ಕೋವಿಡ್ ನಿಯಮ ಉಲ್ಲಂಘನೆ: ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ವಿರುದ್ಧ ಎಫ್‌ಐಆರ್

ಮುಂಬೈ, ಜೂ. 03: ಕೊರೊನಾ ನಿಯಮ ಉಲ್ಲಂಘಿಸಿ ವಿನಾಕಾರಣ ಸಾರ್ವಜನಿಕ ಸ್ಥಳದಲ್ಲಿ ಓಡಾಡಿದ ಕಾರಣಕ್ಕೆ ನಟ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ದಿಶಾ ಮತ್ತು ಟೈಗರ್​ ಇಬ್ಬರೂ ಬುಧವಾರ(ಜೂ.2) ಜಿಮ್​ ಮುಗಿಸಿ ತಮ್ಮ ಐಷಾರಾಮಿ ಕಾರಿನಲ್ಲಿ ಮುಂಬೈ ಸುತ್ತಾಟ ನಡೆಸೋಕೆ ಮುಂದಾಗಿದ್ದಾರೆ. ದಿಶಾ ಕಾರಿನಲ್ಲಿ ಮುಂಭಾಗದಲ್ಲಿ ಕೂತಿದ್ದರೆ ಟೈಗರ್​ ಹಿಂಭಾಗದಲ್ಲಿ ಕೂತಿದ್ದರು. ಬಾಂದ್ರಾದ ಬ್ಯಾಂಡ್​​ಸ್ಟ್ಯಾಂಡ್​ ಸಮೀಪ ಎರಡನೇ ರೌಂಡ್ ಹಾಕುವಾಗ ಪೊಲೀಸರು ಇವರನ್ನು ತಡೆದಿದ್ದಾರೆ. ನಂತರ ಇವರ ಆಧಾರ್​ ಕಾರ್ಡ್​ ಪರಿಶೀಲಿಸಲಾಯಿತು. ಇತರ ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಪೊಲೀಸರು ಬಿಟ್ಟುಕಳುಹಿಸಿದ್ದಾರೆ. ಅಲ್ಲದೆ, ಸುಖಾಸುಮ್ಮನೆ ಸುತ್ತಾಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ವರದಿ ಆಗಿತ್ತು. ಆದರೆ ಈಗ ಎಫ್​ಐಆರ್​ ದಾಖಲಾಗಿರುವುದು ತಿಳಿದುಬಂದಿದೆ.

ಬಾಂದ್ರಾ ಸುತ್ತಮುತ್ತ ಟೈಗರ್​ ಶ್ರಾಫ್​ ಮತ್ತು ದಿಶಾ ಪಟಾನಿ ಅನವಶ್ಯಕವಾಗಿ ತಿರುಗಾಡುತ್ತಿರುವುದು ಗಮನಕ್ಕೆ ಬಂತು. ಅವರನ್ನು ತಡೆದು ಪರಿಶೀಲನೆ ನಡೆಸಿದಾಗ ಅವರಿಂದ ಸೂಕ್ತ ಉತ್ತರ ಸಿಗಲಿಲ್ಲ. ಹೊರಗಡೆ ಸುತ್ತಾಡುತ್ತಿರುವುದಕ್ಕೆ ಸರಿಯಾದ ಕಾರಣವನ್ನು ಅವರು ನೀಡಿಲ್ಲ. ಐಪಿಸಿ ಸೆಕ್ಷನ್​ 188 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಅವರನ್ನು ಬಂಧಿಸಿಲ್ಲ’ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

Exit mobile version