ನು ಧರಿಸಿದರೆ ಹಳದಿ ಕಾರ್ಡ್‌ಗಳನ್ನು ನೀಡಲಾಗುತ್ತದೆ ಎಂದು ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ ಬೆದರಿಕೆ ಹಾಕಿತ್ತು.

ಫಿಪಾದ ಈ ನಿರ್ಧಾರದ ವಿರುದ್ದ ಯುರೋಪಿನ್‌ಏಳು ರಾಷ್ಟ್ರಗಳು ಕಾನೂನು ಸಮರ ಸಾರಿದ್ದವು. ವೈವಿಧ್ಯತೆ ಮತ್ತು ಮಾನವ ಹಕ್ಕುಗಳ ಸಂಕೇತವನ್ನು ಬಳಸುವುದನ್ನು ಫಿಫಾ ನಿಷೇಧಿಸಿದೆ.

ಇದನ್ನೂ ಓದಿ : https://vijayatimes.com/karnataka-maharashtra-border-issue/

ನಿಷೇಧವು ಅದರ ಅರ್ಥವನ್ನು ನಿಖರವಾಗಿ ಹೇಳದೆಯೇ ಕ್ರೀಡಾ ನಿರ್ಬಂಧಗಳಿಗೆ ಬೃಹತ್ ಪೆನಾಲ್ಟಿಗಳಿಗೆ ಲಿಂಕ್ ಮಾಡಲಾಗುವುದು ಎಂದು ಅದು ಹೇಳಿದೆ.

ಫಿಫಾದ ಕಾರ್ಯವಿಧಾನವು ವಾಸ್ತವವಾಗಿ ನ್ಯಾಯಸಮ್ಮತವಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ನಾವು ಉತ್ಸುಕವಾಗಿದ್ದೇವೆ ಎಂದು ಬೆಲ್ಜಿಯಂ(Belgium) ಹೇಳಿದೆ.

ಇದನ್ನೂ ಓದಿ : https://vijayatimes.com/special-grants-to-kannada-schools/

ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜಪಾನ್ ವಿರುದ್ಧದ ತಮ್ಮ ಪಂದ್ಯಕ್ಕೂ ಮುನ್ನ, ಜರ್ಮನ್ ತಂಡದ ಆಟಗಾರರು ಕೂಡಾ ತಮ್ಮ ಬಾಯಿಯ ಮೇಲೆ ಕೈ ಹಾಕಿ ಚಿತ್ರಕ್ಕೆ ಪೋಸ್ ನೀಡುವ ಮೂಲಕ ನಿಷೇಧದ ವಿರುದ್ಧ ಪ್ರತಿಭಟಿಸಿತು.

ಜರ್ಮನಿಯ ಆಂತರಿಕ ಸಚಿವರಾದ ನ್ಯಾನ್ಸಿ ಫೈಸರ್ ಅವರು ನವೆಂಬರ್ 23 ರಂದು ತಮ್ಮ ದೇಶದ ಪಂದ್ಯದ ವೇಳೆ ಸ್ಟ್ಯಾಂಡ್‌ನಲ್ಲಿ ಕುಳಿತಿರುವಾಗ ‘ಒನ್ ಲವ್’ ಆರ್ಮ್‌ಬ್ಯಾಂಡ್ ಅನ್ನು ಧರಿಸಿದ್ದರು.

ಅವರು ಕೂಡಾ “ಒನ್‌ಲವ್”‌ ಹ್ಯಾಶ್‌ಟ್ಯಾಗ್‌ನೊಂದಿಗೆ(Hashtag) ಚಿತ್ರವನ್ನು ಸಹ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

https://youtu.be/9ouiEo3FiBs DIRTY FOOD SECRET | ನೋ….ನೋ…..ನೂಡಲ್ಸ್!

ಬೆಲ್ಜಿಯಂ ತಂಡ ಕೆನಡಾ ವಿರುದ್ಧ ತಮ್ಮ ಆರಂಭಿಕ ಪಂದ್ಯವನ್ನು 1-0 ಅಂತರದಲ್ಲಿ ಗೆದ್ದು ತಮ್ಮ ಗುಂಪಿನಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ, ಜರ್ಮನಿ 1-2 ರಿಂದ ಜಪಾನ್ ವಿರುದ್ಧ ಸೋತು, ಇ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Exit mobile version