Lahore: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ನೆರೆಯ ಪಾಕಿಸ್ತಾನದಲ್ಲಿ (Financial Crisisin Pakistan) ಅಗತ್ಯ ವಸ್ತುಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ
ಸಿಲುಕಿದ್ದಾರೆ. ಮೂಲಗಳ ಪ್ರಕಾರ, ಪಂಜಾಬ್ನ(Punjab) ಪ್ರಾಂತೀಯ ರಾಜಧಾನಿ ಲಾಹೋರ್ನಲ್ಲಿ(Lahore) ಮೊಟ್ಟೆಯ ಬೆಲೆ ಪ್ರತಿ ಡಜನ್ಗೆ 400 ಪಾಕಿಸ್ತಾನಿ ರೂಪಾಯಿಗಳಿಗೆ (ಪಿಕೆಆರ್) ಏರಿಕೆಯಾಗಿದೆ
ಎನ್ನಲಾಗಿದ. ಹೆಚ್ಚಿನ ಸರಕುಗಳ(Goods) ಬೆಲೆಗಳು ಗಗನಕ್ಕೇರುತ್ತಿರುವ ಕಾರಣ ಸ್ಥಳೀಯ ಆಡಳಿತವು ಸರ್ಕಾರದ(Government) ದರ ಪಟ್ಟಿಯನ್ನು ಜಾರಿಗೊಳಿಸಲು ವಿಫಲವಾಗಿದೆ.
ಇನ್ನು ಸರ್ಕಾರವು ಪ್ರತಿ ಕೆಜಿ ಈರುಳ್ಳಿಗೆ 175 ರೂ(Onion). ದರ ನಿಗದಿತ ಮಾಡಿದ್ದರೂ, ಪ್ರತಿ ಕೆಜಿಗೆ 230 ರಿಂದ 250 ಪಾಕಿಸ್ತಾನಿ ರೂಪಾಯಿಗಳ ನಡುವೆ ನಿಗದಿತ ದರದ ವಿರುದ್ಧ ಈರುಳ್ಳಿಯನ್ನು
ಮಾರಾಟ ಮಾಡಲಾಗುತ್ತಿದೆ. ಪ್ರತಿ ಡಜನ್ ಮೊಟ್ಟೆಯ ಬೆಲೆ ಲಾಹೋರ್ನಲ್ಲಿ(Lahore) 400 ತಲುಪಿದೆ. ಇನ್ನು ಕೋಳಿಯನ್ನು ಅಲ್ಲಿ ಕೆಜಿಗೆ PKR 615 ಕ್ಕೆ ಮಾರಾಟ ಮಾಡಲಾಗುತ್ತಿದೆ. ಕಳೆದ ತಿಂಗಳು,
ಆರ್ಥಿಕ ಸಮನ್ವಯ ಸಮಿತಿಯು (ಇಸಿಸಿ) ರಾಷ್ಟ್ರೀಯ ಬೆಲೆ ಮೇಲ್ವಿಚಾರಣಾ ಸಮಿತಿಗೆ (ಎನ್ಪಿಎಂಸಿ) ಬೆಲೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಗ್ರಹಣೆ ಮತ್ತು ಲಾಭದಾಯಕತೆಯನ್ನು ಪರಿಶೀಲಿಸುವ
ಕ್ರಮಗಳಿಗಾಗಿ ಪ್ರಾಂತೀಯ ಸರ್ಕಾರಗಳೊಂದಿಗೆ (Government) ನಿಯಮಿತ ಸಮನ್ವಯವನ್ನು ಮುಂದುವರಿಸಲು ನಿರ್ದೇಶನ ನೀಡಿತ್ತು. ಆದರು ಪಾಕಿಸ್ತಾನದಲ್ಲಿ ಆಡಳಿತ ವ್ಯವಸ್ಥೆಯೂ ಕುಸಿದಿದ್ದು,
ಯಾವುದೇ ನೀತಿಗಳು (Financial Crisisin Pakistan) ಅನುಷ್ಠಾನವಾಗುತ್ತಿಲ್ಲ.
ಏತನ್ಮಧ್ಯೆ, 2023-24 ರ ಆರ್ಥಿಕ ವರ್ಷದಲ್ಲಿ ಕಳೆದ ವರ್ಷ ನವೆಂಬರ್ (November) ಅಂತ್ಯದ ವೇಳೆಗೆ ಪಾಕಿಸ್ತಾನದ (Pakasthana) ಮೇಲಿನ ಒಟ್ಟು ಸಾಲದ ಹೊರೆ 63,399 ಟ್ರಿಲಿಯನ್ ಪಾಕಿಸ್ತಾನಿ
ರೂಪಾಯಿಗಳಿಗೆ (PKR) ಏರಿದೆ. ಉಸ್ತುವಾರಿ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಒಟ್ಟು ಸಾಲವು 12.430 ಟ್ರಿಲಿಯನ್ PKR ಗಿಂತ ಹೆಚ್ಚಾಗಿದೆ. 40.956 ಟ್ರಿಲಿಯನ್ ದೇಶೀಯ ಸಾಲಗಳು ಮತ್ತು 22.434
ಟ್ರಿಲಿಯನ್ ಅಂತಾರಾಷ್ಟ್ರೀಯ (Trillion international) ಸಾಲಗಳು ಸೇರಿದಂತೆ ಒಟ್ಟಾರೆ ಸಾಲದ ಹೊರೆಯು 63.390 ಟ್ರಿಲಿಯನ್ಗೆ ಸಾಲ ಏರಿದೆ. ಇತ್ತೀಚೆಗಷ್ಟೇ ವಿಶ್ವಬ್ಯಾಂಕ್ ವರದಿಯೊಂದು ಪಾಕಿಸ್ತಾನದ
ಆರ್ಥಿಕ ಅಭಿವೃದ್ಧಿಯು ಕೇವಲ ಗಣ್ಯರಿಗೆ ಸೀಮಿತವಾಗಿದೆ ಎಂದು ಹೇಳಿದೆ. ಇದರ ಪರಿಣಾಮವಾಗಿ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶವು ತನ್ನ ಸಹ ದೇಶಗಳಿಗಿಂತ ಹಿಂದುಳಿದಿದೆ ಎಂದು ಪಾಕ್
ವರ್ನಾಕ್ಯುಲರ್ ಮೀಡಿಯಾ ವರದಿ ಮಾಡಿದೆ.
ಇದನ್ನು ಓದಿ: ಲೋಕಸಭಾ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ; ಕೈಗೆ ಭಾರೀ ಆಘಾತ ನೀಡಿದ ಮಮತಾ ಬ್ಯಾನರ್ಜಿ..!