Bengaluru: ಶುಕ್ರವಾರ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳೊಂದಿಗೆ ಸಮಗ್ರ ಶಿಕ್ಷಣ (about unauthorized schools action) ಅಭಿಯಾನ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ(Madhu Bangarappa) ಮಾತನಾಡಿ ರಾಜ್ಯದಲ್ಲಿ ನೋಂದಣಿ ಆಗದೇ ಇರುವಂತಹ ಶಾಲೆಗಳು ಹಾಗೂ ಹೆಚ್ಚುವರಿ ತರಗತಿಗಳ
ಆರಂಭವನ್ನು ಅನುಮತಿ ಪಡೆಯದೆ ನಡೆಸುತ್ತಿರುವ ಶಾಲೆಗಳನ್ನು ಸೇರಿ 1,695 ಅನಧಿಕೃತ ಶಾಲೆಗಳು (Unauthorized schools)ರಾಜ್ಯಾದ್ಯಂತ ಇದ್ದು ಇವುಗಳ ಬಗ್ಗೆ ಏಕಾಏಕಿ ಕ್ರಮ ಕೈಗೊಳ್ಳುವ
ಬದಲಾಗಿ ಮಕ್ಕಳ ಹಿತದೃಷ್ಟಿಯಿಂದ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅನಧಿಕೃತ ಶಾಲೆಗಳನ್ನು ಆ.14ರೊಳಗೆ ಮುಚ್ಚಿಸುವಂತೆ ಆದೇಶ ಹೊರಡಿಸಲಾಗಿದೆ. ಶಾಲೆಗಳನ್ನು ಮುಚ್ಚಿಸುವುದು ನಮಗೆ ಏನೂ ದೊಡ್ಡ ವಿಷಯವಲ್ಲ, ಆದರೆ ಸದ್ಯದ ಮಟ್ಟಿಗೆ ಆ ಶಾಲೆಗಳಲ್ಲಿ
ಓದುತ್ತಿರುವ ಮಕ್ಕಳ ಹಿತ ಕಾಯುವುದು ಕೂಡ ನಮ್ಮ ಸರ್ಕಾರದ (Government) ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಹೀಗಾಗಿ ಕ್ರಮ ಜರುಗಿಸಲಾಗುವುದು. ಆಯಾ ಸಮಸ್ಯೆಗಳನ್ನು
ಒಂದೊಂದಾಗಿ ಪರಿಗಣಿಸಿ ಶಾಲೆಗಳ ಮೇಲೆ ಕ್ರಮ (about unauthorized schools action) ಜರುಗಿಸಲಾಗುತ್ತದೆ ಎಂದು ತಿಳಿಸಿದರು.

1,695 ಶಾಲೆಗಳು ಯಾವುವು?:
ರಾಜ್ಯಾದ್ಯಂತ ಅನುಮತಿ ಪಡೆಯದೆ ಉನ್ನತೀಕರಿಸಿರುವ ಶಾಲೆಗಳು 76 ಇವೆ ಹಾಗೂ ಇನ್ನೂ 26 ಶಾಲೆಗಳು ನೋಂದಣಿಯನ್ನೇ (Registration) ಮಾಡಿಲ್ಲ, ಅನುಮತಿ ಪಡೆಯದೆ ಹೆಚ್ಚುವರಿ
ವಿಭಾಗಗಳನ್ನು ಪಡೆದಿರುವ ಶಾಲೆಗಳು 631, ಅನುಮತಿ ಪಡೆಯದೆ ಸ್ಥಳಾಂತರಿಸಿರುವ ಶಾಲೆಗಳು 190, ಇತರ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳು 143, ಒಂದೇ ಕಟ್ಟಡದಲ್ಲಿ ಕೇಂದ್ರ ಮತ್ತು
ರಾಜ್ಯ ಪಠ್ಯಕ್ರಮ (Syllabus) ಬೋಧಿಸುತ್ತಿರುವ ಶಾಲೆಗಳು-495, ಹಾಗೂ ಅನುಮತಿ ಪಡೆಯದೆ ಹಸ್ತಾಂತರ ಮಾಡಿರುವ 15 ಶಾಲೆಗಳು ಸೇರಿ ಒಟ್ಟು 1,695 ಶಾಲೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : 2025-26ನೇ ಸಾಲಿನಿಂದ 1ನೇ ತರಗತಿ ಪ್ರವೇಶ ಪಡೆಯಲು ಮಗುವಿಗೆ 6 ವರ್ಷ ಕಡ್ಡಾಯ; ಹೈಕೋರ್ಟ್
ಒಂದು ವೇಳೆ ಅನಧಿಕೃತ ಶಾಲೆಗಳು ಮತ್ತೆ ಹೊಸದಾಗಿ ಕಂಡುಬಂದಲ್ಲಿ ಈ ವಿಷಯವಾಗಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಮತ್ತೊಮ್ಮೆ ಸುತ್ತೋಲೆ ಹೊರಡಿಸಿ ಈ ಸಂಬಂಧ
ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗುವಂತೆ ಸೂಚಿಸುವುದಾಗಿ ತಿಳಿಸಿದರು.ಅನುಮತಿ ತಿರಸ್ಕರಿಸುವ ಶಾಲೆಗಳಿಗೂ ಮತ್ತೊಮ್ಮೆ ಅವಕಾಶ ಮಾಡಿಕೊಡಲಾಗಿದೆ. ಈ ವೇಳೆ ಶಾಲಾ ಶಿಕ್ಷಣ
ಆಯುಕ್ತೆ ಬಿ.ಬಿ. ಕಾವೇರಿ(B.B Kaveri) ಉಪಸ್ಥಿತರಿದ್ದರು.
