ಸೆಲ್ ಬ್ಯಾಕ್ ಪ್ರೋಗ್ರಾಮ್ ಆರಂಭಿಸಿದ ಫ್ಲಿಪ್ ಕಾರ್ಟ್!

flipkart

ಆನ್ಲೈನ್ ವ್ಯವಹಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ ಸೆಲ್ ಬ್ಯಾಕ್ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಹಕರು ಈ ಯೋಜನೆಯಲ್ಲಿ ಸೂಕ್ತ ಬೆಲೆಗೆ ತಮ್ಮ ಹಳೆಯ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಬಹುದಾಗಿದ್ದು, ಇದರ ಮೌಲ್ಯಕ್ಕೆ ಸಮನಾದ ಫ್ಲಿಪ್ಕಾರ್ಟ್ ಎಲೆಕ್ಟ್ರಾನಿಕ್ ಗಿಫ್ಟ್ ವೋಚರ್ ಅನ್ನು ಫ್ಲಿಪ್ಕಾರ್ಟ್ ನೀಡಲಿದೆ. ಗ್ರಾಹಕರು ಈ ಹಿಂದೆ ಮೊಬೈಲ್ ಫೋನ್ ಗಳನ್ನು ಫ್ಲಿಪ್ಕಾರ್ಟ್ ನಲ್ಲಿ ಖರೀದಿಸಿದ್ದಾಗಿರಬಹುದು ಅಥವಾ ಇಲ್ಲದಿರಬಹುದು. ಎಲ್ಲಾ ಹಳೆಯ ಮೊಬೈಲ್ ಫೋನ್ ಗಳನ್ನು ಖರೀದಿಸುವುದಾಗಿ ಫ್ಲಿಪ್ಕಾರ್ಟ್ ತಿಳಿಸಿದ್ದು, ಬೆಂಗಳೂರು ದೆಹಲಿ, ಕೊಲ್ಕತ್ತಾ ಮತ್ತು ಪಾಟ್ನಾ ಸೇರಿದಂತೆ ವಿವಿಧ ನಗರಗಳ 1,700 ಕ್ಕೂ ಹೆಚ್ಚು ಪಿನ್ ಕೋಡ್ ಗಳಲ್ಲಿ ಈ ಮಾರಾಟ ಸೇವೆಯನ್ನು ಪಡೆಯಬಹುದಾಗಿದೆ.


ಯೋಜನೆಯನ್ನು ಆರಂಭ ಮಾಡುವ ಬಗ್ಗೆ ಮಾತನಾಡಿದ ಫ್ಲಿಪ್ಕಾರ್ಟ್ ಗ್ರೋತ್ ಚಾರ್ಟರ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಮುಖ್ಯಸ್ಥ ಪ್ರಕಾಶ್ ಸಿಕಾರಿಯಾ ಅವರು, “ಫ್ಲಿಪ್ಕಾರ್ಟ್ ನಲ್ಲಿ ನಮ್ಮ ಗ್ರಾಹಕರಿಗೆ ಇತ್ತೀಚಿನ ಅಪೇಕ್ಷಿತ ಉತ್ಪನ್ನಗಳನ್ನು ಉತ್ತಮ ಬೆಲೆಯಲ್ಲಿ ಖರೀದಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಟೆಕ್- ಸಕ್ರಿಯಗೊಳಿಸಲಾದ ಪರಿಹಾರಗಳನ್ನು ನೀಡಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.

ಜನರು ತಮ್ಮ ಡಿವೈಸ್ ಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳುವುದನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಅಸಂಘಟಿತರಾಗಿರುವ ಮತ್ತು ನ್ಯಾವಿಗೇಟ್ ಮಾಡಲು ಕಷ್ಟಸಾಧ್ಯವಾಗಿರುವ ಡಿವೈಸ್ ಗಳನ್ನು ಮರು ಮಾರಾಟ ಮಾಡುವ ಮಾರುಕಟ್ಟೆಯು ಬೆಳೆಯುತ್ತಿದೆ. ಫ್ಲಿಪ್ಕಾರ್ಟ್ ನ ಸೆಲ್ ಬ್ಯಾಕ್ ಪ್ರೋಗ್ರಾಂನೊಂದಿಗೆ ನಾವು ಈ ಮಾರುಕಟ್ಟೆಯನ್ನು ಸಂಘಟಿತವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮವನ್ನು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಎಂದು ತಿಳಿಸಿದರು.


ಫ್ಲಿಪ್ ಕಾರ್ಟ್ನಲ್ಲಿ ಹೀಗೆ ಮಾಡಿ ಹೋಸ ಫೋನ್ ಪಡೆಯಿರಿ :

  1. ಗ್ರಾಹಕರು ಫ್ಲಿಪ್ಕಾರ್ಟ್ ಆ್ಯಪ್ಗೆ ಭೇಟಿ ನೀಡಬಹುದು ಮತ್ತು “ಸೆಲ್ ಬ್ಯಾಕ್’’ ಅನ್ನು ಆಯ್ಕೆ ಮಾಡಬೇಕು.
  2. ಗ್ರಾಹಕರು 3 ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಬಳಸಿದ ಮೊಬೈಲ್ ಫೋನ್ ನ ಮೌಲ್ಯ ಪಡೆದುಕೊಳ್ಳಬಹುದು.
  3. ನಂತರ ಕನ್ಫರ್ಮೇಶನ್ ಪೋಸ್ಟ್ ಮಾಡಬೇಕು. ಇದಾದ 48 ಗಂಟೆಯೊಳಗೆ ಮನೆ ಬಾಗಿಲಿಗೆ ಬರುವ ಫ್ಲಿಪ್ಕಾರ್ಟ್ ಪ್ರತಿನಿಧಿ ಹಳೆಯ ಮೊಬೈಲ್ ಫೋನ್ ಪಡೆದುಕೊಳ್ಳುತ್ತಾರೆ.
  4. ಆಗ ಪರಿಶೀಲಿಸಿದ ನಂತರ ಕೆಲವೇ ಗಂಟೆಗಳಲ್ಲಿ ಫ್ಲಿಪ್ಕಾರ್ಟ್ ವೋಚರ್ ಅನ್ನು ಸೆಲ್ ಬ್ಯಾಕ್ ಮೌಲ್ಯಕ್ಕೆ ಅನುಗುಣವಾಗಿ ನೀಡಲಾಗುತ್ತದೆ.
Exit mobile version