ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ; ಕಾಂಗ್ರೆಸ್ ನಾಯಕ ಶೇಖ್ ಹುಸೇನ್ ವಿರುದ್ಧ ಎಫ್ಐಆರ್!

Shiekh Hussain

ಪ್ರಧಾನಿ(Primeminister) ನರೇಂದ್ರ ಮೋದಿ(Narendra Modi) ವಿರುದ್ಧ ಅವಹೇಳನಕಾರಿ(Dergaotary Language) ಭಾಷೆ ಬಳಸಿದ ಆರೋಪದ ಮೇಲೆ ಮಹಾರಾಷ್ಟ್ರ(Maharashtra) ಕಾಂಗ್ರೆಸ್ ನಾಯಕ(Congress Leader)ಶೇಖ್ ಹುಸೇನ್(Sheikh Hussain) ವಿರುದ್ಧ ನಾಗ್ಪುರದಲ್ಲಿ(Nagpur) ಎಫ್ಐಆರ್(FIR) ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಮತ್ತು ಪದಬಳಿಕೆ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಬಿಜೆಪಿ ನಾಯಕರೊಬ್ಬರು ನೀಡಿದ ದೂರಿನ ಮೇರೆಗೆ ಗಿಟ್ಟಿಖಾಡನ್ ಪೊಲೀಸ್ ಠಾಣೆ ಮಂಗಳವಾರ ರಾತ್ರಿ ಎಫ್‌ಐಆರ್ ದಾಖಲಿಸಿದೆ. ಪ್ರಧಾನಿ ಮೋದಿಯವರ ಬಗ್ಗೆ ಪ್ರಶ್ನಿಸಿದಾಗ, ಶೇಖ್ ಹುಸೇನ್ ಅವರು ಕೇವಲ ಹಿಂದಿ ಗಾದೆಯನ್ನು ಬಳಸುತ್ತಿದ್ದೆ ಅಷ್ಟೇ, ಬಿಜೆಪಿ ರಾಜ್ಯದಲ್ಲಿನ ವಾತಾವರಣವನ್ನು ಹಾಳು ಮಾಡಲು ಯತ್ನಿಸುತ್ತಿದೆ ಮತ್ತು ಕಾಂಗ್ರೆಸ್ ನಾಯಕರನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ.

ನ್ಯಾಷನಲ್ ಹೆರಾಲ್ಡ್(National Herald) ಮನಿ ಲಾಂಡರಿಂಗ್(Money Laundering)ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು(Rahul Gandhi) ಜಾರಿ ನಿರ್ದೇಶನಾಲಯ (ED) ಪ್ರಶ್ನಿಸಿರುವ ಕುರಿತು ಪ್ರಧಾನಿ ಮೋದಿಯವರನ್ನು ಟೀಕಿಸುವ ಸಂದರ್ಭದಲ್ಲಿ ನಾಗ್ಪುರ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಶೇಖ್ ಹುಸೇನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸೋಮವಾರ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ವಂಶಸ್ಥರನ್ನು ಬೆಂಬಲಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ವೇದಿಕೆಯ ಮೇಲೆ ನಿಂತು ಮಾತನಾಡುವಾಗ ನರೇಂದ್ರ ಮೋದಿ ಸರ್ಕಾರ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡಿದೆ. ಮೋದಿ ಹೀಗೆ ಮುಂದುವರೆದರೆ ನಾಯಿಯಂತೆ ಸಾಯುತ್ತಾರೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದರು. ಈ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ವಿರೋಧಿಸಿ ಕಾಂಗ್ರೆಸ್ ನಾಯಕ ಶೇಖ್ ಹುಸೇನ್ ವಿರುದ್ಧ ಪ್ರಕರಣ ದಾಖಲಿಸಿದೆ !

Exit mobile version