Bengaluru : ನಟ ಉಪೇಂದ್ರ (FIR registered against Upendra) ಆಕ್ಷೇಪಾರ್ಹ ಭಾಷೆ ಬಳಸಿದ ಘಟನೆ ಇದೀಗ ಗಂಭೀರ ಸ್ವರೂಪ ತಾಳಿದೆ. ಆಗಸ್ಟ್ 13 ರಂದು ಉಪೇಂದ್ರ ವಿರುದ್ಧ
ಎಫ್ಐಆರ್(FIR) ದಾಖಲಾಗಿತ್ತು. ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್(Notice) ಜಾರಿ ಮಾಡಲಾಗಿದೆ. ತಪ್ಪಿನ ಅರಿವಾದ ನಂತರ ಉಪೇಂದ್ರ ಕ್ಷಮೆ ಕೇಳಿದ್ದಾರೆ. ಆದರೆ,
ಕೆಲವರು ಈ ತಪ್ಪನ್ನು ಕ್ಷಮಿಸಲಿಲ್ಲ. ಕೆಲವರು ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಆದ್ದರಿಂದ, ಉಪೇಂದ್ರ ಅವರಿಗೆ ಇದೀಗ ತೊಂದರೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಪ್ರಕರಣ
ಯಾವ ರೀತಿ ತಿರುವು ಪಡೆಯುತ್ತದೆ ಎಂಬುದನ್ನು (FIR registered against Upendra) ಕಾದು ನೋಡಬೇಕಿದೆ.

ಆಗಸ್ಟ್ 12ರಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ(Facebook Page) ರಿಯಲ್ ಸ್ಟಾರ್’ ಉಪೇಂದ್ರ(Real star Upendra) ಅವರು ಲೈವ್(Live) ಬಂದು, ಪ್ರಜಾಕೀಯ (Prajakeeya)
ಪಕ್ಷದ ಬಗ್ಗೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅವರು ಅವರು ‘ಊರು ಅಂದ್ಮೇಲೆ ಹೊಲೆಗೇರಿ ಇರತ್ತೆ’ ಎಂಬ ಗಾದೆ ಮಾತನ್ನು ಬಳಸಿದ್ದರು. ವಿವಾದಕ್ಕೆ ಇದೇ ವಿಷಯ ಕಾರಣವಾಗಿದ್ದು, ದಲಿತ
ಸಮುದಾಯದ ಆಕ್ರೋಶಕ್ಕೆ ಉಪೇಂದ್ರ ಹೇಳಿಕೆಯು ಕಾರಣವಾಗಿದೆ. ಉಪೇಂದ್ರ ಅವರ ಹೇಳಿಕೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ, ಆ ಬಗ್ಗೆ ಕೂಡಲೇ ಉಪೇಂದ್ರ ಅವರು ಕ್ಷಮೆ ಕೇಳಿದ್ದಾರೆ.
ಆದರೆ ಇದೀಗ ಉಪೇಂದ್ರ ವಿರುದ್ಧ ದೂರು (FIR registered against Upendra) ಕೂಡ ದಾಖಲಾಗಿದೆ.
ಉಪ್ಪಿ ವಿರುದ್ಧ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ವಿರುದ್ಧ ದೂರು ದಾಖಲಾಗಿದೆ. ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಚೆನ್ನಮ್ಮನಕೆರೆ ಅಚ್ಚುಕಟ್ಟು(Chennammakere
Achukattu) ಪೊಲೀಸ್ ಠಾಣೆಯಲ್ಲಿ (Police Station) ಎಫ್ಐಆರ್ ಸಹ ದಾಖಲಾಗಿದೆ. ನಟ ಉಪೇಂದ್ರಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಕೂಡಲೇ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಉಪೇಂದ್ರಗೆ ಸೂಚಿಸಲಾಗಿದೆ. ಬೆಂಗಳೂರಿನ ಕತ್ರಿಗುಪ್ಪೆ(Katriguppe) ಮತ್ತು ಸದಾಶಿವನಗರದಲ್ಲಿರುವ (Sadashiva nagara) ನಟನ ಮನೆಗಳಿಗೆ ಪೊಲೀಸರು
ನೋಟಿಸ್ ಜಾರಿ ಮಾಡಿದ್ದಾರೆ. ಇದೀಗ ವಾಟ್ಸಾಪ್ (WhatsApp) ಮೂಲಕ ಅಧಿಸೂಚನೆಗಳನ್ನು ಕೂಡ ಕಳುಹಿಸಲಾಗಿದೆ.
