ಹೈಕಮಾಂಡ್ ಜೊತೆ ಸಿದ್ದರಾಮಯ್ಯ ಡಿ ಕೆ ಶಿವ ಕುಮಾರ್ ಇಂದು ಫೈನಲ್ ಸಭೆ!… ಯಾರಿಗೆ ಮಂತ್ರಿ ಭಾಗ್ಯ

New Delhi : ಸರ್ಕಾರ ರಚನೆಯಾದಾಗಿನಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟ ವಿಸ್ತರಣೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ತಮ್ಮ ಬೆಂಬಲಿಗರಿಗೆ ಸಚಿವ (Final meeting with HighCommand) ಸ್ಥಾನ ನೀಡಲು ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ (DK Sivakumar) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇನ್ನು ಈ ಹುದ್ದೆಗಳ ಆಕಾಂಕ್ಷಿಗಳು ಸಾಮೂಹಿಕ ಪ್ರತಿಭಟನೆಗಳನ್ನು ಆಯೋಜಿಸುವ ಮೂಲಕ ಹೈಕಮಾಂಡ್ (High Command) ಮಟ್ಟದಲ್ಲಿ ಸಕ್ರಿಯವಾಗಿ ಲಾಬಿ ನಡೆಸುತ್ತಿದ್ದಾರೆ.

ಸದ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ 10 ಸ್ಥಾನಗಳು ಭರ್ತಿಯಾಗಿದ್ದು, ಇನ್ನೂ 23 ಸ್ಥಾನಗಳು ಹಂಚಿಕೆಯಾಗಬೇಕಿದೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬುದು ಬಹಿರಂಗ ರಹಸ್ಯ. ವಿವಿಧ ಜಿಲ್ಲೆಗಳು, ಪ್ರದೇಶಗಳು ಮತ್ತು ಜಾತಿಗಳಿಂದ ಪ್ರತಿನಿಧಿಗಳನ್ನು ನೇಮಿಸಲು ಹೈಕಮಾಂಡ್ ಇಚ್ಛೆ ವ್ಯಕ್ತಪಡಿಸಿದೆ.

ಆದರೆ, ಈ ತಂತ್ರಕ್ಕೆ ಹಿನ್ನಡೆಯಾದಂತಿದೆ. ಹಿರಿಯ ಶಾಸಕರು ಸಚಿವ ಸ್ಥಾನ ಉಳಿಸಿಕೊಳ್ಳಲು ಪಟ್ಟು ಹಿಡಿದಿದ್ದು,

ಇದನ್ನೂ ಓದಿ : https://vijayatimes.com/kota-srinivas-poojary-outraged/

ಸಿಎಂ ಹಾಗೂ ಡಿಸಿಎಂ ತಮ್ಮ ಆಪ್ತರಿಗೇ ಅವಕಾಶ ಕೊಡುವ ಹಠಕ್ಕೆ ಬಿದ್ದಿದ್ದಾರೆ. ಇದರಿಂದಾಗಿ ಸಚಿವ ಸಂಪುಟ ರಚನೆ ಪ್ರಕ್ರಿಯೆ ದೀರ್ಘವಾಗಿದ್ದು,

ರಾತ್ರಿಯವರೆಗೂ ಸಭೆಗಳು ನಡೆಯುತ್ತಿವೆ. ಸದ್ಯಕ್ಕೆ 8 ಶಾಸಕರು ಮಾತ್ರ ಸಚಿವರಾಗಿ ನೇಮಕಗೊಂಡಿದ್ದು, ಮತ್ತೊಂದು ಸುತ್ತಿನ ಸಂಪುಟ ರಚನೆ ಕಸರತ್ತು ನಡೆಯುತ್ತಿದೆ.

ಸಂಪುಟದಲ್ಲಿ ಬಲ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ದೆಹಲಿಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರಿಗೆ ಸಚಿವ ಪಟ್ಟ ನೀಡಲು ಭಾರೀ ಕಸರತ್ತು ನಡೆಸಿದ್ದು,

ಸಚಿವ ಸಂಪುಟದ ವಿವಾದ ಇತ್ಯರ್ಥಕ್ಕೆ ಕಾಂಗ್ರೆಸ್ (Congress) ಮೈತ್ರಿಕೂಟದ ಸಿದ್ದರಾಮಯ್ಯ ಹಾಗೂ ಡಿಕೆಶಿ (Final meeting with HighCommand ) ದೆಹಲಿ ತಲುಪಿದ್ದಾರೆ.

ಆದರೆ ಇಬ್ಬರೂ ನಾಯಕರು ತಮ್ಮ ಬೇಡಿಕೆಯನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ನೀಡಲು ಡಿಕೆಶಿ ರಣತಂತ್ರ ರೂಪಿಸಿದ್ದಾರೆ.

ಹಾಗಾಗಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjuna Kharge) ಹಾಗೂ ಡಿ.ಕೆ.ಶಿವಕುಮಾರ್,

ಡಿ.ಕೆ.ಸುರೇಶ್ (DK Suresh) ದೆಹಲಿಯ ವೇಣುಗೋಪಾಲ್ (Venugopal) ಮನೆಗೆ ಭೇಟಿ ನೀಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸುವ ಮುನ್ನವೇ ಸಿದ್ದರಾಮಯ್ಯ ಬೆಂಬಲಿಗರ ಬೆನ್ನಿಗೆ ನಿಂತಿದ್ದರು.

ಇದನ್ನೂ ಓದಿ : https://vijayatimes.com/kota-srinivas-poojary-outraged/

ಪ್ರಸ್ತುತ ಸಚಿವ ಸಂಪುಟದಲ್ಲಿ34 ಸ್ಥಾನಗಳಿವೆ. ಜಾತಿ ಲೆಕ್ಕಾಚಾರಗಳ ಪ್ರಕಾರ ಪರಿಶಿಷ್ಟರಿಗೆ 5, ಲಿಂಗಾಯತರಿಗೆ 6, ಕುರುಬ 3, ಪರಿಶಿಷ್ಟಪಂಗಡಕ್ಕೆ 2,ಒಕ್ಕಲಿಗರಿಗೆ 5, ಮುಸ್ಲಿಂ 3, ಹಿಂದುಳಿದವರಿಗೆ

4, ಮತ್ತು ಕ್ರೈಸ್ತರು, ಜೈನ, ಬ್ರಾಹ್ಮಣದಂತಹ ಸಮುದಾಯಗಳಿಗೆ ತಲಾ ಒಂದು ಸ್ಥಾನ ನೀಡುವ ಸಾಧ್ಯತೆಗಳಿವೆ ಮತ್ತು ಇನ್ನುಳಿದ 3 ಸ್ಥಾನಗಳನ್ನು ಖಾಲಿ ಇಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಡಿ.ಕೆ.ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವೇಣುಗೋಪಾಲ್ ಮನೆಯಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವ ಸ್ಥಾನ ಮತ್ತು ಖಾತೆ ಹಂಚಿಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಶುಕ್ರವಾರ ಸಂಪುಟ ವಿಸ್ತರಣೆ ಮಾಡಿ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ.

Exit mobile version