ಭಾರತದ ಮೊಟ್ಟ ಮೊದಲ ‘ಪ್ರನಾಳ ಶಿಶು ದುರ್ಗಾ’ ಬಗ್ಗೆ ನಿಮಗೆ ತಿಳಿದಿದೆಯೇ? ; ಇಲ್ಲಿದೆ ಮಾಹಿತಿ ಓದಿ

India : ಭಾರತದ ಮೊಟ್ಟ ಮೊದಲ ಪ್ರನಾಳ ಶಿಶು ಯಾರು ಎನ್ನುವುದು ನಿಮಗೆ ತಿಳಿದಿದೆಯೇ? ಭಾರತದ ಮೊದಲ ಮತ್ತು ವಿಶ್ವದ ಎರಡನೆಯ ಪ್ರನಾಳ ಶಿಶುವೇ(First Test Tube Baby) ದುರ್ಗಾ ಅಲಿಯಾಸ್ ಕಾನುಪ್ರಿಯಾ ಅಗರ್ವಾಲ್.

ಸದ್ಯ ಕಾನುಪ್ರಿಯಾ 44ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇನ್ನು, ದೇಶದ ಮೊದಲ ಪ್ರನಾಳ ಶಿಶುವನ್ನು(First Test Tube Baby) ಸೃಷ್ಟಿಸಿದ ಹೆಗ್ಗಳಿಕೆ ಸಲ್ಲುವುದು ಡಾ.ಸುಭಾಷ್ ಮುಖರ್ಜಿ ಅವರಿಗೆ.

ವಿಶ್ವದ ಮೊತ್ತ ಮೊದಲ ಪ್ರನಾಳ ಶಿಶು ‘ಲೂಯಿಸ್ ಬ್ರೌನ್’ ಜನಿಸಿದ 67 ದಿನಗಳ ಅಂತರದಲ್ಲಿ ಭಾರತದಲ್ಲಿ 1978 ಅಕ್ಟೋಬರ್ 3 ರಂದು ಕೋಲ್ಕತ್ತಾದಲ್ಲಿ(Calcutta) ‘ದುರ್ಗಾ’ ಜನಿಸಿದ್ದರು. ಮಕ್ಕಳಿಲ್ಲದವರ ಪಾಲಿಗೆ ‘ಪ್ರನಾಳ ಶಿಶು’ ವಿಧಾನ ಒಂದು ವರದಾನವೇ ಸರಿ.

ಹೆಣ್ಣು ಹಾಗೂ ಗಂಡಿನಿಂದ ಪಡೆದ ಅಂಡಾಣು ಮತ್ತು ವೀರ್ಯಾಣುವನ್ನು ಸಂಧಿಸುವಂತೆ ಮಾಡಿ ಭ್ರೂಣದ ಆರಂಭದ ಅವಸ್ಥೆಯನ್ನು ಸೃಷ್ಟಿಸಲಾಗುತ್ತದೆ.

ಹೀಗೆ ಪ್ರಯೋಗಾಲಯದಲ್ಲಿಯೇ ಭ್ರೂಣದ ಪ್ರಾರಂಭಿಕ ಸ್ಥಿತಿ ರೂಪುಗೊಳ್ಳುವುದರಿಂದ ಈ ಪ್ರಕ್ರಿಯೆಗೆ ಪ್ರನಾಳ ಶಿಶು ಎಂದು ಹೆಸರು ನೀಡಲಾಗಿದೆ.

ಇದನ್ನೂ ಓದಿ : https://vijayatimes.com/sc-regarding-ews/

ಅಂಡಾಣು ಮತ್ತು ವೀರ್ಯಾಣು ಸಂಯೋಗದ ಬಳಿಕ ಅದನ್ನು ಗರ್ಭಕ್ಕೆ ಸೇರಿಸಲಾಗುತ್ತದೆ, ಈ ಪ್ರಕ್ರಿಯೆ ಯಶಸ್ವಿಯಾದಲ್ಲಿ ಗರ್ಭಿಣಿಯಾಗುವ ಮಹಿಳೆ ಸಹಜವಾಗಿಯೇ ಮಗುವನ್ನು ಪಡೆಯುತ್ತಾಳೆ. 1977-78 ರ ಸಮಯದಲ್ಲಿ ಡಾ.ಸುಭಾಷ್ ಅವರ ಈ ಕ್ರಾಂತಿಕಾರಕ ಸಂಶೋಧನೆಯನ್ನು ಮೆಚ್ಚುವ ಬದಲು ವಿರೋಧ ವ್ಯಕ್ತಪಡಿಸಲಾಗಿತ್ತು.

ಪ್ರನಾಳ ಶಿಶು ದುರ್ಗಾ ಸೃಷ್ಟಿಯನ್ನು ಬಹಿರಂಗ ಪಡಿಸದಂತೆ ಪಶ್ಚಿಮ ಬಂಗಾಳ ಸರ್ಕಾರ(West Bengal Government) ಇವರಿಗೆ ಕಡಿವಾಣ ಹಾಕಿತ್ತು. ಇದರಿಂದ ಹತಾಶರಾದ ಡಾ. ಸುಭಾಷ್ 1981ರಲ್ಲಿ ಸಾವಿಗೆ ಶರಣಾಗಿದ್ದರು.

ಆದರೆ ವಿಶ್ವದ ಮೊದಲ ಪ್ರನಾಳ ಶಿಶು ಲೂಯಿಸ್ ಬ್ರೌನ್ ನನ್ನು ಸೃಷ್ಟಿಸಿದ ಇಂಗ್ಲೆಂಡಿನ ವಿಜ್ಞಾನಿ ರಾಬರ್ಟ್ ಎಡ್ವರ್ಡ್ 2010 ರಲ್ಲಿ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ.


ಅದೇ ರೀತಿ, ಪ್ರನಾಳ ಶಿಶುಗಳು ಬೆಳೆದು ದೊಡ್ಡವರಾದ ನಂತರ ಸಾಮಾನ್ಯ ರೀತಿಯಲ್ಲಿ ಜೀವನ ನಡೆಸಿ ಮಗುವಿಗೆ ಜನ್ಮ ನೀಡಲು ಸಾಧ್ಯವೇ ಎನ್ನುವ ಪ್ರಶ್ನೆ ಹಲವಾರು ಜನರನ್ನು ಕಾಣುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

1986ರ ಆಗಸ್ಟ್ ತಿಂಗಳಿನಲ್ಲಿ ಪ್ರನಾಳ ಶಿಶುವಾಗಿ ಕಣ್ಬಿಟ್ಟಿದ್ದ ಹರ್ಷಾ ಅವರು ಇತ್ತೀಚಿಗೆ ಮುಂಬೈಯ ಜಸ್‌ಲೋಕ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/rahamat-tarikere-about-banaras/

ಡಾ. ಇಂದಿರಾ ಹಿಂದೂಜ ಮತ್ತು ಡಾ. ಕುಸುಮ್ ಜವೇರಿ ಅವರ ಸಹಾಯದಿಂದ ಈ ಸಿಸೇರಿಯನ್ ನಡೆಸಲಾಯಿತು. ಈ ಮೂಲಕ ಐವಿಎಫ್ ಮೂಲಕ ಜನಿಸಿದ ಪ್ರಣಾಳ ಶಿಶು ಮಗು ಮುಂದೆ ಬೆಳೆದು ದೊಡ್ಡವಳಾಗಿ ಮಗುವಿಗೆ ಜನ್ಮ ನೀಡಲು ಸಾಧ್ಯವೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಂತಾಗಿದೆ.

Exit mobile version