ಇದನ್ನೂ ಓದಿ : 1,695 ಅನಧಿಕೃತ ಶಾಲೆಗಳ ವಿರುದ್ಧ ಏಕಾಏಕಿ ಕ್ರಮದ ಬದಲು, ಹಂತ ಹಂತವಾಗಿ ಮುಚ್ಚಲು ಕ್ರಮ
ಈ ವಿಚಾರವು ಗಂಭೀರವಾಗುತ್ತಿದ್ದಂತೆ ಸ್ಥಳ ಮಹಜರು ಕೂಡ ಪ್ರಕರಣ ಸಂಬಂಧ ನಡೆಯಲಿದೆ. ಪೊಲೀಸರು ಉಪೇಂದ್ರ ಅವರು ವಿಡಿಯೋ(Video) ಮಾಡಿದ ಜಾಗದ ಸ್ಥಳ ಮಹಜರನ್ನು ಮಾಡಲಿದ್ದಾರೆ.
ಈ ಪ್ರಕ್ರಿಯೆಯು ದೂರುದಾರ ಸಮ್ಮುಖದಲ್ಲೇ ನಡೆಯಲಿದೆ.
ಕ್ಷಮೆ ಕೇಳಿದ್ದ ಉಪೇಂದ್ರ
ಉಪೇಂದ್ರ ಅವರ ಆ ಒಂದು ಹೇಳಿಕೆಯು ಎಲ್ಲೆಡೆ ವಿವಾದ ಆಗುತ್ತಿದ್ದಂತೆಯೇ, ಆ ವಿಡಿಯೋವನ್ನು ಆಗಲೇ ಡಿಲೀಟ್(Delete) ಮಾಡಿದ್ದರು ಅಷ್ಟೇ ಅಲ್ಲದೆ ಈ ಬಗ್ಗೆ ಒಂದು ಪೋಸ್ಟ್ (Post) ಅನ್ನು
ಫೇಸ್ಬುಕ್ನಲ್ಲಿ ಹಂಚಿಕೊಂಡು ಉಪೇಂದ್ರ, ‘ಇಂದು ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಇನ್ಸ್ಟಾಗ್ರಾಮ್(Instagram) ಮತ್ತು ಫೇಸ್ಬುಕ್ ನೇರ ಪ್ರಸಾರದಲ್ಲಿ ಬಳಸಿದ್ದು.. ಹಲವರ ಭಾವನೆಗಳಿಗೆ ಅದರಿಂದ
ಧಕ್ಕೆ ಉಂಟಾಗಿರುವುದು ನನಗೆ ಗೊತ್ತಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಿಂದ(Social Media) ಆ ಲೈವ್ ವಿಡಿಯೋವನ್ನು ನಾನು ಡಿಲೀಟ್(Delete) ಮಾಡಿರುತ್ತೇನೆ ಮತ್ತು ನನ್ನ ಈ ಮಾತಿಗೆ ಕ್ಷಮೆಯಿರಲಿ..’ ಎಂದು ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ : 2025-26ನೇ ಸಾಲಿನಿಂದ 1ನೇ ತರಗತಿ ಪ್ರವೇಶ ಪಡೆಯಲು ಮಗುವಿಗೆ 6 ವರ್ಷ ಕಡ್ಡಾಯ; ಹೈಕೋರ್ಟ್
ಇನ್ನು ಉಪೇಂದ್ರ ಅವರ ಸಿನಿಮಾ ವಿಚಾರ ನೋಡುವುದಾದರೆ ಹಲವು ಸಿನಿಮಾ ಕೆಲಸಗಳಲ್ಲಿ ಉಪೇಂದ್ರ ಅವರು ಬ್ಯುಸಿ ಆಗಿದ್ದಾರೆ. ಮುಂದೆ ಸೆಪ್ಟೆಂಬರ್ 18ರಂದು ಅವರ ನಟನೆಯ ‘ಬುದ್ಧಿವಂತ 2’
(Buddivanta 2) ಸಿನಿಮಾ ರಿಲೀಸ್(Release) ಆಗಲಿದೆ. ಇದೀಗ ಅವರ ಈ ಚಿತ್ರ ರಿಲೀಸ್ ಆಗುವ ಸಂದರ್ಭದಲ್ಲೇ ಅವರು ಇಂತಹ ಒಂದು ವಿವಾದ ಮಾಡಿಕೊಂಡಿದ್ದಾರೆ.ಅಷ್ಟೇ ಅಲ್ಲದೆ ಉಪ್ಪಿ ‘ಯುಐ’
(UI) ಚಿತ್ರದ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಸದ್ಯ ಇತ್ತೀಚಿಗಷ್ಟೇ ತೆರೆಗೆ ಬಂದ ‘ಕಬ್ಜ’ (Kabza)ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
ಮತ್ತೊಂದು ಕೇಸ್ ಕೂಡ ದಾಖಲು..
ಉಪೇಂದ್ರ ವಿರುದ್ಧ ದೂರು ದಾಖಲನ್ನು ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ (Bhairappa Harish Kumar) ಅವರು ಮಾಡಿದ್ದಾರೆ. ಕೇಸ್ ಹಲಸೂರು
(Halasuru) ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರಶ್ಮಿತಾ ಅನೀಶ್