ಶೀಘ್ರದಲ್ಲೇ ಮಧ್ಯಪ್ರದೇಶದ ಇಂದೋರ್‌ನಲ್ಲಿ ಬೋನ್ ಬ್ಯಾಂಕ್ ಪ್ರಾರಂಭ

India

Indore : ಮದ್ಯಪ್ರದೇಶದ (Madhya Pradesh) ಇಂದೋರ್ನಲ್ಲಿರುವ (Indore) ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜು,

ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಪ್ರಗತಿಯೊಂದಿಗೆ ಶೀಘ್ರದಲ್ಲೇ ಬೋನ್ ಬ್ಯಾಂಕ್ (Bone Bank) ಸ್ಥಾಪನೆ ಮಾಡಲು ಮುಂದಾಗಿದೆ.

ಈ ಕುರಿತು ಮಾದ್ಯಮಗಳಿಗೆ ಮಾಹಿತಿ ನೀಡಿರುವ ಮಹಾತ್ಮಗಾಂಧಿ ವೈದ್ಯಕೀಯ ಕಾಲೇಜಿನ ಡೀನ್ ಡಾ ಸಂಜಯ್ ದೀಕ್ಷಿತ್, “ಈ ಮೂಳೆ ಬ್ಯಾಂಕ್ನಲ್ಲಿ ಕೆಟ್ಟ ಮೂಳೆಗಳನ್ನು ಸರಿಪಡಿಸಲಾಗುತ್ತದೆ ಮತ್ತು ಮೂಳೆಗಳನ್ನು ಸುರಕ್ಷಿತವಾಗಿರಿಸಲಾಗುತ್ತದೆ.

ಮೂಳೆ ಮುರಿತವನ್ನು ಹೊಂದಿರುವ ಯಾವುದೇ ವ್ಯಕ್ತಿಯು ಇಲ್ಲಿ ಮೂಳೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಹಳೆ ಮೂಳೆಯನ್ನು ಈ ಬೋನ್ ಬ್ಯಾಂಕ್ ಮೂಲಕ ಬದಲಾಯಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಶೀಘ್ರದಲ್ಲೇ ಜನರು ರಕ್ತದಾನ(Blood Donation) ಮಾಡಿದಂತೆ, ಮೂಳೆಗಳನ್ನು ದಾನ ಮಾಡಲು ಸಾಧ್ಯವಾಗುತ್ತದೆ.

ಈ ಬ್ಯಾಂಕ್‌ನಲ್ಲಿ ಮೈನಸ್ 40 ರಿಂದ 80 ಡಿಗ್ರಿ ತಾಪಮಾನದಲ್ಲಿ ಮೂಳೆಗಳನ್ನು ಸುರಕ್ಷಿತವಾಗಿ (First Bone Bank in Indore) ಇಡಲಾಗುತ್ತದೆ.

ಇದನ್ನೂ ಓದಿ : https://vijayatimes.com/health-tips-of-guava-fruit/

ಮೂಳೆಗಳನ್ನು 6 ತಿಂಗಳಿಂದ 6 ವರ್ಷಗಳವರೆಗೆ ಮೈನಸ್ 20 ಡಿಗ್ರಿಯಲ್ಲಿ (First Bone Bank in Indore) ಇಡಬಹುದು. ಇದು ಮಧ್ಯಪ್ರದೇಶದ ಮೊದಲ ಬೋನ್ ಬ್ಯಾಂಕ್ ಆಗಲಿದೆ. ಈಗಾಗಲೇ ದೇಶದಲ್ಲಿ ಕೇವಲ ದೆಹಲಿ,

ಚೆನ್ನೈ ಮತ್ತು ಮುಂಬೈನಲ್ಲಿ ಮಾತ್ರ ಬೋನ್‌ ಬ್ಯಾಂಕ್‌ಗಳಿವೆ. ಮುಂದಿನ ದಿನಗಳಲ್ಲಿ ಈ ಬ್ಯಾಂಕ್‌ ಮದ್ಯಪ್ರದೇಶ ಸೇರಿದಂತೆ ದೇಶದ ನಾನಾ ಭಾಗದ ಜನರಿಗೆ ಸೇವೆ ಒದಗಿಸಲಿದೆ ಎಂದು ದೀಕ್ಷಿತ್ ಹೇಳಿದ್ದಾರೆ.

ಇನ್ನು ಪ್ರಾಥಮಿಕ ಹಿಪ್ ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳ ಮೂಳೆಯನ್ನು ಬೋನ್ ಬ್ಯಾಂಕ್‌ಗೆ ದಾನ ಮಾಡಲಾಗುತ್ತದೆ. ಅಂದರೆ ಸಾಮಾನ್ಯವಾಗಿ ತಿರಸ್ಕರಿಸಲಾಗುವ, ಹೆಚ್ಚುವರಿ ಮೂಳೆಯನ್ನು ಉಳಿಸಲಾಗುತ್ತದೆ, ಪರೀಕ್ಷಿಸಲಾಗುತ್ತದೆ ಮತ್ತು ಕಸಿ ಮಾಡಲು ಸಂಗ್ರಹಿಸಲಾಗುತ್ತದೆ.

https://fb.watch/g8TLZJVf8u/ ಜಾತ್ರೆಗೂ ಹೋಗಲು ಬೇಕು ಸರ್ಕಾರಿ ಕಾರು!

ಪ್ರಸ್ತುತ, ಭಾರತದಲ್ಲಿ ಕೇವಲ 4 ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಬೋನ್ ಬ್ಯಾಂಕ್‌ಗಳಿವೆ. ಅವುಗಳಲ್ಲಿ ಯಾವುದೂ ಮಧ್ಯ ಭಾರತದಲ್ಲಿಲ್ಲ. ಹೀಗಾಗಿ ಮದ್ಯಪ್ರದೇಶದ ಇಂದೋರ್‌ನಲ್ಲಿ ಸ್ಥಾಪನೆಗೊಂಡಿರುವ ಈ ಬ್ಯಾಂಕ್‌ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
Exit mobile version