ಪಠ್ಯಕ್ರಮ ವಂಚನೆ ಕ್ರಮಕ್ಕೆ ಆಗ್ರಹ:
ಸಾವಿರಾರು ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ(State Curriculum) ಅನುಮತಿ ಪಡೆಯುತ್ತವೆ ನಂತರದಲ್ಲಿ ಕೇಂದ್ರ ಪಠ್ಯಕ್ರಮ (Central Curriculum) ಎಂದು ನಿಯಮಬಾಹಿರವಾಗಿ ಬಿಂಬಿಸಿ
ಜನಸಾಮಾನ್ಯರನ್ನು ವಂಚಿಸುತ್ತಿವೆ. ಕಠಿಣ ಕ್ರಮ ವನ್ನು ಈ ಶಾಲೆಗಳ ವಿರುದ್ಧ ಕೈಗೊಳ್ಳುವಂತೆ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್ ) ಒತ್ತಾಯಿಸಿದೆ.
ಇದನ್ನೂ ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 53 ಹುದ್ದೆಗಳಿಗೆ ನೇರ ನೇಮಕಾತಿ: ಅರ್ಜಿ ಆಹ್ವಾನ… ಇಲ್ಲಿದೆ ಮಾಹಿತಿ
ಶಿಕ್ಷಣ ಸಚಿವರೊಂದಿಗೆ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಕೆಲವು ಶಾಲೆಗಳು ರಾಜ್ಯ ಪಠ್ಯಕ್ರಮವನ್ನು ಬೋಧಿಸುತ್ತಿರುತ್ತವೆ ಆದರೂ ಸಹ ವಿದ್ಯಾರ್ಥಿಗಳಿಗೆ ಐಸಿಎಸ್ಇ (ICSE), ಸಿಬಿಎಸ್ಇ (CBSE),
ಐಜಿಸಿಎಸ್(IGCS) ಪಠ್ಯಕ್ರಮ ಅನುಸರಿಸುತ್ತಿದ್ದೇವೆ ಎಂದು ಅನ್ಯಾಯ ಮಾಡುತ್ತಿದೆ. ಮುಖ್ಯವಾಗಿ ಇಂತಹ ಶಾಲೆಗಳನ್ನು ಗುರುತಿಸಿ ಈ ಶಾಲೆಗಳನ್ನು ಆರ್ಟಿಇ(RTE) ಕಾಯ್ದೆ ನಿಯಮಕ್ಕೆ ಒಳಪಡಿಸಿ ಕ್ರಮ
ಕೈಗೊಳ್ಳಬೇಕು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ (D. Shashi Kumar) ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸದ
ಅನಧಿಕೃತ ಪೂರ್ವ ಪ್ರಾಥಮಿಕ ಶಾಲೆಗಳನ್ನೂ ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಏಕರೂಪದ ಪಠ್ಯಬೋಧನೆಯನ್ನು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ. ಕೆಲ ಹೊಸ ನಿಯಮಗಳನ್ನು ಮಾನ್ಯತೆ ನವೀಕರಣ ಅರ್ಜಿಗಳು
ತಿರಸ್ಕೃತಗೊಂಡಿರುವ ಶಾಲೆಗಳಿಗೆ ರಚಿಸಿ ಅದನ್ನು ಪ್ರಕಟಿಸುವವರೆಗೂ ನ್ಯಾಯಾಲಯದ ಮೊರೆ ಹೋದ ಶಿಕ್ಷಣ ಸಂಸ್ಥೆಗಳಿಗೆ ‘ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿ’ ಅನುಮತಿ ನೀಡಬೇಕು
ಹಾಗೂ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪರಿಗಣಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಶ್ಮಿತಾ ಅನೀಶ್