ಅಗ್ನಿ ಅವಘಡ: ಚೀನಾದ ಕಲ್ಲಿದ್ದಲು ಕಂಪನಿ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ, 11 ಸಾವು, 51 ಜನರಿಗೆ ಗಾಯ

China: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಲುಲಿಯಾಂಗ್ (Luliang) ನಗರದ ಲಿಶಿ ಜಿಲ್ಲೆಯಲ್ಲಿರುವ ಯೋಂಗ್ಜು ಕಲ್ಲಿದ್ದಲು (Fire Accident in China) ಕಂಪನಿಗೆ ಸೇರಿದ ನಾಲ್ಕು ಅಂತಸ್ತಿನ

ಕಟ್ಟಡವೊಂದರಲ್ಲಿ ಇಂದು (ನ.16) ಬೆಳಿಗ್ಗೆ 6:50 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಹನ್ನೊಂದು ಜನರು ಸಾವನ್ನಪ್ಪಿದ್ದು, 51 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ

ದಾಖಲಿಸಲಾಗಿದೆ ಎಂದು ಚೀನಾದ (Fire Accident in China) ಮಾಧ್ಯಮಗಳು ತಿಳಿಸಿದೆ.

ವರದಿಗಳ ಪ್ರಕಾರ ಇಲ್ಲಿಯವರೆಗೆ ಹನ್ನೊಂದು ಜನ ಸಾವನ್ನಪ್ಪಿದ್ದಾರೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗಿದ್ದು, ಇಲ್ಲಿಯವರೆಗೆ 63 ಜನರನ್ನು ಕಟ್ಟಡದಿಂದ ಹೊರಗೆ

ಕರೆದುಕೊಂಡು ಬರಲಾಗಿದೆ. 51 ಜನರಿಗೆ ಗಾಯಗಳಾಗಿದ್ದು, ಅವರನ್ನು ಲುಲಿಯಾಂಗ್ ಫಸ್ಟ್ ಪೀಪಲ್ಸ್ ಆಸ್ಪತ್ರೆಗೆ (First Peoples Hospital) ದಾಖಲಿಸಲಾಗಿದೆ.

ರಕ್ಷಣಾ ಕಾರ್ಯ ಮುಂದುವರಿದಿದ್ದು, ಘಟನೆಯ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಘಟನೆಯ ವಿಡಿಯೋವನ್ನು ಚೀನಾದ Weibo ಸಾಮಾಜಿಕ ಜಾಲತಾಣದಲ್ಲಿ

ಪೋಸ್ಟ್​​​ ಮಾಡಲಾಗಿದ್ದು, ಈ ವಿಡಿಯೋದಲ್ಲಿ ದೊಡ್ಡ ಮಟ್ಟದ ಬೆಂಕಿ (Fire) ಕಟ್ಟಡದಲ್ಲಿ ಕಾಣಿಸಿಕೊಂಡಿದೆ.

ದಟ್ಟವಾದ ಕಪ್ಪು ಹೊಗೆ ಹೊರಹೊಮ್ಮುವುದನ್ನು ಇದರಲ್ಲಿ ಕಾಣಬಹುದಾಗಿದೆ ಘಟನೆ ನಡೆದ ಸ್ಥಳಕ್ಕೆ ಚೀನಾ ಅಗ್ನಿಶಾಮಕ ದಳ ಧಾವಿಸಿದ್ದು, ರಕ್ಷಣಾ ಕಾರ್ಯ ಮುಂದುವರಿಸಿದೆ. ಜುಲೈನಲ್ಲಿ, ಚೀನಾದ

ಈಶಾನ್ಯ ಭಾಗದ ಶಾಲೆಯ ಜಿಮ್‌ನ (Gym) ಮೇಲ್ಛಾವಣಿ ಕುಸಿದು ಹನ್ನೊಂದು ಜನರು ಸಾವನ್ನಪ್ಪಿದರು.

ಒಂದು ತಿಂಗಳ ಹಿಂದೆ, ವಾಯುವ್ಯ ಚೀನಾದಲ್ಲಿ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ (Barbeque Restaurant) ಸ್ಫೋಟ ಸಂಭವಿಸಿ 31 ಜನರು ಸಾವನ್ನಪ್ಪಿದರು. ಅಸುರಕ್ಷತಾ ಮಾನದಂಡಗಳು

ಮತ್ತು ಕಳಪೆ ಕಾಮಗಾರಿಯಿಂದ ಚೀನಾದಲ್ಲಿ ಕೈಗಾರಿಕಾ ಅಪಘಾತಗಳು ಸಾಮಾನ್ಯವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು, ಹೀಗೆ ಅನೇಕ ಘಟನೆಗಳು ನಡೆಯುತ್ತಿದೆ ಎಂದು ಹೇಳಲಾಗಿದೆ.

ಇದನ್ನು ಓದಿ: ಉತ್ತರಕಾಶಿ ಸುರಂಗ ಕುಸಿತ: 5 ದಿನ ಕಳೆದರೂ ಮುಗಿಯದ ರಕ್ಷಣಾ ಕಾರ್ಯಾಚರಣೆ

Exit mobile version